World Records: ನಿಮ್ಮನ್ನು ಅಚ್ಚರಿಗೊಳಿಸುವ ವಿಲಕ್ಷಣ ಗಿನ್ನೆಸ್ ವಿಶ್ವ ದಾಖಲೆಗಳು ಇಲ್ಲಿವೆ
ಪ್ರಪಂಚದಲ್ಲಿ ತಮ್ಮ ಹೆಸರಿನಲ್ಲಿ ದಾಖಲೆ ಸೃಷ್ಟಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಈ ಪೈಕಿ ಕೆಲವು ದಾಖಲೆಗಳು ವಿಲಕ್ಷಣವಾಗಿದ್ದರೂ ಅವುಗಳು ತುಂಬಾ ಆಸಕ್ತಿದಾಯಕವಾಗಿವೆ.
Updated on: Sep 18, 2022 | 3:55 PM

Photos of bizarre guinness world records

Photos of bizarre guinness world records

ದಿ ಲಿಕ್ ಎಂಬ ಅಡ್ಡಹೆಸರಿನ ನಿಕ್ ಸ್ಟೋಬರ್ಲ್ ಅತಿ ಉದ್ದದ ನಾಲಿಗೆಯನ್ನು ಹೊಂದಿದ್ದು, 2012 ರಿಂದ ದಾಖಲೆಯನ್ನು ಹೊಂದಿದ್ದಾರೆ. ಅವರ ನಾಲಿಗೆಯು 10.10 ಸೆಂ.ಮೀ. ಉದ್ದವಿದೆ.

ಮೆಕ್ಸಿಕೋದ ವಿಕ್ಟರ್ ಲ್ಯಾರಿ ಗೊಮೆಜ್, ಗೇಬ್ರಿಯಲ್ ಡ್ಯಾನಿ ರಾಮೋಸ್ ಗೊಮೆಜ್, ಲೂಯಿಸಾ ಲಿಲಿಯಾ ಡಿ ಲಿರಾ ಏಸೆವ್ಸ್ ಮತ್ತು ಜೀಸಸ್ ಮ್ಯಾನುಯೆಲ್ ಫಜಾರ್ಡೊ ಏಸೆವ್ಸ್ ಜನ್ಮಜಾತ ಸಾಮಾನ್ಯ ಹೈಪರ್ಟ್ರಿಕೋಸಿಸ್ ಎಂಬ ಸ್ಥಿತಿಯಿಂದ ಬಳಲುತ್ತಿದ್ದಾರೆ. ಪರಿಣಾಮವಾಗಿ ಅವರ ದೇಹದಲ್ಲಿ ಅತಿಯಾದ ಕೂದಲು ಬೆಳೆಯುತ್ತದೆ.

ಜೋ ಎಲ್ಲಿಸ್ ಎಂಬವರು ತನ್ನ ನಾಲಿಗೆಯಿಂದ ವಿದ್ಯುತ್ ಫ್ಯಾನ್ ಅನ್ನು ನಿಲ್ಲಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಫ್ರಾನ್ಸಿಸ್ಕೊ ಡೊಮಿಂಗೊ ಜೋಕ್ವಿನ್ ಎಂಬವರು ಅತ್ಯಂತ ಅಗಲವಾದ ಬಾಯಿಯನ್ನು ಹೊಂದಿದ್ದು, ಏಳು ಇಂಚುಗಳಷ್ಟು ದೊಡ್ಡ ಬಾಯಿಯನ್ನು ಹೊಂದಿದ್ದಾರೆ.

ಡಾಲಿಬೋರ್ ಅವರು ತಮ್ಮ ದೇಹದ ಮೇಲೆ ಅತಿ ಹೆಚ್ಚು ಚಮಚಗಳನ್ನು ಹೊಂದಿಸುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. 79 ಚಮಚಗಳನ್ನು ತಮ್ಮ ದೇಹಕ್ಕೆ ಹೊಂದಿಸುವ ಮೂಲಕ 2016ರಲ್ಲಿ ಈ ದಾಖಲೆ ಬರೆದಿದ್ದಾರೆ.

ಬೆನೆಟನ್ ಗ್ರೂಪ್ ಎಂಬ ಬಟ್ಟೆ ಸಂಸ್ಥೆಯು 1993ರಲ್ಲಿ ಫ್ರಾನ್ಸ್‌ನ ಪ್ಲೇಸ್ ಡೆ ಲಾ ಕಾಂಕಾರ್ಡ್‌ನಲ್ಲಿರುವ ಒಬೆಲಿಸ್ಕ್‌ನಲ್ಲಿ ಬೃಹತ್ 72 ಅಡಿ ಕಾಂಡೋಮ್ ಅನ್ನು ಅಳವಡಿಸಿದಾಗ ಇತಿಹಾಸವನ್ನು ಸೃಷ್ಟಿಸಿತು. ವಿಶ್ವ ಏಡ್ಸ್ ದಿನವನ್ನು ಗುರುತಿಸಲು ಇದನ್ನು ಮಾಡಲಾಗಿದೆ.

ಮಾಸಿ ಕರ್ರಿನ್ ಕೇವಲ 17 ವರ್ಷ ವಯಸ್ಸಿನವಳಾಗಿದ್ದಾಗಲೇ ವಿಶ್ವ ದಾಖಲೆ ಪ್ರವೇಶಿಸಿದ್ದಾರೆ. ಅವಳ ಕಾಲುಗಳು 135.267 ಸೆ.ಮೀ. ಇದೆ. ಈಕೆ ಒಟ್ಟು 6 ಅಡಿ 10 ಎತ್ತರವಿದ್ದಾಳೆ.




