ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದ ಯುವತಿಗೆ ಹೆರಿಗೆ; ಗರ್ಭಿಣಿ ಎಂದೇ ಗೊತ್ತಿರಲಿಲ್ಲ ಎಂದ ತಾಯಿ!

| Updated By: shruti hegde

Updated on: Sep 01, 2021 | 11:40 AM

Viral News: ನೈಟೌಟ್​ನಲ್ಲಿ ಎಂಜಾಯ್ ಮಾಡುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆಯಾಗಿದೆ. ಮಹಿಳೆಗೇ ಒಮ್ಮೆಲೆ ಅಚ್ಚರಿಯಾಗುವಂತಹ ಘಟನೆ ನಡೆದಿದೆ.

ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದ ಯುವತಿಗೆ ಹೆರಿಗೆ; ಗರ್ಭಿಣಿ ಎಂದೇ ಗೊತ್ತಿರಲಿಲ್ಲ ಎಂದ ತಾಯಿ!
ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದ ಯುವತಿಗೆ ಹೆರಿಗೆ; ಗರ್ಭಿಣಿ ಎಂದೇ ಗೊತ್ತಿರಲಿಲ್ಲ ಎಂದ ತಾಯಿ!
Follow us on

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆ ಹೊಟ್ಟೆ ಪಡೆಯುತ್ತಾಳೆ. ಗರ್ಭಿಣಿಯ ಪ್ರತಿ ಹಂತದಲ್ಲೂ, ಪ್ರತೀ ಕ್ಷಣವನ್ನು ಅನುಭವಿಸುತ್ತಾಳೆ. ಮಗುವಿನ ಚಲನವಲನದಿಂದ ಖುಷಿ ಪಡುತ್ತಾಳೆ. ಇದಕ್ಕೆಲ್ಲ ಅಪವಾದ ಎಂಬಂತೆ ಒಂದು ಘಟನೆ ನಡೆದಿದೆ. ನೈಟೌಟ್​ನಲ್ಲಿ ಎಂಜಾಯ್ ಮಾಡುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆಯಾಗಿದೆ. ಮಹಿಳೆಗೇ ಒಮ್ಮೆಲೆ ಅಚ್ಚರಿಯಾಗುವಂತಹ ಘಟನೆ ನಡೆದಿದೆ.

23 ವರ್ಷದ ಅಮೆರಿಕಾದ ಲವಿನಿಯಾ ಎಂಬ ಯುವತಿ ರಾತ್ರಿ 10 ಗಂಟೆಯ ಹೊತ್ತಿಗೆ ಹೊಟ್ಟೆ ಸೆಳೆಯುತ್ತಿದೆ ಎಂದು ಹೇಳಲಾರಂಭಿಸಿದ್ದಾಳೆ. ಆ ಸಮಯದಲ್ಲಿ ಅವಳು ನೌಟೌಟ್​ನಲ್ಲಿ ಪಾರ್ಟಿ ಮಾಡುತ್ತಿದ್ದಳು. ಸ್ನೇಹಿತರ ಜತೆಗಿದ್ದ ಆಕೆ ತನ್ನ ತಾಯಿಯ ಬಳಿ ಹೋದಳು. ತಕ್ಷಣವೇ ವೈದ್ಯರನ್ನು ಕರೆಸಲಾಯಿತು. ಆಕೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಳೆ ಎಂಬ ಮಾತು ಕೇಳಿ ಮನೆಯವರು ಸೇರಿ ಮಹಿಳೆಯು ಧಂಗಾಗಿದ್ದಾರೆ.

ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಆಕೆ 8 ತಿಂಗಳ ಮಗುವಿನ ಜನ್ಮ ನೀಡಿದ್ದಾಳೆ. ಸಿ-ಸೆಕ್ಷನ್ ಮೂಲಕ ಹೆರಿಗೆ ಆಗಿದೆ. ಈ ಘಟನೆ ಕಳೆದ ತಿಂಗಳು ನಡೆದಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ತಾಯಿಗೆ ಗರ್ಭಾವಸ್ಥೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಹೊಟ್ಟೆ ಕೂಡಾ ಯಾವುದೇ ಆಕಾರ ಪಡೆದುಕೊಂಡಿರಲಿಲ್ಲ. ಆದರೆ ಆಕೆ ಇತ್ತೀಚೆಗೆ ದೇಹದ ತೂಕ ಪಡೆದಿದ್ದಳು. ಲಾಕ್​ಡೌನ್​ನಿಂದಾಗಿ ದೇಹದ ತೂಕ ಹೆಚ್ಚಾಗಿದೆ ಎಂಬ ಭಾವನೆಯಲ್ಲಿದ್ದಳು.

ನಾನು ಇನ್ನೂ ಆಘಾತದಲ್ಲಿಯೇ ಇದ್ದೇನೆ. ಸಮಯ ಸಾಗುತ್ತಿದ್ದಂತೆಯೇ ನಡೆದ ಘಟನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ದೇಹದ ತೂಕ ಹೆಚ್ಚಾದದ್ದು ಲಾಕ್​ಡೌನ್​ನಲ್ಲಿ ಮನೆಯಲ್ಲೇ ಇದ್ದುದರಿಂದ ಎಂದು ನಾನು ಭಾವಿಸಿದ್ದೆ ಎಂದು ಲವಿನಿಯಾ ಹೇಳಿದ್ದಾಳೆ.

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣಗಳನ್ನು ನಾನೂ ಹೊಂದಲಿಲ್ಲ. ಯಾವುದೇ ಊಹೆಯೂ ಸಹ ಇರಲಿಲ್ಲ ಎಂದು ಲುಮಿನಿಯಾ ಹೇಳಿಕೊಂಡಿದ್ದಾರೆ.

ನನ್ನ ಹೆಂಡತಿ ತೂಕ ಹೆಚ್ಚಾಗಿದೆ ಎಂಬ ಮಾತನ್ನು ಈ ಹಿಂದೆ ಆಡಿದ್ದೆವು. ಅದನ್ನು ಬಿಟ್ಟರೆ ಗರ್ಭಾವಸ್ಥೆಯಲ್ಲಿನ ಯಾವುದೇ ಲಕ್ಷಣ ಅವಳಲ್ಲಿ ಕಂಡು ಬಂದಿರಲಿಲ್ಲ. ನಿಜವಾಗಿಯೂ ಆಶ್ಚರ್ಯವಾಗುತ್ತಿದೆ ಎಂದು ಆಕೆಯ ಗಂಡ ಮಾತನಾಡಿದ್ದಾರೆ.

ಅಚ್ಚರಿ ಮೂಡಿಸುವಂತೆ ಯಾವುದೇ ಊಹೆಯೂ ಇಲ್ಲದೇ ಹೆರಿಗೆಯಾದ ಮಹಿಳೆ ಒಬ್ಬಳೇ ಅಲ್ಲ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಹೆಸರಿನ ಇನ್ನೊಬ್ಬ ಮಹಿಳೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ವಿಮಾನ ಹತ್ತಿ ಇಳಿಯುವ ಸ್ಥಳ ತಲುಪುವವರೆಗೆ ಮಹಿಳೆಯ ಮಡಿಲಲ್ಲಿ ಗಂಡು ಮಗುವಿತ್ತು.

ಇದನ್ನೂ ಓದಿ:

Viral Video: ಯುವತಿಯ ಸ್ಟಂಟ್ ನೋಡಿದ್ರೆ ನಿಜವಾಗಿಯೂ ಬೆರಗಾಗ್ತೀರಾ!

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?

(Viral News 23 years old women delivery in night out party)