ಅಮೆರಿಕದ ಮಿಸೌರಿಯಾದ 63 ವರ್ಷದ ವ್ಯಕ್ತಿ ಕುರುಳಿನ ಕ್ಯಾನ್ಸರ್ನಲ್ಲಿ ಬಳಲುತ್ತಿದ್ದು, ಪ್ರತೀ ತಿಂಗಳ ಅಂತ್ಯದಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ. ಈ ಚೆಕ್ಅಪ್ ಸಮಯದಲ್ಲಿ ಕರುಳಿನೊಳಗೆ ಕ್ಯಾಮೆರಾವನ್ನು ಇರಿಸಿ ತಪಾಸಣೆಗಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ತಪಾಸಣೆ ಮಾಡುತ್ತಿರುವ ವೇಳೆ ವ್ಯಕ್ತಿಯ ಕರುಳಿನ ಒಳಗೆ ಜೀವಂತ ನೊಣ ಇರುವುದು ಪತ್ತೆಯಾಗಿದೆ. ಆದರೆ ಆ ನೊಣ ವ್ಯಕ್ತಿಯ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದೇ ವೈದ್ಯರಿಗೂ ತಿಳಿದಿಲ್ಲ. ಸದ್ಯ ಈ ಘಟನೆ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಲ್ಯಾಡ್ಬೈಬಲ್ ವರದಿಯ ಪ್ರಕಾರ, ಮಿಸೌರಿ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ತಜ್ಞರು ರೋಗಿಯನ್ನು ವಿಚಾರಣೆ ನಡೆಸಿ ನೊಣವು ಅವನ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ನೊಣ ತನ್ನ ದೇಹವನ್ನು ಹೇಗೆ ಪ್ರವೇಶಿಸಿದೆ ಎಂದು ಆ ವ್ಯಕ್ತಿಗೂ ತಿಳಿದಿಲ್ಲ. ತನಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಕುರುಳಿನ ಕ್ಯಾನ್ಸರ್ನ ತಪಾಸಣೆಗೂ ಮುನ್ನ ಒಂದು ದಿನ ಪೂರ್ತಿಯಾಗಿ ಉಪವಾಸದಿಂದಿರಬೇಕು. ಆದ್ದರಿಂದ ಈ ವ್ಯಕ್ತಿ ಹಿಂದಿನ ದಿನ ಜೀರ್ಣಾಂಗವನ್ನು ಖಾಲಿ ಮಾಡಲು ಅಗತ್ಯವಾದ ಕೊಲೊನೋಸ್ಕೋಪಿಯ ದ್ರವಗಳನ್ನು ಮಾತ್ರ ಸೇವಿಸಿದ್ದರು. 24 ಗಂಟೆಗಳ ಉಪವಾಸದ ಹಿಂದಿನ ದಿನ ಸಂಜೆ ಪಿಜ್ಜಾ ಮತ್ತು ಸಲಾಡ್ ಅನ್ನು ಸೇವಿಸಿದ್ದರೂ, ಆಹಾರದಲ್ಲಿ ನೊಣಗಳಿವೆಯೇ ಎಂದು ಅವರಿಗೆ ತಿಳಿದಿರಲಿಲ್ಲ.
ಇದನ್ನೂ ಓದಿ: ಕದಿಯಲು ಬಂದಿದ್ದ ಕಳ್ಳ ನಿದ್ರೆಗೆ ಜಾರಿದ, ಗೊರಕೆಯ ಸದ್ದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಮನೆಯವರು
ಅಮೇರಿಕನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಪ್ರಕಾರ, ಜೀರ್ಣಾಂಗ ವ್ಯವಸ್ಥೆಯ ಕೊನೆಯ ಭಾಗವಾದ ಕೊಲೊನ್ ಅನ್ನು ಜೀವಂತ ನೊಣ ಹೇಗೆ ತಲುಪಿತು ಎಂಬುದು ನಿಗೂಢವಾಗಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಹಣ್ಣು, ತರಕಾರಿಗಳನ್ನು ಸೇವಿಸುವಾಗ ತಮಗೆ ಗೊತ್ತಿಲ್ಲದೇ ನೊಣಗಳ ಮೊಟ್ಟೆ ಅಥವಾ ಲಾರ್ವಾಗಳನ್ನು ತಿನ್ನುತ್ತಾರೆ. ಈ ಕೀಟಗಳು ಹೇಗಾದರೂ ಹೊಟ್ಟೆಯ ಆಮ್ಲದಿಂದ ತಪ್ಪಿಸಿಕೊಂಡು ಕರುಳಿನಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ . ಇದನ್ನು ಕರುಳಿನ ಮೈಯಾಸಿಸ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಕರುಳಿನೊಳಗೆ ಜೀವಂತ ನೋಣಗಳು ಪತ್ತೆಯಾಗಬಹುದು ಎಂದು ತಿಳಿದುಬಂದಿದೆ.
ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್ ಅವರು ಹೇಳುವಂತೆ ನೊಣವು ಅವನ ಬಾಯಿ ಅಥವಾ ಹಿಂಭಾಗದ ಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸಿರಬಹುದು. ಜೀರ್ಣಕಾರಿ ಕಿಣ್ವಗಳು ಮತ್ತು ಹೊಟ್ಟೆಯ ಆಮ್ಲವು ನೊಣವನ್ನು ನುಂಗಿದ್ದರೆ ನೊಣ ಜೀವಂತವಾಗಿ ಇರುತ್ತಿರಲ್ಲಿಲ್ಲ.ಆದರೂ ಕೂಡ ನೊಣ ಕರುಳಿನೊಳಗೆ ಜೀವಂತ ನೊಣ ಹೇಗೆ ಪತ್ತೆಯಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಹಣ್ಣು, ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು ಮತ್ತು ನೊಣಗಳನ್ನು ದೂರವಿಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: