Viral News: ಜಮ್ಮು ಕಾಶ್ಮೀರಲ್ಲಿ 1,200 ವರ್ಷ ಹಳೆಯದಾದ ಕಪ್ಪು ಕಲ್ಲಿನಿಂದ ಕೆತ್ತಿದ ದುರ್ಗಾದೇವಿ ವಿಗ್ರಹ ಪತ್ತೆ

| Updated By: shruti hegde

Updated on: Sep 01, 2021 | 9:19 AM

ಆಗಸ್ಟ್ 13ನೇ ತಾರೀಕಿನಂದು ಮರಳು ತೆಗೆಯುವಾಗ ಈ ವಿಗ್ರಹ ಸಿಕ್ಕಿದೆ. ಕಾರ್ಮಿಕರಿಂದ ದುರ್ಗಾದೇವಿ ಪುರಾತನ ಶಿಲ್ಪವನ್ನು ಪಡೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Viral News: ಜಮ್ಮು ಕಾಶ್ಮೀರಲ್ಲಿ 1,200 ವರ್ಷ ಹಳೆಯದಾದ ಕಪ್ಪು ಕಲ್ಲಿನಿಂದ ಕೆತ್ತಿದ ದುರ್ಗಾದೇವಿ ವಿಗ್ರಹ ಪತ್ತೆ
ಜಮ್ಮು ಕಾಶ್ಮೀರಲ್ಲಿ 1,200 ವರ್ಷ ಹಳೆಯದಾದ ಕಪ್ಪು ಕಲ್ಲಿನಿಂದ ಕೆತ್ತಿದ ದುರ್ಗಾದೇವಿ ವಿಗ್ರಹ ಪತ್ತೆ
Follow us on

ಜಮ್ಮು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ 1,200 ವರ್ಷಗಳ ಹಳೆಯದಾದ ದುರ್ಗಾ ದೇವಿಯ ವಿಗ್ರಹ ಪತ್ತೆಯಾಗಿದೆ. ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದು, ಕಪ್ಪು ಕಲ್ಲಿನಿಂದ ಕೆತ್ತಿದ ಸುಂದರ ವಿಗ್ರಹವನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತಾದ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಬುದ್ಗಾಮ್ ಜಿಲ್ಲೆಯ ಖಾನ್ ಸಾಹಬ್ ಪ್ರದೇಶದಿಂದ ಈ ಪುರಾತನ ಶಿಲ್ಪವನ್ನು ವಶಪಡಿಸಿಕೊಳ್ಳಲಾಗಿದೆ.

ಆಗಸ್ಟ್ 13ನೇ ತಾರೀಕಿನಂದು ಮರಳು ತೆಗೆಯುವಾಗ ಈ ವಿಗ್ರಹ ಸಿಕ್ಕಿದೆ. ಕಾರ್ಮಿಕರಿಂದ ದುರ್ಗಾದೇವಿ ಪುರಾತನ ಶಿಲ್ಪವನ್ನು ಪಡೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

1,200 ವರ್ಷಗಳ ಹಳೆಯದಾದ ವಿಗ್ರಹ

ಬುದ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾದ ದುರ್ಗಾದೇವಿಯ ಶಿಲ್ಪವನ್ನು ಪತ್ತೆ ಹಚ್ಚಲು ಆರ್ಕೈವ್ಸ್​, ಆರ್ಕಿಯಾಲಜಿ ಮತ್ತು ಮ್ಯೂಸಿಯಂ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಅಧಿಕಾರಿಗಳ ತಂಡವನ್ನು ಕರೆಯಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಪರೀಕ್ಷೆಯ ಸಮಯದಲ್ಲಿ ಈ ವಿಗ್ರಹ ಸುಮಾರು 1,200 ವರ್ಷಗಳ ಹಳೆಯದಾದ ವಿಗ್ರಹ ಎಂಬುದು ತಿಳಿದು ಬಂದಿದೆ. ಈ ಶಿಲ್ಪವನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ದುರ್ಗಾ ದೇವಿ ಸಿಂಹಾಸನದ ಮೇಲೆ ಕುಳಿತಿರುವ ಶಿಲ್ಪವನ್ನು ಕೆತ್ತಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿತವಾದ ಸಾಲಿಗ್ರಾಮ ಶಿಲಾ ಗಣಪ; ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿದೆ ಇಲ್ಲಿನ ಶಿಲ್ಪಕಲೆ

ಹಾವೇರಿಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ದುರ್ಗಾದೇವಿ ಕೆರೆಗೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ

(viral news 1200 years old ancient sculpture found in jammu Kashmir)