Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಕ್​ನೊಳಗೆ ಉಂಗುರವಿಟ್ಟು ಆತ ಪ್ರಪೋಸ್​ ಮಾಡಿದ್ರೆ, ಆಕೆ ಉಂಗುರವನ್ನೇ ತಿಂದುಬಿಡೋದಾ!

ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸ್ವಲ್ಪ ಬೇರೆ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ ಅದರ ಪ್ರಕಾರ, ಆಕೆಯನ್ನು ರೆಸ್ಟೋರೆಂಟ್​ವೊಂದರಲ್ಲಿ ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ, ಆಕೆ ತಿನ್ನುವಾಗ ಕೈಯಲ್ಲಿ ಉಂಗುರ ಸಿಗುತ್ತೆ ಆಕೆ ಖುಷಿಯಿಂದ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದೆಲ್ಲಾ ಆತ ಕನಸು ಕಂಡಿದ್ದ ಆದರೆ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.

ಕೇಕ್​ನೊಳಗೆ ಉಂಗುರವಿಟ್ಟು ಆತ ಪ್ರಪೋಸ್​ ಮಾಡಿದ್ರೆ, ಆಕೆ ಉಂಗುರವನ್ನೇ ತಿಂದುಬಿಡೋದಾ!
ಕೇಕ್ Image Credit source: ಕೇಕ್
Follow us
ನಯನಾ ರಾಜೀವ್
|

Updated on:Feb 04, 2025 | 12:42 PM

ಪ್ರೇಮ ನಿವೇದನೆಯನ್ನು ಹೀಗೆಯೇ ಮಾಡಬೇಕೆಂದೇನಿಲ್ಲ, ಈಗಂತೂ ಸಾಮಾಜಿಕ ಜಾಲತಾಣಗಳು ಸಾಕಷ್ಟು ಟಿಪ್ಸ್​ಗಳನ್ನು ಪ್ರೇಮಿಗಳಿಗೆ ನೀಡುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸ್ವಲ್ಪ ಬೇರೆ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ ಅದರ ಪ್ರಕಾರ, ಆಕೆಯನ್ನು ರೆಸ್ಟೋರೆಂಟ್​ವೊಂದರಲ್ಲಿ ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ, ಆಕೆ ತಿನ್ನುವಾಗ ಕೈಯಲ್ಲಿ ಉಂಗುರ ಸಿಗುತ್ತೆ ಆಕೆ ಖುಷಿಯಿಂದ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದೆಲ್ಲಾ ಆತ ಕನಸು ಕಂಡಿದ್ದ ಆದರೆ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.

ಈ ಘಟನೆ ಚೀನಾದಲ್ಲಿ ನಡೆದಿದೆ. ಆಕೆಯ ಹಲ್ಲಿಗೆ ಏನೋ ಸಿಕ್ಕಿದಂತಾಗಿತ್ತು ಆಗ ಆಕೆ, ಕೇಕ್​ನ ಗುಣಮಟ್ಟವೇ ಸರಿಯಿಲ್ಲದಿರಬಹುದು ಎಂದು ಭಾವಿಸಿದ್ದಳು. ಈ ಬಗ್ಗೆ ಬೇಕರಿಗೆ ದೂರು ಕೊಡಬೇಕೆಂದುಕೊಂಡಿದ್ದಳು. ಆ ವಿಚಾರವನ್ನು ಆಕೆ ಗೆಳೆಯನ ಬಳಿಯೂ ಹೇಳಿಕೊಂಡಳು. ಆಕೆ ಆ ಉಂಗುರವನ್ನು ಹಲ್ಲಿನಲ್ಲಿ ಕಚ್ಚಿದ್ದರಿಂದ ಅದು ಎರಡು ತುಂಡುಗಳಾಗಿ ಬಿದ್ದಿತ್ತು. ತಕ್ಷಣ ಆಕೆ ಕೇಕ್​ ಅನ್ನು ಹೊರಗೆ ಉಗುಳಿದ್ದಳು. ಇದು ಚೀನಾದ ಸಿಚುವಾನ್ ರಾಜ್ಯದಲ್ಲಿ ನಡೆದ ಘಟನೆ.

ಗುವಾಂಗ್ ಆನ್ ನಗರದ ನಿವಾಸಿ ಲಿಯು ರೆಡ್ ನೋಟ್ ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ:Memorable Love Proposal: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ

ಎಲ್ಲಾ ಪುರುಷರ ಗಮನಕ್ಕೆ ಆಹಾರದೊಂದಿಗೆ ಎಂದಿಗೂ ಪ್ರೊಪೋಸ್ ರಿಂಗ್ ಇರಿಸಬೇಡಿ, ಸಂಜೆ ಹಸಿವಿನಿಂದ ಬಂದಿದ್ದೆ, ಗೆಳೆಯ ಕೊಟ್ಟಿದ್ದ ಕೇಕ್​ ತಿಂದುಬಿಟ್ಟೆ. ಎಂದು ಆಕೆ ಹೇಳಿಕೊಂಡಿದ್ದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ ವರದಿ ಮಾಡಿದೆ.

ಇಷ್ಟೆಲ್ಲಾ ನಡೆದರೂ ಕೂಡ ಬಳಿಕ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಆದರೆ ಈ ಪ್ರಪೋಸ್​ ಮಾಡುವ ವಿಧಾನ ತುಂಬಾ ಅಪಾಯಕಾರಿಯಾಗಿತ್ತು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:40 pm, Tue, 4 February 25

ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!