Viral News: ನಾಯಿ ಬೆಕ್ಕಿನಂತೆ ಕಾಡು ಹಂದಿಯನ್ನು ಸಾಕಿದ ದಂಪತಿಗಳು

|

Updated on: Feb 09, 2024 | 11:03 AM

"ಸಾಕು ನಾಯಿಯಂತೆ ಈ ಕಾಡು ಹಂದಿ ನಮ್ಮ ಮನೆಯನ್ನು ಕಾಯುತ್ತದೆ. ಮನೆಯ ಸಮೀಪ ಅಪರಿಚಿತರು ಕಂಡರೆ ತಕ್ಷಣ ಮನೆಯವರನ್ನು ಎಚ್ಚರಿಸುತ್ತದೆ. ಮುದ್ದಿನ ಹಂದಿ ಮಲಗಲು ಮನೆಯಲ್ಲಿ ಸೋಫಾ, ವಿಶೇಷ ದಿಂಬುಗಳು ಮತ್ತು ಹೊದಿಕೆಗಳ ವ್ಯವಸ್ಥೆಯಿದೆ" ಎಂದು ಟಿಫಾನಿ ಮತ್ತು ಗ್ರೆಗೊರಿ ದಂಪತಿಗಳು ಹೇಳುತ್ತಾರೆ.

Viral News: ನಾಯಿ ಬೆಕ್ಕಿನಂತೆ ಕಾಡು ಹಂದಿಯನ್ನು ಸಾಕಿದ ದಂಪತಿಗಳು
Wild boar
Image Credit source: Pinterest
Follow us on

ಸಾಮಾನ್ಯವಾಗಿ ಮನೆಯಲ್ಲಿ ನಾಯಿ, ಬೆಕ್ಕು, ಮೊಲ, ಕೋಳಿ, ಮೇಕೆ, ಹಂದಿ ಮುಂತಾದ ವಿವಿಧ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ಎಂದಾದರೂ ಮನೆಯಲ್ಲಿ ಕಾಡುಹಂದಿಗಳನ್ನು ಸಾಕುವುದನ್ನು ನೀವು ನೋಡಿದ್ದೀರಾ? ಈ ರೀತಿಯ ಜೀವನಶೈಲಿಯಿಂದ ಇತರರನ್ನು ಅಚ್ಚರಿಗೊಳಿಸುವ ವಿಚಿತ್ರ ವ್ಯಕ್ತಿಗಳಿಗೆ ಜಗತ್ತಿನಲ್ಲಿ ಕೊರತೆಯಿಲ್ಲ. ಬೆಲ್ಜಿಯಂನ ಅಂತಹ ದಂಪತಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ವಾಲ್ಲೋನಿಯಾ ಪ್ರದೇಶದ ಪತಿ ಮತ್ತು ಪತ್ನಿ ಟಿಫಾನಿ ಮತ್ತು ಗ್ರೆಗೊರಿ ದಂಪತಿಗಳು ಕಾಡು ಹಂದಿಯನ್ನು ಸಾಕುತ್ತಿದ್ದಾರೆ. ಕಾಡು ಹಂದಿಯನ್ನು ಮುದ್ದಿನಿಂದ ಸಾಕಿ ಆಸ್ಕರ್ ಎಂದು ಹೆಸರಿಟ್ಟಿದ್ದಾರೆ.

ಒಂದು ವರ್ಷದ ಹಿಂದೆ ವಾಲ್ಲೋನಿಯಾದ ಟಿಫಾನಿ ಮತ್ತು ಗ್ರೆಗೊರಿ ಬೇಟೆಗೆ ಹೋದಾಗ, ಅವರು 700 ಗ್ರಾಂ ತೂಕದ ಕಾಡುಹಂದಿಯನ್ನು ನೋಡಿದ್ದಾರೆ. ಆ ಅಸಹಾಯಕ ಪುಟ್ಟ ಪ್ರಾಣಿಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಡಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಹಂದಿಯನ್ನು ತಮ್ಮೊಂದಿಗೆ ಮನೆಗೆ ಕರೆತಂದಿದ್ದಾರೆ. ‘ಆದರೆ ದಿನಗಳು ಕಳೆದಂತೆ ದಂಪತಿ ಆಸ್ಕರ್‌ನ ಮೇಲೆ ಪ್ರೀತಿ ಹೆಚ್ಚಾಗಿದೆ.ಅದನ್ನು ಹತ್ತಿರದ ಕಾಡಿನಲ್ಲಿ ಬಿಡಬೇಕು ಎಂದು ಭಾವಿಸಿದರೂ, ಅದನ್ನು ಬಿಡಲು ಮನಸಾಗಲಿಲ್ಲ. ಅದಕ್ಕೆ ಪ್ರಾಣಿಗಳ ಆಶ್ರಯದಲ್ಲಿ ಬಿಡಲಾಗಿದೆ. ಆದರೆ ಆಸ್ಕರ್​​ ಒಂದು ಸದಸ್ಯರಂತೆ ಪರಿಗಣಿಸಿದ್ದ ಮತ್ತೆ ಮರಳಿ ಹಂದಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಉತ್ಪನ್ನಗಳ ಬಗ್ಗೆ 3 ಸೆಕೆಂಡ್​​ ವಿಮರ್ಶೆ, ವಾರದಲ್ಲಿ ಈಕೆಗೆ 120 ಕೋಟಿ ರೂ. ಆದಾಯ

ಸಾಕು ನಾಯಿಯಂತೆ ಈ ಕಾಡು ಹಂದಿ ನಮ್ಮ ಮನೆಯನ್ನು ಕಾಯುತ್ತದೆ. ಮನೆಯ ಸಮೀಪ ಅಪರಿಚಿತರು ಕಂಡರೆ ತಕ್ಷಣ ಮನೆಯವರನ್ನು ಎಚ್ಚರಿಸುತ್ತದೆ. ಈ ಹಿಂದೆ 700 ಗ್ರಾಂ ತೂಕವಿದ್ದ ಆಸ್ಕರ್ ಸುಮಾರು ಒಂದು ವರ್ಷದಲ್ಲಿ 120 ಕಿಲೋಗ್ರಾಂಗಳಷ್ಟು ತೂಕ ಹೊಂದಿದೆ. ಜೊತೆಗೆ ಈ ಹಂದಿಗೆ ತರಕಾರಿ, ಬ್ರೆಡ್ ಮತ್ತು ಸಿಹಿತಿಂಡಿಗಳನ್ನು ಬೆರೆಸಿದ 1.5 ರಿಂದ 2 ಕೆಜಿ ಆಹಾರವನ್ನು ನೀಡಲಾಗುತ್ತದೆ. ಈ ಹಂದಿ ಮಲಗಲು ಮನೆಯಲ್ಲಿ ಸೋಫಾ, ವಿಶೇಷ ದಿಂಬುಗಳು ಮತ್ತು ಹೊದಿಕೆಗಳನ್ನು ಸಹ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ