ಕೆಲವರಿಗೆ ಸಾಕುಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಅವರು ಆ ಕುಟುಂಬದ ಸದಸ್ಯರೇ ಆಗಿರುತ್ತವೆ. ಮನೆಯವರ ಹುಟ್ಟುಹಬ್ಬವನ್ನು ಆಚರಿಸಲು ಜನರು ಏನೇನೋ ಪ್ಲಾನ್ ಮಾಡುತ್ತಾರೆ, ಅದಕ್ಕೆಂದು ಲಕ್ಷಾಂತರ ರೂ. ಖರ್ಚು ಮಾಡುವವರೂ ಇದ್ದಾರೆ. ಆದರೆ, ಇಲ್ಲೊಬ್ಬ ಶ್ವಾನಪ್ರಿಯ ತನ್ನ ಮುದ್ದಿನ ನಾಯಿಯ ಹುಟ್ಟುಹಬ್ಬಕ್ಕೆ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿದ್ದಾನೆ. ಅಹಮದಾಬಾದ್‌ನ ವ್ಯಕ್ತಿಯೊಬ್ಬ ತಮ್ಮ ಮನೆಯ ಅಬ್ಬಿ ಎಂಬ ನಾಯಿಗೆ ಅದ್ದೂರಿಯಾಗಿ ಹುಟ್ಟುಹಬ್ಬದ ಪಾರ್ಟಿಯನ್ನು ಏರ್ಪಡಿಸಿದ್ದಾನೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್‌ನ ಅಹಮದಾಬಾದ್‌ನ ನಿಕೋಲ್ ಪ್ರದೇಶದಲ್ಲಿ ಅಬ್ಬಿ ಎಂಬ ಈ ಮುದ್ದಾದ ನಾಯಿಯ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಾಯಿಯ ಹುಟ್ಟುಹಬ್ಬದಂದು ಇಲ್ಲಿಗೆ ಬಂದವರೆಲ್ಲರೂ ಆಶ್ಚರ್ಯಚಕಿತರಾಗಿದ್ದರು. ಮಧುಬನ್ ಗ್ರೀನ್‌ನಲ್ಲಿ ದೊಡ್ಡ ಪ್ಲಾಟ್ ಅನ್ನು ಪಾರ್ಟಿಗಾಗಿ ಕಾಯ್ದಿರಿಸಲಾಗಿತ್ತು. ನಾಯಿಯನ್ನು ಸುಂದರವಾಗಿ ಅಲಂಕರಿಸಿ, ಅಲ್ಲಲ್ಲಿ ನಾಯಿಯ ಕಟೌಟ್ಗಳನ್ನು ಹಾಕಿ, ಸುಂದರವಾದ ಬೃಹತ್ ಕೇಕ್ ತರಿಸಿ ಅಬ್ಬಿಯ ಹುಟ್ಟುಹಬ್ಬ ಆಚರಿಸಲಾಯಿತು.
ನಾಯಿಗಳ ಪಾರ್ಟಿಗೆ ಹಲವಾರು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆ ವಾತಾವರಣವು ನಿಜವಾಗಿಯೂ ಅದ್ದೂರಿ ಮತ್ತು ಭವ್ಯದಿಂದ ಕೂಡಿತ್ತು. ನಾಯಿಯ ಹುಟ್ಟುಹಬ್ಬಕ್ಕೆ ಇಷ್ಟೆಲ್ಲ ವ್ಯವಸ್ಥೆಗಳನ್ನು ಮಾಡಿರುವುದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ಹುಟ್ಟುಹಬ್ಬದ ಪಾರ್ಟಿಗಾಗಿ ಅಬ್ಬಿಗೆ ಸ್ಕಾರ್ಫ್ ಹಾಗೂ ಕಪ್ಪು ಉಡುಗೆಯನ್ನು ಹಾಕಲಾಗಿತ್ತು.
ಗುಜರಾತ್‌ನಲ್ಲಿ ವರ್ಷದ ಆರಂಭದಿಂದಲೂ ಕೊರೊನಾ ಪ್ರಕರಣಗಳಲ್ಲಿ ನಿರಂತರ ಏರಿಕೆ ದಾಖಲಾಗಿದೆ. ಹಲವಾರು ಮಾರ್ಗಸೂಚಿಗಳ ಜೊತೆಗೆ, ರಾತ್ರಿ ಕರ್ಫ್ಯೂ ಅವಧಿಯನ್ನು ರಾಜ್ಯದಲ್ಲಿ ಒಂದು ಗಂಟೆ ಹೆಚ್ಚಿಸಲಾಗಿದೆ. ಪಾರ್ಟಿಯ ಫೋಟೋಗಳನ್ನು ಪರಿಶೀಲಿಸಿದ ನಂತರ, ಹೆಚ್ಚಿನ ಅತಿಥಿಗಳು ಮಾಸ್ಕ್ಗಳನ್ನು ಧರಿಸಿರಲಿಲ್ಲ ಎಂದು ಪೊಲೀಸರಿಗೆ ಗೊತ್ತಾಗಿತ್ತು.
ಇದನ್ನೂ ಓದಿ: Viral Video: ಬೀದಿ ಪಾಲಾಗಿ ಫುಟ್ಪಾತ್ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್
Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್