Viral News : ನಮ್ಮ ಪೂರ್ವಜರ ಜೀವನಶೈಲಿಯು ವೈಜ್ಞಾನಿಕ ತಳಹದಿಯಿಂದ ಕೂಡಿದೆ. ಆದ್ದರಿಂದ ಸ್ವದೇಶಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ಪ್ರೋತ್ಸಾಹಿಸಬೇಕು. ಈ ಮೂಲಕ ದೇಶೀಯ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಪ್ರತಿಪಾದಿಸುವ ಬಾಬಾ ರಾಮ್ದೇವ್ ಈಗ ಟ್ವಿಟರ್ ಮೂಲಕ ಅಮೇಝಾನ್ನಲ್ಲಿ ಮಾರಾಟಕ್ಕಿರುವ ಬೂದಿಯ ಪ್ಯಾಕೆಟ್ ಸುತ್ತ ಚರ್ಚೆ ಆರಂಭಿಸಿದ್ದಾರೆ. ಪಾತ್ರೆ ತೊಳೆಯಲು ಉಪಯೋಗಿಸುವ ಈ ಬೂದಿಯನ್ನು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿರುವವರೆಲ್ಲ ಒಮ್ಮೆ ಅಮೇಝಾನ್ಗೆ ಹೋಗಿ ನೋಡಿ ಎನ್ನುತ್ತಿದ್ದಾರೆ.
जिस चूल्हे की राख से हमारे पूर्वज बर्तन मांजते थे, पहले उनको अवैज्ञानिक कहकर उसका मजाक बनाया गया.
केमिकल वाले डिशवाश के प्रयोग की आदत डाली, जो कैंसर जैसी बीमारियों का कारण बना।
आज वही चूल्हे की राख अमेज़न जैसी कंपनी 1800 रुपये किलो बेच रही है। pic.twitter.com/ucU6iQSm7g ಇದನ್ನೂ ಓದಿ— स्वामी रामदेव (@yogrishiramdev) February 13, 2023
‘ನಮ್ಮ ಪೂರ್ವಜರು ಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದ ಬೂದಿಯನ್ನು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿದ್ದಿರಿ. ನೀವು ಕೆಮಿಕಲ್ ಡಿಶ್ ವಾಷ್ ಬಳಸುವುದನ್ನು ರೂಢಿ ಮಾಡಿಕೊಂಡಿದ್ದೇ ಕ್ಯಾನ್ಸರ್ನಂಥ ಕಾಯಿಲೆಗಳಿಗೆ ಕಾರಣವಾಯಿತು. ನೋಡಿ ಇಂದು ಅಮೇಝಾನ್ನಂತಹ ಕಂಪನಿ ಅದೇ ಒಲೆಬೂದಿಯನ್ನು ಒಂದು ಕೆ.ಜಿ.ಗೆ ರೂ 1800 ಯಂತೆ ಮಾರಾಟ ಮಾಡುತ್ತಿದೆ.’ ಎಂದು ರಾಮದೇವ ಟ್ವೀಟ್ ಮಾಡಿದ್ದಾರೆ.
ಫೆ.13ರಂದು ಮಾಡಿದ ಈ ಟ್ವೀಟ್ ಅನ್ನು ಈತನಕ ಸುಮಾರು 1.1 ಮಿಲಿಯನ್ ಜನರು ನೋಡಿದ್ದಾರೆ. 20,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 6,000 ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 600 ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : 50 ವರ್ಷಗಳ ನಂತರ 76ನೇ ವಯಸ್ಸಿನಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ ಈ ವ್ಯಕ್ತಿ
ನೀವು ಕೂಡ ಇಂಥ ಬೂದಿಯನ್ನು ಹತ್ತು ರೂಪಾಯಿಗೆ ಪ್ಯಾಕ್ ಮಾಡಿ ಮನೆಮನೆಗೆ ತಲುಪಿಸಿ ಎಂದು ಸಲಹೆ ಕೊಟ್ಟಿದ್ದಾರೆ ಮತ್ತೊಬ್ಬರು. ಭಾರತದ ಪ್ರತೀ ವಸ್ತುವೂ ಸತ್ಯ ಸನಾತನದಿಂದ ಕೂಡಿದೆ. ನೀವು ಅಂಥ ವಸ್ತುಗಳ ಉತ್ಪನ್ನಕ್ಕೆ ಚೆನ್ನಾಗಿ ಮಾರುಕಟ್ಟೆ ಒದಿಗಿಸಿರುವಿರಿ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : 67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್
‘ಲಾಲಾ, ಇದನ್ನು ಪತಂಜಲಿಯಿಂದ ರೂ.400ಕ್ಕೆ ಮಾರಬಹುದು ಯೋಚಿಸಿ’ ಎಂದಿದ್ದಾರೆ ಒಬ್ಬರು. ನೀವು ದಂತಕಾಂತಿ ಪೇಸ್ಟ್ನಲ್ಲಿ ಫ್ಲೊರೈಡ್ ಯಾಕೆ ಮಿಕ್ಸ್ ಮಾಡುತ್ತಿದ್ದೀರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ನೀವು ಎಷ್ಟು ಹಸುಗಳನ್ನು ಸಾಕಿಕೊಂಡಿದ್ದೀರಿ? ಆದರೆ ನಿಮ್ಮ ತುಪ್ಪ ಮಾತ್ರ ನಕಲಿಯಾಗಿದೆ ಎಂದಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:06 pm, Thu, 16 February 23