3 ನಿಮಿಷದಲ್ಲಿ 3.5 ಕಿ.ಗ್ರಾಂ ಮೊಸರು ತಿಂದು ದಾಖಲೆ ಮಾಡಿದ ವ್ಯಕ್ತಿ; ಬಿಹಾರದಲ್ಲಿ ಮೊಸರು ತಿನ್ನುವ ಸ್ಪರ್ಧೆ

Bihar : ಹತ್ತು ವರ್ಷಗಳಿಂದ ಪಾಟ್ನಾದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಈ ವರ್ಷ 500 ಸ್ಪರ್ಧಿಗಳು ಭಾಗವಹಿಸಿದ್ದರು. ಆರೋಗ್ಯಕ್ಕೆ ಮೊಸರಿನ ಮಹತ್ವ ಸಾರುವುದು ಸ್ಪರ್ಧೆಯ ಉದ್ದೇಶ.

3 ನಿಮಿಷದಲ್ಲಿ 3.5 ಕಿ.ಗ್ರಾಂ ಮೊಸರು ತಿಂದು ದಾಖಲೆ ಮಾಡಿದ ವ್ಯಕ್ತಿ; ಬಿಹಾರದಲ್ಲಿ ಮೊಸರು ತಿನ್ನುವ ಸ್ಪರ್ಧೆ
ಸ್ಪರ್ಧಾರ್ಥಿಗಳು ಮೊಸರು ತಿನ್ನುತ್ತಿರುವುದು
Updated By: ಶ್ರೀದೇವಿ ಕಳಸದ

Updated on: Jan 19, 2023 | 5:37 PM

Viral Video : ಬಿಹಾರದ ಪಾಟ್ನಾದಲ್ಲಿ ನಿನ್ನೆ ಮೊಸರು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಹಾ ಮೊಸರು! ಯಾರಿಗೆ ಇಷ್ಟವಿಲ್ಲ? ಕುಡಿದಷ್ಟೂ ಮತ್ತೂ ಬೇಕೆನ್ನಿಸುವ ಸ್ವಾದ ಅದರದು. ಹೀಗೆ ಮೊಸರಿನ ಸ್ವಾದಕ್ಕೆ ಮಾರುಹೋದವರೆಲ್ಲ ಇಲ್ಲಿ ಒಟ್ಟಾಗಿದ್ದರು. ಅಂದರೆ ಒಟ್ಟು 500 ಜನ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಹೆಣ್ಣುಮಕ್ಕಳು, ಗಂಡುಮಕ್ಕಳು, ಮಕ್ಕಳು, ವಯಸ್ಸಾದವು ಹೀಗೆ ಎಲ್ಲರೂ ಉತ್ಸಾಹದಿಂದ ಒಳಗೊಂಡಿದ್ದರು.

ದಹೀ ಖಾವೋ ಸ್ಪರ್ಧೆಯನ್ನು ಪಾಟ್ನಾದಲ್ಲಿ ಕಳೆದ ಹತ್ತುವರ್ಷಗಳಿಂದ ಏರ್ಪಡಿಸುತ್ತ ಬರಲಾಗಿದೆ. ಮಹಿಳೆಯರು, ಪುರುಷರು ಮತ್ತು ಹಿರಿಯ ನಾಗರಿಕರು ಹೀಗೆ ಮೂರು ಗುಂಪುಗಳಲ್ಲಿ ಸ್ಪರ್ಧಾರ್ಥಿಗಳನ್ನು ವಿಂಗಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಅಜಯ್​ ಕುಮಾರ್ 3 ನಿಮಿಷದಲ್ಲಿ 3 ಕಿ.ಗ್ರಾಂ 420 ಗ್ರಾಂ ಮೊಸರನ್ನು ತಿಂದು ಪ್ರಥಮ ಸ್ಥಾನ ಗಳಿಸಿದ್ಧಾರೆ. ಮಹಿಳೆಯರಲ್ಲಿ ಪ್ರೇಮಾ ತಿವಾರಿ 3 ನಿಮಿಷದಲ್ಲಿ 2 ಕಿ.ಗ್ರಾಂ 718 ಗ್ರಾಂ ಮೊಸರು ತಿಂದು ಮೊದಲ ಸ್ಥಾನ ಪಡೆದಿದ್ದಾರೆ. ಹಿರಿಯ ನಾಗರಿಕರಲ್ಲಿ ಶಂಕರ್ ಕಾಂತ್​ 3 ನಿಮಿಷದಲ್ಲಿ 3 ಕಿ.ಗ್ರಾಂ, 647 ಗ್ರಾಂ ಮೊಸರು ತಿಂದು ಅಗ್ರಸ್ಥಾನವೇರಿದ್ದಾರೆ.

ಇದನ್ನೂ ಓದಿ : ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

ಪಾಟ್ನಾ ಡೈರಿ ಪ್ರಾಜೆಕ್ಟ್‌ನ ಅಧ್ಯಕ್ಷ ಸಂಜಯ್ ಕುಮಾರ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸಿದರು. ಮೊಸರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎನ್ನುವುದನ್ನು ತಿಳಿಸುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:32 pm, Thu, 19 January 23