ರೂಮ್ ಬುಕ್ ಮಾಡಿ ಕೊನೆಗೆ ರೈಲ್ವೆ ಸ್ಟೇಷನ್‌ನಲ್ಲಿ ಮಲಗಬೇಕಾಯಿತು; ಓಯೋದಲ್ಲಾದ ಕಹಿ ಅನುಭವ ಹಂಚಿಕೊಂಡ ಮಹಿಳೆ
ಕೈಗೆಟಕುವ ಬೆಲೆಯಲ್ಲಿ ಇಲ್ಲಿ ರೂಮ್ ಸಿಗುತ್ತೆ ಎಂಬ ಕಾರಣಕ್ಕೆ ಹೆಚ್ಚಿನವರು ಓಯೋ ರೂಮ್‌ಗಳನ್ನು ಬುಕ್ ಮಾಡ್ತಾರೆ. ಅದೇ ರೀತಿ ಇಲ್ಲೊಬ್ರು ಮಹಿಳೆ ಕಡಿಮೆ ಬೆಲೆಯೆಂದು ಆನ್‌ಲೈನ್‌ನಲ್ಲಿ ಓಯೋ ರೂಮ್ ಬುಕ್ ಮಾಡಿದ್ದು, ಅವರು ರೂಮ್‌ಗೆ ಚೆಕ್-ಇನ್ ಆದ ಒಂದು ಗಂಟೆಯೊಳಗೆ ಮ್ಯಾನೇಜರ್ ಬಂದು ಇಷ್ಟು ಕಡಿಮೆ ಬೆಲೆಗೆ ಈ ರೂಮ್ ಕೊಡಲು ಸಾಧ್ಯವಿಲ್ಲ, ನೀವು ಹೆಚ್ಚು ಹಣ ಪಾವತಿ ಮಾಡಬೇಕೆಂದು ಹೇಳಿದ್ದು, ಓಯೋ ಕಾಟಕ್ಕೆ ಬೇಸತ್ತು ಕೊನೆಗೆ ಮಹಿಳೆ ಸೀದಾ ಹೋಗಿ ರೈಲ್ವೆ ಸ್ಟೇಷನ್‌ನಲ್ಲಿ ಮಲಗಿದ್ದಾರೆ. ಈ ಕಹಿ ಅನುಭವವನ್ನು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಓಯೋ ಹೋಟೆಲ್ ರೂಮ್ ಭಾರತದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ಎಲ್ಲಾದ್ರೂ ಪ್ರವಾಸ ಅಥವಾ ಕೆಲಸದ ನಿಮಿತ್ತ ಹೋದಾಗ ಓಯೋ ರೂಮ್‌ಗಳನ್ನೇ ಬುಕ್ ಮಾಡ್ತಾರೆ. ಇಂತಹ ಓಯೋ ಒಂದಲ್ಲಾ ಒಂದು ಕಾರಣಕ್ಕೆ ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಚೆಕ್-ಇನ್ ಆದ ಒಂದು ಗಂಟೆಯೊಳಗೆ ರೂಮ್ ಖಾಲಿ ಮಾಡಿಸಿದ್ರು, ಇವ್ರಿಂದ ನಾನು ರೈಲ್ವೆ ಸ್ಟೇಷನ್‌ನಲ್ಲಿ ಮಲಗಬೇಕಾಯಿತು ಎಂದು ಮಹಿಳೆಯೊಬ್ಬರು ಓಯೋ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಹೌದು ಮ್ಯಾನೇಜರ್ ಬಂದು ಇಷ್ಟು ಕಡಿಮೆ ಬೆಲೆಗೆ ಈ ರೂಮ್ ಕೊಡಲು ಸಾಧ್ಯವಿಲ್ಲ, ನೀವು ಹೆಚ್ಚು ಹಣ ಪಾವತಿ ಮಾಡಬೇಕೆಂದು ಹೇಳಿದ್ದು, ಕೊನೆಗೆ ಮಹಿಳೆ ಸೀದಾ ಹೋಗಿ ರೈಲ್ವೆ ಸ್ಟೇಷನ್‌ನಲ್ಲಿ ಮಲಗಿದ್ದಾರೆ. ಈ ಕಹಿ ಅನುಭವವನ್ನು ಗ್ರಾಹಕಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೆಲಸದ ಟ್ರೈನಿಂಗ್ ಇದ್ದ ಕಾರಣ ಬೆಳಗ್ಗೆ ಮನೆಯಿಂದ ಹೊರಟರೆ ಅಲ್ಲಿಗೆ ತಲುಪುವಾಗ ತಡವಾಗುತ್ತದೆ ಎಂಬ ಕಾರಣಕ್ಕೆ ಮುನ್ನಾದಿನದಂದು ಮಹಿಳೆಯೊಬ್ಬರು ಓಯೋ ರೂಮ್ ಬುಕ್ ಮಾಡಿದ್ದರು. ಹೀಗೆ ಓಯೋ ರೂಮ್ ಬುಕ್ ಮಾಡಿ ಕೊನೆಗೆ ರೈಲ್ವೆ ಸ್ಟೇಷನ್‌ನಲ್ಲಿ ಮಲಗಬೇಕಾದ ಪರಿಸ್ಥಿತಿ ಬಂತು ಎಂದು ಓಯೋದಲ್ಲಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಹಿಳೆ ಆನ್‌ಲೈನ್‌ನಲ್ಲಿ ಕಡಿಮೆ ದರದಲ್ಲಿ ರೂಮ್ ಬುಕ್ ಮಾಡಿ ಹೋದ್ರು. ಆದ್ರೆ ಇವರು ಚೆಕ್-ಇನ್ ಆದ ಒಂದು ಗಂಟೆಯ ಬಳಿಕ ಮ್ಯಾನೇಜರ್ ಬಂದು ಬಾಗಿಲು ತಟ್ಟಿ ಇಷ್ಟು ಕಡಿಮೆ ಬೆಲೆಗೆ ರೂಮ್ ಕೊಡಲು ಸಾಧ್ಯವಿಲ್ಲ, ನೀವು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕೆಂದು ಹೇಳಿ ಮಧ್ಯರಾತ್ರಿಯೇ ಮಹಿಳೆಯನ್ನು ಇನ್ನೊಂದು ಓಯೋಗೆ ಕಳುಹಿಸುತ್ತಾರೆ. ಅಲ್ಲಿ ಗ್ರಾಹಕರನ್ನು ಸ್ವಾಗತ ಮಾಡಲು ಯಾರೋಬ್ಬರೂ ಇರಲಿಲ್ಲ, ಈ ಬಗ್ಗೆ ಮಹಿಳೆ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ, ಅವರು ಮಹಿಳೆಯನ್ನು ಇನ್ನೊಂದು ಹೋಟೆಲ್ ರೂಮ್‌ಗೆ ಕಳುಹಿಸುವ ನಿರ್ಧಾರ ಮಾಡಿದ್ರು, ಆದ್ರೆ ಆ ರೂಮ್ ಮಾಲೀಕ ಇದಕ್ಕೆ ಒಲ್ಲೆ ಎಂದಿದ್ದಾನೆ. ಓಯೋದ ಈ ಕಾಟಕ್ಕೆ ಬೇಸತ್ತು, ಬೇರೆ ಹೋಟೆಲ್ ಬುಕ್ ಮಾಡಲು ಸಮಯ ಮೀರಿದ್ದರಿಂದ ಕೊನೆಗೆ ಮಹಿಳೆ ಮಧ್ಯರಾತ್ರಿ ರೈಲ್ವೆ ಸ್ಟೇಷನ್‌ಗೆ ಹೋಗಿ ಮಲಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ, (ಕೃಪೆ: @loverseraaa)
View this post on Instagram
ಈ ಕುರಿತ ಪೋಸ್ಟ್ ಒಂದನ್ನು @loverseraaa ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಒಯೋ ನಿಮ್ಮನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲೂ ಮಲಗುವಂತೆ ಮಾಡುತ್ತದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋ ಹಂಚಿಕೊಳ್ಳುವ ಮೂಲಕ ಚೆಕ್-ಇನ್ ಆದ ಒಂದು ಗಂಟೆಯೊಳಗೆ ರೂಮ್ ಖಾಲಿ ಮಾಡಿಸಿದ್ರು, ಇವ್ರಿಂದ ನಾನು ರೈಲ್ವೆ ಸ್ಟೇಷನ್‌ನಲ್ಲಿ ಮಲಗಬೇಕಾಯಿತು ಎಂದು ಗ್ರಾಹಕಿ ಓಯೋ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಪಾತಿ ರೌಂಡ್ ಶೇಪ್‌ನಲ್ಲಿದೆಯೇ ಎಂದು ಪರೀಕ್ಷಿಸಲು ಎಐ ಟೂಲ್ ಅಭಿವೃದ್ಧಿಪಡಿಸಿದ ಬೆಂಗಳೂರಿನ ಟೆಕ್ಕಿ
ಜನವರಿ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 17.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ನಮಗೂ ಓಯೋದಲ್ಲಿ ಇಂತಹ ಅನುಭವ ಆಗಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಓಯೋ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ, ನನಗೂ ಇಂತಹ ಅನುಭವವಾಗಿದೆʼ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಈ ಓಯೋವನ್ನು ನಿಶೇಧಿಸಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ