ಮೀಟಿಂಗ್ ಫ್ರಂ ಸಲೂನ್; ಹೇರ್ಕಟ್ ಮಾಡಿಸಿಕೊಳ್ಳುತ್ತ ಮೀಟಿಂಗ್ ಮಾಡುತ್ತಿರುವ ಸ್ಟಾರ್ಟ್ಅಪ್ನ ಸ್ಥಾಪಕ
Startup Company : ವರ್ಕ್ ಫ್ರಂ ಎನಿವೇರ್ ಎನ್ನುವುದು ಹೊಸ್ತಿಲಿನಲ್ಲಿರುವಾಗಲೇ ಇಂತ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಎಂದಿನಂತೆ ನೆಟ್ಟಿಗರು ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ.

Viral Video : ವರ್ಕ್ ಫ್ರಂ ಹೋಂ ಎನ್ನುವುದೀಗ ವರ್ಕ್ ಫ್ರಂ ಎನಿವೇರ್ ಎಂಬ ಪರಿಕಲ್ಪನೆಯತ್ತ ಕಾಲಿಡುತ್ತಿದೆ. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಕೆಲಸವಾಗಬೇಕು ಅಷ್ಟೇ. ನೀವು ಎಲ್ಲಿದ್ದೀರಿ, ಏನ ಮಾಡುತ್ತಿದ್ದೀರಿ ಅದೆಲ್ಲ ಮುಖ್ಯ ಅಲ್ಲವೇ ಅಲ್ಲ ಎಂದು ಹೊಸತಲೆಮಾರಿನ ಕಂಪೆನಿಗಳು ಹೇಳುತ್ತಿವೆ. ಇದಕ್ಕೆ ಉದಾಹರಣೆ ಈ ವಿಡಿಯೋ. ತನಯ್ ಪ್ರತಾಪ್ ಎಂಬ ಸ್ಟಾರ್ಟ್ಅಪ್ ಕಂಪೆನಿಯ ಸ್ಥಾಪಕರು ಹೇರ್ ಮಾಡಿಸಿಕೊಳ್ಳುತ್ತಿರುವಾಗಲೇ ಮೀಟಿಂಗ್ನಲ್ಲಿ ಭಾಗಿಯಾಗಿರುವುದಕ್ಕೆ ನೆಟ್ಟಿಗರಿಂದ ಟ್ರೋಲ್ಗೆ ಒಳಪಟ್ಟಿದ್ದಾರೆ.
Peak productivity unlocked today. Took meeting while getting a haircut.
ಇದನ್ನೂ ಓದಿThe staff were the sweetest to stop music while I took the meeting.
Startups are not for everyone. The only time you get when you’re not working is while you’re sleeping. pic.twitter.com/RnPXQq8gXP
— Tanay Pratap (@tanaypratap) January 4, 2023
ಕೊರೊನಾ ಅವಧಿಯಲ್ಲಿ ವರ್ಕ್ ಫ್ರಂ ಹೋಂ ಜನಪ್ರಿಯವಾಯಿತು. ನಂತರ ಅದು ವರ್ಕ್ ಫ್ರಂ ರೆಸ್ಟೋರೆಂಟ್, ವರ್ಕ್ ಫ್ರಂ ಬಾರ್, ಮತ್ತೀಗ ವರ್ಕ್ ಫ್ರಂ ಎನಿವೇರ್ ಎಂಬ ಹೊಸ್ತಿಲಿಗೆ ಬಂದು ನಿಂತಿದೆ. ಇನ್ವಾಕ್ಟ್ ಮೆಟಾವರ್ಸಿಟಿ ಎಂಬ ಸ್ಟಾರ್ಟ್ ಕಂಪೆನಿಯನ್ನು ಆರಂಭಿಸಿರುವ ತನಯ್ ಈ ಹಿಂದೆ ಹಿಂದೆ ಸಾಫ್ಟ್ವೇರ್ ಎಂಜಿನಿಯ್ ಆಗಿದ್ದರು ಎಂದು ಅವರ ಟ್ವಿಟರ್ ಬಯೋ ಹೇಳುತ್ತದೆ. ಜನವರಿ 4ರಂದು ಹೇರ್ಕಟ್ ಮಾಡಿಸಿಕೊಳ್ಳುವಾಗ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ನೋಡಿ : ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್
ನೆಟ್ಟಿಗರು ಇವರ ನಡೆಯನ್ನು ಸಾಕಷ್ಟು ಟೀಕಿಸಿ ವ್ಯಂಗ್ಯವಾಡಿದ್ಧಾರೆ. ನಾನು ಪ್ರೋಗ್ರಾಮರ್ ಆಗಿರದೇ ಇದ್ದಿದ್ದರೆ ಬಾರ್ಬರ್ ಆಗುತ್ತಿದ್ದೆ ಎಂದಿದ್ದಾರೆ ಒಬ್ಬರು. ಶವರ್ ಮಾಡೂವಾಗಲೂ ನಾನು ಮೀಟಿಂಗ್ ಅಟೆಂಡ್ ಮಾಡುತ್ತೇನೆ ಎಂದಿದ್ಧಾರೆ ಮತ್ತೊಬ್ಬರು. ಇಷಾನ್ ಶರ್ಮಾ ನಿಮ್ಮಿಂದ ಪ್ರೇರಣೆ ಪಡೆದಿದ್ದಾರೋ ನೀವು ಅವರಿಂದ ಪ್ರೇರಣೆ ಪಡೆದಿದ್ದೀರೋ ಎಂದು ಕೇಳಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:53 pm, Fri, 6 January 23