ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್ ವಿಡಿಯೋ ಕಂಡುಬರುತ್ತಿದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದನ್ನು ಕಾಣಬಹುದು. ಇದರಲ್ಲಿ ಕೆಲವು ವಿಡಿಯೋಗಳು ಜನರಿಗೆ ಇಷ್ಟವೆಂದೆನಿಸಿದರೂ ಕೂಡ, ಇನ್ನು ಕೆಲವು ಹಾಸ್ಯಸ್ಪದವಾಗಿ ಕಂಡುಬರುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗಾ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಯಾರಿಸಲಾದ ವಿಶೇಷ ಡೆಸರ್ಟ್ ಸಾಬೂನಿನ ನೊರೆಯಿಂದ ತಯಾರಿಸಿದಂತಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಶೇಷ ಡೆಸರ್ಟ್ ಮಾರ್ಚ್ 17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗಾಗಲೇ 20ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.
ಈ ವಿಡಿಯೋದಲ್ಲಿ ದುಬಾರಿ ಹೋಟೆಲ್ ಒಂದರ ಬಾಣಸಿಗರೊಬ್ಬರು ಸಕ್ಕರೆಯ ಪಾಕದಂತಿರುವ ನೊರೆಗಳನ್ನು ತಂದು ಪ್ಲೇಟಿನ ಮೇಲೆ ತೇಲಿಸಿದಂತೆ ಇಡುವುದನ್ನು ಕಾಣಬಹುದು. ಆದರೆ ಈ ವಿಭಿನ್ನ ಡೆಸರ್ಟ್ ಏನು ಎಂಬುದು ತಿಳಿದಿಬಂದಿಲ್ಲ. ಆದರೆ ಇದರ ಬೆಲೆಯಂತೂ ದುಬಾರಿಯಾಗಿರುವುದು ಖಂಡಿತಾ.
ಇದನ್ನೂ ಓದಿ: ಮಟ್ಕಾ ಟೀ ಕುಡಿದಿರುತ್ತೀರಿ, ಆದ್ರೆ ಮಟ್ಕಾ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್ ವಿಡಿಯೋ
ವೀಡಿಯೊವನ್ನು ಫೇಸ್ ಬುಕ್ನ LADbibleAustralia ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್ 17ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 20 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಜೊತೆಗೆ 8.8ಸಾವಿರ ಲೈಕುಗಳು ಹಾಗೂ 1.3ಸಾವಿರಕ್ಕಿಂತಲೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಫೇಸ್ ಬುಕ್ ಬಳಕೆದಾರರೊಬ್ಬರು ಈ ಸಿಹಿಭಕ್ಷ್ಯದ ವಿನ್ಯಾಸವನ್ನು ಸೋಪ್ ಗುಳ್ಳೆಗಳಿಗೆ ಹೋಲಿಸಿದ್ದಾರೆ. ಮತ್ತೊಬ್ಬ ಬಳಕೆದಾರ ನಾನು ಬಾಲ್ಯದಲ್ಲಿ ಹೀಗೆಯೇ ಸೋಪಿನಿಂದ ಗುಳ್ಳೆಗಳನ್ನು ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:08 pm, Sun, 19 March 23