ಗಗನಯಾನಿ ವಧು; ಕಲಾವಿದರ ಕಲ್ಪನೆಗೆ ಒತ್ತಾಸೆ ನೀಡಿದ ಎಐ ತಂತ್ರಜ್ಞಾನ

| Updated By: ಶ್ರೀದೇವಿ ಕಳಸದ

Updated on: Jan 21, 2023 | 1:03 PM

Artificial Intelligence : ಅದ್ಭುತವಾದ ಪರಿಕಲ್ಪನೆ ಇದು ಎಂದು ಕಲಾವಿದ ಜಯೇಶ್​ ಸಚದೇವ ಅವರನ್ನು ಶ್ಲಾಘಿಸುತ್ತಿದ್ದಾರೆ ನೆಟ್ಟಿಗರು. ಸ್ಟಾರ್ ಪ್ಲಸ್ ಬಹೂ ಇನ್ ನಾಸಾ? ಎಂದು ತಮಾಷೆ ಮಾಡಿದ್ದಾರೆ ಕೆಲವರು.

ಗಗನಯಾನಿ ವಧು; ಕಲಾವಿದರ ಕಲ್ಪನೆಗೆ ಒತ್ತಾಸೆ ನೀಡಿದ ಎಐ ತಂತ್ರಜ್ಞಾನ
ಜಯೇಶ್​ ಸಚದೇವರ ಗಗನಯಾತ್ರಿ ವಧು
Follow us on

Viral News : ಕಲಾವಿದರ ಕಲ್ಪನೆಗೆ ಎಣೆಯುಂಟೆ? ತಮ್ಮ ಕಲ್ಪನಾಲೋಕದೊಂದಿಗೆ ವಾಸ್ತವವನ್ನು ಸಂಧಿಸುತ್ತ ಜನರನ್ನು ಮಂತ್ರಮುಗ್ಧರನ್ನಾಗಿಸುವ ಪ್ರತಿಭೆಯೇ ಅವರ ಶಕ್ತಿ. ಇವರ ಕಲ್ಪನೆಗೆ ಒತ್ತಾಸೆ ನೀಡುತ್ತಿರುವ ಕೃತಕ ಬುದ್ಧಿಮತ್ತೆಯಂತೂ (Artificial Intelligence) ಮಾಂತ್ರಿಕಲೋಕವನ್ನೇ ಸೃಷ್ಟಿಸುತ್ತಿದೆ. ಇದೀಗ ವೈರಲ್ ಆಗಿರುತವ ಈ ಫೋಟೋಗಳನ್ನು ನೋಡಿ. ಗಗನಯಾತ್ರಿಗಳನ್ನು ಕಲಾವಿದರೊಬ್ಬರು AI ತಂತ್ರಜ್ಞಾನದ ಮೂಲಕ ವಧುವಿನಂತೆ ಸೃಷ್ಟಿಸಿದ್ಧಾರೆ.

ಜಯೇಶ್ ಸಚದೇವ್ ಎಂಬ ವಿಶುವಲ್ ಆರ್ಟಿಸ್ಟ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇವರ ಖಾತೆಯಲ್ಲಿ ನಿಮ್ಮನ್ನು ಆಲೋಚನೆಗೆ ಹಚ್ಚುವ ಸಾಕಷ್ಟು ಚಿತ್ರಗಳನ್ನು ನೋಡಬಹುದಾಗಿದೆ. ಪ್ರಸ್ತುತ ಪೋಸ್ಟ್​ ಮೂರು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಸುಮಾರು 8,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಇದು ತುಂಬಾ ಚೆನ್ನಾಗಿದೆ. ನಿಮ್ಮ ಕಲ್ಪನೆ ಮತ್ತು ಈ ಕಲೆಯಲ್ಲಿ ವ್ಯಕ್ತಗೊಂಡ ತಾಂತ್ರಿಕ ಪರಿಪೂರ್ಣತೆ ಅದ್ಭುತ ಎಂದಿದ್ದಾರೆ ಒಬ್ಬರು. ಸ್ಟಾರ್​ ಪ್ಲಸ್​ ಬಹೂ ಇನ್​ ನಾಸಾ! ಎಂದು ತಮಾಷೆ ಮಾಡಿದ್ದಾರೆ. ಈ ಕಲ್ಪನೆ ಬಹಳ ಆಸಕ್ತಿರಕವಾಗಿದೆ. ಭವಿಷ್ಯದಲ್ಲಿ ಗಗನಯಾತ್ರಿ ಆಗಲು ಬಯಸುತ್ತಿರುವ ನನಗೆ ಇದು ಸ್ಫೂರ್ತಿಯುತವಾಗಿದೆ ಎಂದಿದ್ಧಾರೆ ಮತ್ತೊಬ್ಬರು. ಈ ಪರಿಕಲ್ಪನೆ ಬಹಳ ವಿಶೇಷವಾಗಿದೆ ಎಂದಿದ್ಧಾರೆ ಮಗದೊಬ್ಬರು.

ಹೇಗಿದೆ ಕಲಾವಿದರ ಕಲ್ಪನೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 1:01 pm, Sat, 21 January 23