ರೈಲಿನಲ್ಲಿ ಸ್ವಚ್ಛತೆಯಿಲ್ಲವೆಂದು ದೂರಬೇಡಿ; ಕಸ ಸಂಗ್ರಹಿಸಿ ಮಾದರಿಯಾದ ಸ್ನೇಹಿತರು

|

Updated on: Nov 25, 2023 | 3:21 PM

ರೈಲಿನೊಳಗೆ ಕಸ ಹಾಕುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐವರು ಸ್ನೇಹಿತರು ಹೊಸ ವಿಧಾನವನ್ನು ಆರಿಸಿಕೊಂಡಿದ್ದಾರೆ. ತಾವು ರೈಲಿನಲ್ಲಿ ಹೋಗುವಾಗ ಒಂದು ಎಕ್ಸ್​ಟ್ರಾ ಬ್ಯಾಗ್ ಕೊಂಡೊಯ್ಯುವ ಅವರು ರೈಲಿನಲ್ಲಿ ಬಳಸಿ ಬಿಸಾಡಿದ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಅನಗತ್ಯ ಕಸವಾಗದಂತೆ ತಡೆದಿದ್ದಾರೆ.

ರೈಲಿನಲ್ಲಿ ಸ್ವಚ್ಛತೆಯಿಲ್ಲವೆಂದು ದೂರಬೇಡಿ; ಕಸ ಸಂಗ್ರಹಿಸಿ ಮಾದರಿಯಾದ ಸ್ನೇಹಿತರು
ರೈಲಿನಲ್ಲಿ ಸಿಕ್ಕ ಖಾಲಿ ಬಾಟಲಿಗಳು
Follow us on

ನವದೆಹಲಿ: ಭಾರತೀಯ ರೈಲುಗಳಲ್ಲಿನ ಕಂಪಾರ್ಟ್‌ಮೆಂಟ್‌ಗಳ ಶುಚಿತ್ವದ ಬಗ್ಗೆ ಅನೇಕರು ಟೀಕೆ ಮಾಡುತ್ತಾರೆ. ಆದರೆ, ರೈಲುಗಳಲ್ಲಿ ಸ್ವಚ್ಛತೆ ಕಾಪಾಡಲು ಯಾರೂ ತಾವಾಗೇ ಮುಂದೆ ಬರುವುದಿಲ್ಲ. ಇಂತಹ ಜನರ ನಡುವೆ ಸ್ನೇಹಿತರ ಗುಂಪೊಂದು ದರ್ಭಾಂಗಾದಿಂದ ದೆಹಲಿಗೆ ತಾವು ಪ್ರಯಾಣ ಮಾಡುವಾಗ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದೆ. ರೈಲಿನಲ್ಲಿ ಸ್ವಚ್ಛತೆಯಿಲ್ಲ ಎಂದು ದೂರುವ ಬದಲು ತಾವೇ ಆ ಕೆಲಸಕ್ಕೆ ಕೈ ಹಾಕಿದ್ದಾರೆ. ತಮ್ಮ ಈ ಕಾರ್ಯದ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಸೌರಭ್ ಎಂಬ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಶ್ಲಾಘನೀಯ ಕಾರ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರೈಲಿನೊಳಗೆ ಕಸ ಹಾಕುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐವರು ಸ್ನೇಹಿತರು ಹೊಸ ವಿಧಾನವನ್ನು ಆರಿಸಿಕೊಂಡಿದ್ದಾರೆ. ತಾವು ರೈಲಿನಲ್ಲಿ ಹೋಗುವಾಗ ಒಂದು ಎಕ್ಸ್​ಟ್ರಾ ಬ್ಯಾಗ್ ಕೊಂಡೊಯ್ಯುವ ಅವರು ರೈಲಿನಲ್ಲಿ ಬಳಸಿ ಬಿಸಾಡಿದ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಅನಗತ್ಯ ಕಸವಾಗದಂತೆ ತಡೆದಿದ್ದಾರೆ.

ಇದನ್ನೂ ಓದಿ: ಐಸಿಯುದಲ್ಲಿದ್ದ ಮಹಿಳೆಯ ಮಗುವಿಗೆ ಎದೆ ಹಾಲುಣಿಸಿದ ಪೊಲೀಸ್ ಅಧಿಕಾರಿ; ವಿಡಿಯೋಗೆ ಭಾರೀ ಮೆಚ್ಚುಗೆ

ತಮ್ಮ ಪ್ರಯಾಣದ ಉದ್ದಕ್ಕೂ ಅವರು ರೈಲಿನಲ್ಲಿ ಬೇರೆಯವರು ಬಿಸಾಡಿದ ನೀರಿನ ಬಾಟಲಿಗಳನ್ನು ಶ್ರದ್ಧೆಯಿಂದ ಸಂಗ್ರಹಿಸಿದ್ದಾರೆ. ಅವುಗಳನ್ನು ತಾವು ತಂದಿದ್ದ ಚೀಲದಲ್ಲಿ ಹಾಕಿಕೊಂಡು, ದೆಹಲಿ ತಲುಪಿದ ನಂತರ ಆ ತಮ್ಮ ಚೀಲದಲ್ಲಿದ್ದ ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದ ತೊಟ್ಟಿಯಲ್ಲಿ ಹಾಕುವ ಮೂಲಕ ಸ್ವಚ್ಛತೆಯ ಸಂದೇಶ ಸಾರಿದ್ದಾರೆ.

ಈ ಪೋಸ್ಟ್ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಕಮೆಂಟ್​ಗಳನ್ನು ಗಳಿಸಿದೆ. ರೈಲ್ವೆಯನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ಜನರು ಆ ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ