ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ವಿಶೇಷ ದಿನ. ಈ ವಿಶೇಷ ದಿನದಂದು ವಧು ವರರ ಬಟ್ಟೆಯಿಂದ ಹಿಡಿದು ಊಟ ಉಪಚಾರಗಳೆಲ್ಲಾವೂ ಯಾವುದೇ ಕುಂದು ಕೊರತೆಗಳಿಲ್ಲದೇ ಅದ್ಧೂರಿಯಿಂದ ನಡೆಯಬೇಕು ಎಂಬುದು ಪ್ರತಿಯೊಬ್ಬರ ಕನಸು. ಜೊತೆಗೆ ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುವುದುಂಟು. ಆದರೆ ಇಲ್ಲೊಂದು ಖರ್ಚು ಕಡಿಮೆ ಮಾಡಿ ಮದುವೆ ನಡೆಸುವ ಉದ್ದೇಶದಿಂದ ಒಂದು ಒಳ್ಳೆಯ ಪ್ಲಾನ್ ಮಾಡಿದ್ದಾರೆ.
ಹೌದು ಮದುವೆ ಏನಾದರೇನೇ ಹಾಗೇ ಸಾಕಷ್ಟು ಖರ್ಚು ವೆಚ್ಚಗಳಿರುತ್ತದೆ. ಆದರೆ ಇಲ್ಲೊಂದು ಮದುಮೆಯಲ್ಲಿ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಆಲ್ಕೋಹಾಲ್, ಯಾವುದೇ ಪಾನೀಯಗಳ ಬದಲಾಗಿ ಬಂದ ಅತಿಥಿಗಳಿಗೆ ನೀರು ನೀಡಿ ಮದುವೆ ಕಾರ್ಯಕ್ರಮದಲ್ಲಿ ಉಪಚರಿಸಿದ್ದಾರೆ. ಮದುವೆಗೆ ಬಂದ ಅತಿಥಿಗಳಿಗೆ ಬರೀ ನೀರು ನೀಡಿರುವುದು, ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ಮದುವೆ ಎಂದಾಕ್ಷಣ ಪಾರ್ಟಿಗಳಿರುತ್ತದೆ. ಈ ಸಂದರ್ಭದಲ್ಲಿ ದುಬಾರಿ ಬೆಲೆಯ ಸಾಕಷ್ಟು ಆಲ್ಕೋಹಾಲ್, ಪಾನೀಯಗಳನ್ನು ನೀಡಲಾಗುತ್ತದೆ. ಆದರೆ ಈ ಮದುವೆ ಕಾರ್ಯಕ್ರಮದಲ್ಲಿ ದುಬಾರಿ ಪಾನೀಯಗಳ ಬದಲಾಗಿ ಕಡಿಮೆ ವೆಚ್ಚ ಭರಿಸುವ ನೀರಿನ ಬಾಟಲಿಯನ್ನು ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಪಾದಚಾರಿಗಳನ್ನು ಭಯಗೊಳಿಸುವ ಬೈಕ್ ಸವಾರರು! ಇಬ್ಬರು ಅರೆಸ್ಟ್
ನಮ್ಮ ಮದುವೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ. ಆದರೆ ಮದುವೆಯಲ್ಲೂ ಹಣವನ್ನು ಉಳಿಸಲು ಹಲವಾರು ಮಾರ್ಗಗಳಿವೆ. ಆದ್ದರಿಂದ ದುಬಾರಿ ಪಾನೀಯಗಳಿಗೆ ಹಣವನ್ನು ಖರ್ಚು ಮಾಡುವ ಬದಲಿಗೆ ನಾವು ನೀರನ್ನು ನೀಡಿ ಹಣ ಉಳಿಸಿದ್ದೇವೆ ಎಂದು ವಧು ಹೇಳಿರುವುದು ಬಾರೀ ಚರ್ಚೆಯಾಗುತ್ತಿದೆ. ನಾನು ಮತ್ತು ನನ್ನ ಸಂಗಾತಿ ಆಲ್ಕೋಹಾಲ್ ಕುಡಿಯುವುದಿಲ್ಲ. ಆದ್ದರಿಂದ ನಮ್ಮ ಮದುವೆಯಲ್ಲಿ ಯಾವುದೇ ರೀತಿಯ ಮದ್ಯ ಇರುವುದಿಲ್ಲ ಎಂದು ಮದುವೆಮನೆಯಲ್ಲಿ ವಧು ಬಹಿರಂಗವಾಗಿ ಹೇಳಿಕೊಂಡಿದ್ದು, ಟೈಮ್ಸ್ ನೌ ನ್ಯೂಸ್ನಲ್ಲಿ ವರದಿಯಾಗಿದೆ. ಆದರೆ ಈ ವಿವಾಹ ನಡೆದಿದ್ದು ಎಲ್ಲಿ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಇಲ್ಲ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:58 pm, Thu, 23 March 23