Viral News: ಡೀಸಲ್ ಬ್ರ್ಯಾಂಡ್ ಹೊಸ ಜಾಕೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ರೂ. 60,000 ಬೆಲೆಯುಳ್ಳ ಈ ಜಾಕೆಟ್ನ ವಿನ್ಯಾಸ ನೋಡಿದ ನೆಟ್ಟಿಗರು, ಇದೇನು ಕ್ಯಾಬೇಜ್ನಂತೆ ಕಾಣುತ್ತಿದೆ. ಇದು ಹೊಸ ಫ್ಯಾಷನ್ನಾ? ಎಂದು ಕೇಳುತ್ತಿದ್ದಾರೆ. ಜಾಕೆಟ್ನ ಬೆಲೆ ಇಷ್ಟು ದುಬಾರಿಯಾಗಿದ್ದರೂ ವಿನ್ಯಾಸ ಮಾತ್ರ ಇಷ್ಟೊಂದು ಅನಾಕರ್ಷಕವಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
Patta gobhi jaisa dikhne ke liye inko ₹60,000 du main? pic.twitter.com/wcYF68OpUI
ಇದನ್ನೂ ಓದಿ— Anu (@Escapeplace__) January 3, 2023
ಜಾಕೆಟ್ ಕ್ಯಾಬೇಜ್ನಂತೆ ಕಾಣಲು ರೂ. 60,000 ತೆರಬೇಕೆ? ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಟ್ವೀಟ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಅಪ್ಲೋಡ್ ಮಾಡಲಾದ ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬೆಲೆಯಲ್ಲಿ ಆ್ಯಕ್ಟಿವಾ ಗಾಡಿ ಖರೀದಿಸಬಹುದಿತ್ತು. ಯಾರು ಇಷ್ಟು ದುಬಾರಿ ಜಾಕೆಟ್ ಖರೀದಿಸುತ್ತಾರೆ? ಎಂದು ಕೇಳುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : ದುಬಾರಿ ಬೈಕ್ ಮೇಲೆ ಹಾಲು ಮಾರುವವನ ಸವಾರಿ; ದುಡಿದದ್ದೆಲ್ಲ ಪೆಟ್ರೋಲಿಗೆ ಎನ್ನುತ್ತಿರುವ ನೆಟ್ಟಿಗರು
ರೂ. 2,000 ಬೆಲೆಯ ಜಾಕೆಟ್ ಇದು, ಉಳಿದದ್ದು ರೂ. 58,000 ಬ್ರ್ಯಾಂಡಿಂಗ್. ನೋಡಿ ಬ್ರ್ಯಾಂಡ್ ಹೇಗೆ ಕೆಲಸ ಮಾಡುತ್ತದೆ ಎಂದಿದ್ದಾರೆ ಒಬ್ಬರು. ಕ್ಯಾಬೇಜ್ನ ಎಲೆಗಳು ಕೂಡ ತಾಜಾತನದಿಂದ ಕೂಡಿಲ್ಲವಲ್ಲ ಎಂದಿದ್ದಾರೆ ಮತ್ತೊಬ್ಬರು. ಇದರ ಬದಲಾಗಿ ಆದಿಮಾನವನಂತೆ ಎಲೆ ಹೊದ್ದುಕೊಂಡಿರುವುದು ಉತ್ತಮ ಎಂದಿದ್ಧಾರೆ ಮಗದೊಬ್ಬರು.
ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:56 pm, Fri, 6 January 23