Australia: ಸುಮಾರು 247 ಮಿಲಿಯನ್ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ ಉಭಯವಾಸಿ ಪ್ರಭೇದವನ್ನು (Carnivorous Amphibian) ಅಧಿಕೃತವಾಗಿ ಗುರುತಿಸಲಾಗಿದೆ. BBC ವರದಿಯ ಪ್ರಕಾರ 1990ರಿಂದಲೂ ಇದು ವಿಜ್ಞಾನಿಗಳನ್ನು ಕುತೂಹಲಕ್ಕೆ ತಳ್ಳಿ ಒಗಟಿನಂತೆ ಮಾರ್ಪಟ್ಟಿತ್ತು. ಅಂತೂ ಈ ಪ್ರಾಣಿಯ ಅವಶೇಷಗಳ ಅಧ್ಯಯನದಿಂದಾಗಿ ಇದೀಗ ಈ ಒಗಟಿಗೆ ತೆರೆ ಬಿದ್ದಿದೆ. ನ್ಯೂ ಸೌತ್ ವೇಲ್ಸ್‌ನ ಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಂಡ ರೈತರೊಬ್ಬರು 30 ವರ್ಷಗಳ ಹಿಂದೆ ಈ ಜೀವಿಗಳ ಪಳೆಯುಳಿಕೆಯನ್ನು ಮೊದಲಿಗೆ ಪತ್ತೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
Ancient lizard-like species discovered in ??Australia.
ಇದನ್ನೂ ಓದಿScientists say the carnivorous amphibian once lived in the freshwater lakes and streams of Sydney. pic.twitter.com/ckG46e37vl
— Project Papyrus (@ProjectPapyrus) August 9, 2023
ಹಲ್ಲಿಯನ್ನು ಹೋಲುವ ಈ ಜೀವಿಗಳ ಪಳೆಯುಳಿಕೆಗಳು ಜಗತ್ತಿನಾದ್ಯಂತ ಈತನಕ 10ಕ್ಕಿಂತಲೂ ಕಡಿಮೆ ಜಾಗಗಳಲ್ಲಿ ಪತ್ತೆಯಾಗಿದ್ದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದಕ್ಕೆ ಕಾರಣ ಸಂಶೋಧನೆಗಳ ಕೊರತೆ. ಇದೀಗ ಈ ಪಳೆಯುಳಿಕೆ ಆಧಾರದ ಮೇಲೆ ಉಭಯಜೀವಿಗಳ ವಿಕಾಸದ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಇದೊಂದು ಗಮನಾರ್ಹ ಮೆಟ್ಟಿಲಾಗುವ ಸಾಧ್ಯತೆ ಹೊಂದಿದೆ.
ಇದನ್ನೂ ಓದಿ : Viral: ಮದುವೆಗೆ ಕರೆಯದೇ ಬಂದ ಅತಿಥಿ; ದಿಗ್ಭ್ರಾಂತಗೊಂಡ ನವದಂಪತಿ
ಸುಮಾರು 30 ವರ್ಷಗಳ ಹಿಂದೆ ಸಿಡ್ನಿಯ ಉತ್ತರ ಭಾಗದಲ್ಲಿರುವ ಉಮಿನಾದಲ್ಲಿ ಈ ಅಸಾಮಾನ್ಯ ಪಳೆಯುಳಿಕೆಯ ಅನ್ವೇಷಣಾ ಕಾರ್ಯಾಚರಣೆಯು ನಡೆಯಿತು. ರೈತ ಮಿಹೈಲ್ ಮಿಹೈಲಿಡಿಸ್ ಎನ್ನುವವರು ತಮ್ಮ ಉದ್ಯಾನದ ಗೋಡೆಯ ರಿಪೇರಿಯಲ್ಲಿ ನಿರತರಾಗಿದ್ದಾಗ ಅಕಸ್ಮಾತ್ ಆಗಿ 1.6 ಟನ್ ತೂಕದ ಮರಳು ಮತ್ತು ಚಪ್ಪಡಿ ಕಲ್ಲುಗಳ ಮಿಶ್ರಣದಿಂದ ಕಟ್ಟಿದ ಗೋಡೆ ಕುಸಿದು ಬಿದ್ದಿತು. ಆಗ ಈ ಅಪರಿಚಿತ ಮತ್ತು ವಿಶಿಷ್ಟ ಪ್ರಾಣಿಯ ಅವಶೇಷವು ಕಣ್ಣಿಗೆ ಬಿದ್ದಿತು. ಅದನ್ನು ಅವರು ಜೋಪಾನವಾಗಿ ಎತ್ತಿಟ್ಟುಕೊಂಡರು.
ಇದನ್ನೂ ಓದಿ : Viral: ಯಾಕಾದರೂ ಮುಳ್ಳುಹಂದಿ ನುಂಗಿದೇನೋ ಎಂದು ಪಶ್ಚಾತ್ತಾಪ ಪಟ್ಟ ಇಸ್ರೇಲಿ ಹಾವು, ಮುಂದೆ?
ಆನಂತರ ಇದನ್ನು ಮಿಹೈಲಿಡಿಸ್ 1997 ರಲ್ಲಿ ಸಿಡ್ನಿಯಲ್ಲಿರುವ ಆಸ್ಟ್ರೇಲಿಯನ್ ಮ್ಯೂಸಿಯಂನ ಗಮನಕ್ಕೆ ತಂದರು, ಅಲ್ಲಿ ಪ್ರಾಚೀನ ಜೀವಶಾಸ್ತ್ರಜ್ಞ ಲಾಚ್ಲಾನ್ ಹಾರ್ಟ್ ಈ ಅವಶೇಷಗಳನ್ನು ಜೋಡಿಸಿ ವಸ್ತುಸಂಗ್ರಹಾಲಯದ ಹವಾ ನಿಯಂತ್ರಿತ ಕೊಠಡಿಯಲ್ಲಿ ದಶಕಗಳ ಕಾಲ ಸಂರಕ್ಷಿಸಿಟ್ಟು ಇದೀಗ ಪ್ರದರ್ಶನ ಏರ್ಪಡಿಸಿದ್ದಾರೆ. ಈ ಪಳೆಯುಳಿಕೆಯು ತಲೆ ಮತ್ತು ದೇಹವನ್ನು ಹೊಂದಿಲ್ಲ. ಆದರೆ ಅದರ ಹೊರಭಾಗದ ಚರ್ಮ ಮತ್ತು ಕೊಬ್ಬಿನ ಅಂಗಾಂಶಗಳಿಂದ ಒಟ್ಟಾರೆಯಾಗಿ ಈ ಜೀವಿಯ ಪಳೆಯುಳಿಕೆ ಸಂರಕ್ಷಿಸಲ್ಪಟ್ಟಿದೆ ಎಂದಿದ್ದಾರೆ.
ಇದನ್ನೂ ಓದಿ : Viral Video: ಸಂಗೀತಪ್ರೇಮಿ ಮಂಗಗಳ ಸಂಗದಲ್ಲಿ ಹೀಗೊಬ್ಬ ಪಿಯಾನೋಸಂತ
ಹಲ್ಲಿಜಾತಿಗೆ ಸೇರಿದ ಈ ಉಭಯಜೀವಿಗಳು ಸಿಡ್ನಿ ಸುತ್ತಮುತ್ತಲಿನ ಸಿಹಿನೀರಿನ ಸರೋವರಗಳು ಮತ್ತು ತೊರೆಗಳಲ್ಲಿ ವಾಸವಾಗಿವೆ; ಅಳಿವಿನಂಚಿನಲ್ಲಿರುವ ಈ ಉಭಯಚರಗಳು ಟೆಮ್ನೋಸ್ಪಾಂಡಿಲಿ ಕುಟುಂಬಕ್ಕೆ ಸೇರಿವೆ. ಆದರೆ 66 ಮಿಲಿಯನ್ ವರ್ಷಗಳ ಹಿಂದೆ ಜ್ವಾಲಾಮುಖಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಜೀವಿಗಳೊಂದಿಗೆ ಡೈನೋಸಾರ್ಗಳು ಕೂಡ ಸಾಮೂಹಿಕವಾಗಿ ಸಾವನ್ನಪ್ಪಿದವು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:00 pm, Thu, 10 August 23