
ಪ್ರೇಮ ನಿವೇದನೆಯನ್ನು ಹೀಗೆಯೇ ಮಾಡಬೇಕೆಂದೇನಿಲ್ಲ, ಈಗಂತೂ ಸಾಮಾಜಿಕ ಜಾಲತಾಣಗಳು ಸಾಕಷ್ಟು ಟಿಪ್ಸ್ಗಳನ್ನು ಪ್ರೇಮಿಗಳಿಗೆ ನೀಡುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸ್ವಲ್ಪ ಬೇರೆ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ ಅದರ ಪ್ರಕಾರ, ಆಕೆಯನ್ನು ರೆಸ್ಟೋರೆಂಟ್ವೊಂದರಲ್ಲಿ ಕುಳ್ಳಿರಿಸಿ, ಕೇಕ್ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ, ಆಕೆ ತಿನ್ನುವಾಗ ಕೈಯಲ್ಲಿ ಉಂಗುರ ಸಿಗುತ್ತೆ ಆಕೆ ಖುಷಿಯಿಂದ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದೆಲ್ಲಾ ಆತ ಕನಸು ಕಂಡಿದ್ದ ಆದರೆ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.
ಈ ಘಟನೆ ಚೀನಾದಲ್ಲಿ ನಡೆದಿದೆ. ಆಕೆಯ ಹಲ್ಲಿಗೆ ಏನೋ ಸಿಕ್ಕಿದಂತಾಗಿತ್ತು ಆಗ ಆಕೆ, ಕೇಕ್ನ ಗುಣಮಟ್ಟವೇ ಸರಿಯಿಲ್ಲದಿರಬಹುದು ಎಂದು ಭಾವಿಸಿದ್ದಳು. ಈ ಬಗ್ಗೆ ಬೇಕರಿಗೆ ದೂರು ಕೊಡಬೇಕೆಂದುಕೊಂಡಿದ್ದಳು. ಆ ವಿಚಾರವನ್ನು ಆಕೆ ಗೆಳೆಯನ ಬಳಿಯೂ ಹೇಳಿಕೊಂಡಳು. ಆಕೆ ಆ ಉಂಗುರವನ್ನು ಹಲ್ಲಿನಲ್ಲಿ ಕಚ್ಚಿದ್ದರಿಂದ ಅದು ಎರಡು ತುಂಡುಗಳಾಗಿ ಬಿದ್ದಿತ್ತು. ತಕ್ಷಣ ಆಕೆ ಕೇಕ್ ಅನ್ನು ಹೊರಗೆ ಉಗುಳಿದ್ದಳು. ಇದು ಚೀನಾದ ಸಿಚುವಾನ್ ರಾಜ್ಯದಲ್ಲಿ ನಡೆದ ಘಟನೆ.
ಗುವಾಂಗ್ ಆನ್ ನಗರದ ನಿವಾಸಿ ಲಿಯು ರೆಡ್ ನೋಟ್ ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ಓದಿ:Memorable Love Proposal: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ
ಎಲ್ಲಾ ಪುರುಷರ ಗಮನಕ್ಕೆ ಆಹಾರದೊಂದಿಗೆ ಎಂದಿಗೂ ಪ್ರೊಪೋಸ್ ರಿಂಗ್ ಇರಿಸಬೇಡಿ, ಸಂಜೆ ಹಸಿವಿನಿಂದ ಬಂದಿದ್ದೆ, ಗೆಳೆಯ ಕೊಟ್ಟಿದ್ದ ಕೇಕ್ ತಿಂದುಬಿಟ್ಟೆ. ಎಂದು ಆಕೆ ಹೇಳಿಕೊಂಡಿದ್ದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಇಷ್ಟೆಲ್ಲಾ ನಡೆದರೂ ಕೂಡ ಬಳಿಕ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಆದರೆ ಈ ಪ್ರಪೋಸ್ ಮಾಡುವ ವಿಧಾನ ತುಂಬಾ ಅಪಾಯಕಾರಿಯಾಗಿತ್ತು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Tue, 4 February 25