ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಸುತ್ತಲೂ ನಾವು ತೀವ್ರವಾಗಿ ಮುಜುಗರಕ್ಕೀಡಾಗುವ ಘಟನೆಗಳು ನಡೆದುಬಿಡುತ್ತವೆ. ಅದೇ ರೀತಿ ಯೂನಿಸ್ ಚಂಡಮಾರುತದಿಂದ (Storm Eunice) ಬಲವಾದ ಗಾಳಿ ಬೀಸಿದ ಪರಿಣಾಮ ಬೋಳು ತಲೆಯ ಮನುಷ್ಯನೊಬ್ಬನ ವಿಗ್ ಹಾರಿ ಹೋಗಿರುವ ಘಟನೆ ನಡೆದಿದೆ. ಗಾಳಿಯಲ್ಲಿ ಹಾರಿ ಹೋದ ತನ್ನ ವಿಗ್ ಹಿಡಿಯಲು ಆ ವ್ಯಕ್ತಿ ಕಿಲೋಮೀಟರ್ಗಟ್ಟಲೆ ದೂರ ಓಡಿದ್ದಾರೆ. ಆ ವ್ಯಕ್ತಿ ಶುಕ್ರವಾರ ಬೆಳಿಗ್ಗೆ ಸೈಮನ್ ವಿಲ್ಕ್ಸ್ ಕಾರ್ ಪಾರ್ಕ್‌ನಲ್ಲಿ ನಿಂತಿದ್ದಾಗ ಡೆವೊನ್‌ನ ಬಾರ್ನ್‌ಸ್ಟಾಪಲ್‌ನಲ್ಲಿ ಭಾರೀ ಗಾಳಿ ಬೀಸಿದೆ. ಇದರಿಂದ ಅವರ ವಿಗ್ ತಲೆಯಿಂದ ಹಾರಿಹೋಗಿದೆ.
ಚಂಡಮಾರುತದ ಗಾಳಿಯಲ್ಲಿ ವ್ಯಕ್ತಿಯೊಬ್ಬರ ವಿಗ್ ಹಾರಿ ಹೋಗಿರುವ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸೈಮ್ ಎಂಬಾತನೇ ಈ ರೀತಿಯ ಮುಜುಗರಕ್ಕೀಡಾದ ವ್ಯಕ್ತಿ. ತನ್ನ ವಿಗ್ ಹಾರಿ ಹೋಗುತ್ತಿದ್ದಂತೆ ಸೈಮನ್ ಆಘಾತದಿಂದ ಸುತ್ತಲೂ ನೋಡಿದ್ದಾರೆ. ನಂತರ ಗಾಳಿಯಲ್ಲಿ ಹಾರುತ್ತಿರುವ ತಮ್ಮ ವಿಗ್ ಅನ್ನು ಕಂಡು ಅದರ ಬೆನ್ನತ್ತಿ ಓಡಿದ್ದಾರೆ. ಇದನ್ನು ಅವರ ಸ್ನೇಹಿತರೊಬ್ಬರು ವಿಡಿಯೋ ಮಾಡಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇಂಗ್ಲೆಂಡ್ಗೆ ಈ ದಶಕದಲ್ಲೇ ಅತ್ಯಂತ ಕೆಟ್ಟ ಚಂಡಮಾರುತಗಳು ಅಪ್ಪಳಿಸುತ್ತಿರುವುದರಿಂದ ಲಕ್ಷಾಂತರ ಬ್ರಿಟಿಷರು ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮೆಟ್ ಆಫೀಸ್ ಪ್ರಕಾರ, ಐಲ್ ಆಫ್ ವೈಟ್‌ನಲ್ಲಿ ಗಂಟೆಗೆ 122 ವೇಗದಲ್ಲಿ ಗಾಳಿ ಬೀಸಿದ್ದು, ದಾಖಲೆ ಸೃಷ್ಟಿಸಿದೆ. ಚಂಡಮಾರುತದಿಂದ ಈಗಾಗಲೇ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶಾಲೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಮುಚ್ಚಲಾಗಿದೆ. ಇಲ್ಲಿನ 1,10,000ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ.
ಯೂನಿಸ್ ಚಂಡಮಾರುತದಿಂದಾಗಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿದೆ. ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವಿಫಲ ಯತ್ನ ಮಾಡುವ ಮೊದಲು ವಿಮಾನವೊಂದು ಅಕ್ಕಪಕ್ಕಕ್ಕೆ ತೂಗಾಡುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.
ಇದನ್ನೂ ಓದಿ: Viral News: 3 ವರ್ಷ ಸಿಗರೇಟ್ ಸೇದುವುದು ಬಿಟ್ಟಿದ್ದಕ್ಕೆ ಲಕ್ಷಾಧಿಪತಿಯಾದ; ಹೇಗೆ ಅಂತೀರಾ?
Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?