ಮನೆ ಕಟ್ಟುವಾಗ ಹಾಲ್, ಬೆಡ್ ರೂಂ, ಅಡುಗೆ ಮನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೋ ಬಾತ್ರೂಂಗೂ ಅಷ್ಟೇ ಆದ್ಯತೆ ನೀಡುವ ಕಾಲವಿದು. ಐಷಾರಾಮಿಯಾಗಿ ಕಟ್ಟುವ ಬಾತ್ ರೂಂ ಕೂಡ ಪ್ರತಿಷ್ಠೆಯ ಸಂಕೇತ ಎಂದು ಭಾವಿಸುವವರಿದ್ದಾರೆ. ವಿಶಾಲವಾದ ಬಾತ್ ರೂಂನಲ್ಲಿ ಶವರ್, ಆಧುನಿಕವಾದ ಕಮೋಡ್, ಬಾತ್ ಟಬ್, ಸಿಂಕ್ ಮತ್ತಿತರ ಎಲ್ಲ ಸೌಲಭ್ಯಗಳೂ ಇರಬೇಕೆಂದು ಬಯಸುವವರಿದ್ದಾರೆ. ಆದರೆ, ಇಸ್ರೇಲ್ನ ಜೆರುಸಲೇಂನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ!
ಇಸ್ರೇಲ್ನ ಹಳೆಯ ನಗರವೊಂದರಲ್ಲಿ 2,700 ವರ್ಷಗಳ ಹಿಂದಿನ ಕಲ್ಲಿನ ಅಪರೂಪದ ಟಾಯ್ಲೆಟ್ ಪತ್ತೆಯಾಗಿದೆ. ಕುಳಿತುಕೊಳ್ಳಲು ಆರಾಮದಾಯಕವಾಗುವ ರೀತಿಯಲ್ಲಿ ಕಲ್ಲನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿ ಪುರಾತನ ಪ್ರಾಧಿಕಾರವು ನಯವಾದ, ಕೆತ್ತಿದ ಸುಣ್ಣದ ಕಲ್ಲಿನ ಶೌಚಾಲಯ ಪತ್ತೆಯಾಗಿರುವುದಾಗಿ ತಿಳಿಸಿದೆ. ವಿಶಾಲವಾದ ಮಹಲಿನಲ್ಲಿ ಈ ಟಾಯ್ಲೆಟ್ ಪತ್ತೆಯಾಗಿದೆ.
ಆರಾಮದಾಯಕ ಕುಳಿತುಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಟಾಯ್ಲೆಟ್ನ ಕಲ್ಲಿನ ಕೆಳಗೆ ಆಳವಾದ ಸೆಪ್ಟಿಕ್ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ಪುರಾತನ ಕಾಲದಲ್ಲಿ ಈ ರೀತಿಯ ಖಾಸಗಿ ಟಾಯ್ಲೆಟ್ ನಿರ್ಮಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಆಗೆಲ್ಲ ಬಯಲು ಶೌಚಾಲಯ ಇರುತ್ತಿತ್ತು ಅಥವಾ ಸಾರ್ವಜನಿಕ ಶೌಚಾಲಯ ಇರುತ್ತಿತ್ತು. ಇತ್ತೀಚೆಗೆ ಅಟ್ಯಾಚ್ಡ್ ಬಾತ್ ರೂಂ ನಿರ್ಮಿಸುವ ಟ್ರೆಂಡ್ ಶುರುವಾಗಿದೆ. ಪ್ರಾಚೀನ ಕಾಲದಲ್ಲಿ ಕೆಲವೇ ಕೆಲವು ಟಾಯ್ಲೆಟ್ಗಳು ಪತ್ತೆಯಾಗಿವೆ. ಆದರೆ, ಇಷ್ಟು ಪುರಾತನವಾದ ಟಾಯ್ಲೆಟ್ ಪತ್ತೆಯಾಗಿರಲಿಲ್ಲ.
ಶ್ರೀಮಂತರು ಮಾತ್ರ ಆಗ ಟಾಯ್ಲೆಟ್ಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು. ಈ ಟಾಯ್ಲೆಟ್ ಕಟ್ಟಿಸಿದವರು ಕೂಡ ಶ್ರೀಮಂತರಾಗಿರಬಹುದು. ಅಲ್ಲದೆ, ಈ ಶೌಚಾಲಯವನ್ನು ಬೆಡ್ ರೂಂ ಮತ್ತು ರೀಡಿಂಗ್ ಟೇಬಲ್ ಬಳಿಯಲ್ಲಿಯೇ ನಿರ್ಮಿಸಲಾಗಿತ್ತು. ಒಟ್ಟಾರೆ ಈ ಟಾಯ್ಲೆಟ್ ಈ ಭಾರೀ ಸುದ್ದಿಯಲ್ಲಿದೆ.
ಇದನ್ನೂ ಓದಿ: Viral News: ವರನ ಎದುರೇ ಮದುವೆಯ ಫೋಟೋಸ್ ಡಿಲೀಟ್ ಮಾಡಿದ ಫೋಟೋಗ್ರಾಫರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರ
Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?
Published On - 7:42 pm, Wed, 6 October 21