3 ಬೈಕ್​ಗಳಲ್ಲಿ ಪ್ರಯಾಣಿಸಿದ 14 ಯುವಕರು, ಮುಂದೇನಾಯಿತು?

| Updated By: ಶ್ರೀದೇವಿ ಕಳಸದ

Updated on: Jan 11, 2023 | 10:53 AM

Bike Stunt : ಉತ್ತರ ಪ್ರದೇಶದ ಈ ಯುವಕರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಣ್ಣಿಟ್ಟು ಇವರನ್ನು ಹುಡುಕಿದ್ಧಾರೆ. ಮೂರೂ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

3 ಬೈಕ್​ಗಳಲ್ಲಿ ಪ್ರಯಾಣಿಸಿದ 14 ಯುವಕರು, ಮುಂದೇನಾಯಿತು?
ಬೈಕ್​ ಸ್ಟಂಟ್​ನಲ್ಲಿರುವ ಯುವಕರು
Follow us on

Viral News : ಈ ವಯಸ್ಸೇ ಅಂಥದ್ದು, ಸಾಹಸವೇ ತನ್ನ ಅಸ್ತಿತ್ವ ಎನ್ನುವಷ್ಟು ಮೈಮರೆತು ನುಗ್ಗುವಂಥದ್ದು. ನಿಯಮಗಳೇ ಇರುವುದು ಮುರಿಯುವುದಕ್ಕೆ ಎಂಬ ಹುಂಬತನದಲ್ಲಿ ಸಾಗುವಂಥದ್ದು. ಇದೀಗ ವೈರಲ್ ಆಗಿರುವ ಈ ಫೋಟೋಗಳನ್ನು ನೋಡಿ. ಮೂರು ಬೈಕ್​ಗಳಲ್ಲಿ ಒಟ್ಟು ಹದಿನಾಲ್ಕು ಜನರು ಚಲಿಸುತ್ತಿದ್ದಾರೆ. ಒಂದು ಬೈಕ್​ನಲ್ಲಿ ಆರು ಜನರು. ಇನ್ನೊಂದೆರಡು ಬೈಕ್​ ನಾಲ್ಕುನಾಲ್ಕು ಜನರು. ಈ ಚಳಿಯಲ್ಲಿ ಬೈಕ್​ನಲ್ಲಿ ಹೋಗಲು ಯಾರಿಗೂ ಥ್ರಿಲ್​ ಉಂಟಾಗದೇ ಇರದು. ಆದರೆ ಹೀಗೆ ಅಪಾಯಕಾರಿ ಸ್ಥಿತಿಯಲ್ಲಿ ಥ್ರಿಲ್​ ಅನುಭವಿಸುವುದು ಎಷ್ಟು ಸರಿ?

ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ಧಾರೆ. ಅಂತೂ ಇವರನ್ನು ಇವರುಗಳ ಬೈಕುಗಳನ್ನ ಪತ್ತೆ ಹಚ್ಚಿ ಬೈಕುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ‘ಮಾಹಿತಿ ತಿಳಿಯುತ್ತಿದ್ದಂತೆ ಈ ಯುವಕರ ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈ ಯುವಕರ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬರೇಲಿಯ ಹಿರಿಯ ಪೊಲೀಸ್​ ಅಧಿಕಾರಿ ಅಖಿಲೇಶ್​ ಕುಮಾರ್ ಚೌರಾಸಿಯಾ ಎಎನ್​ಐ ಸುದ್ದಿ ಸಂಸ್ಥೆಗೆ ತಿಳಿಸಿದ್ಧಾರೆ.

ಕ್ಷಣದ ಥ್ರಿಲ್​ಗಾಗಿ ಜೀವವನ್ನೇ ಕಳೆದುಕೊಳ್ಳಬೇಕೇ? ಎನ್ನುವುದನ್ನು ಈಗಿನ ಯುವಪೀಳಿಗೆಯು ಯೋಚಿಸಬೇಕು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:53 am, Wed, 11 January 23