Viral News: ತನ್ನನ್ನು ತಾನೇ ಮದುವೆಯಾಗಲಿದ್ದಾಳೆ ಈ ಯುವತಿ; ಗೋವಾದಲ್ಲಿ ಒಬ್ಬಳೇ ಹನಿಮೂನ್ ಮಾಡ್ತಾಳಂತೆ!

ಗುಜರಾತ್‌ನ ವಡೋದರಾದ ಮಹಿಳೆಯು ತನಗೆ ತಾನೇ ತಾಳಿ ಕಟ್ಟಿಕೊಂಡು ಮದುವೆಯಾಗಲಿದ್ದಾರೆ. ಈ ಮದುವೆಯಲ್ಲಿ ಸಂಗೀತ್, ಮೆಹೆಂದಿ, ಎಲ್ಲ ರೀತಿಯ ಶಾಸ್ತ್ರಗಳು ಇರಲಿದ್ದು, ಮದುವೆಯಾದ ಬಳಿಕ ಆಕೆ ಒಬ್ಬರೇ ಹನಿಮೂನ್​ಗೂ ಹೋಗಲಿದ್ದಾರೆ.

Viral News: ತನ್ನನ್ನು ತಾನೇ ಮದುವೆಯಾಗಲಿದ್ದಾಳೆ ಈ ಯುವತಿ; ಗೋವಾದಲ್ಲಿ ಒಬ್ಬಳೇ ಹನಿಮೂನ್ ಮಾಡ್ತಾಳಂತೆ!
ಕ್ಷಮಾ
Image Credit source: Instagram
Edited By:

Updated on: Jun 02, 2022 | 12:54 PM

ಯುವಕ ಯುವತಿಯೊಂದಿಗೆ ಮದುವೆಯಾಗುವುದು ಸಾಮಾನ್ಯ. ಆದರೆ, ಯುವಕ ಯುವಕನನ್ನೇ ಮದುವೆಯಾದ, ಯುವತಿ ಯುವತಿಯನ್ನೇ ಮದುವೆಯಾದ ಅನೇಕ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಆದರೆ, ತನ್ನನ್ನು ತಾನೇ ಮದುವೆಯಾದುದನ್ನು (Marriage) ಎಂದಾದರೂ ನೋಡಿದ್ದೀರಾ? ಹಾಗೆ ತನ್ನನ್ನು ತಾನೇ ಮದುವೆಯಾಗುವ ಯೋಚನೆಯಾದರೂ ಎಂದಾದರೂ ಬಂದಿದೆಯಾ? ಜೂನ್ 11ರಂದು 24 ವರ್ಷದ ಕ್ಷಮಾ ಬಿಂದು (Kshama Bindu) ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮೂಲಕ ಭಾರತವು ಹಿಂದೆಂದೂ ನೋಡಿರದ ಮದುವೆಯನ್ನು ಅವರು ಆಗಲಿದ್ದಾರೆ! ತನ್ನನ್ನು ತಾನು ಭಾರೀ ಪ್ರೀತಿಸಿಕೊಳ್ಳುತ್ತಿರುವ ಈ ಮಹಿಳೆ ತನ್ನನ್ನೇ ಮದುವೆಯಾಗಲು ನಿರ್ಧರಿಸಿದ್ದಾರೆ.

ಇದನ್ನು ಓದಿ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ಸತ್ಯ! ಗುಜರಾತ್‌ನ ವಡೋದರಾದ ಮಹಿಳೆಯು ತನಗೆ ತಾನೇ ತಾಳಿ ಕಟ್ಟಿಕೊಂಡು ಮದುವೆಯಾಗಲಿದ್ದಾರೆ. ಈ ಮದುವೆಯಲ್ಲಿ ಸಂಗೀತ್, ಮೆಹೆಂದಿ, ಎಲ್ಲ ರೀತಿಯ ಶಾಸ್ತ್ರಗಳು ಇರಲಿದ್ದು, ಮದುವೆಯಾದ ಬಳಿಕ ಆಕೆ ಒಬ್ಬರೇ ಹನಿಮೂನ್​ಗೂ ಹೋಗಲಿದ್ದಾರೆ. ಇದುವರೆಗೂ ಭಾರತದಲ್ಲಿ ಯಾರೂ ಈ ರೀತಿ ತನ್ನನ್ನು ತಾನೇ ಮದುವೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಮದುವೆ ನಡೆಯಲಿದೆ.

ಇದನ್ನೂ ಓದಿ: Viral News: ಹೆಂಡತಿ ಮಾರಾಟಕ್ಕಿದ್ದಾಳೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ಗಂಡ; ಪತ್ನಿ ಮಾಡಿದ್ದೇನು?

ಇದನ್ನೂ ಓದಿ
Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಅಚ್ಚರಿಯಂತೆ ಬಚಾವಾದ ವಿಡಿಯೋ ವೈರಲ್
Viral Video: ಅಮ್ಮನೊಂದಿಗೆ ವರ್ಕ್​ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್
Viral Video: ಮರ ಹತ್ತಿ ಕೋತಿಯನ್ನು ಬೇಟೆಯಾಡಿ ಕೊಂದ ಚಿರತೆ; ವಿಡಿಯೋ ವೈರಲ್
Viral Video: 2 ಕಿ.ಮೀ. ದೂರದ ಅಪ್ಪನ ಆಫೀಸಿಗೆ ಊಟದ ಬಾಕ್ಸ್ ತೆಗೆದುಕೊಂಡು ಹೋಗುತ್ತೆ ಈ ನಾಯಿ; ವಿಡಿಯೋ ವೈರಲ್

ಕ್ಷಮಾ

ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ. ಭಾರತದಲ್ಲಿ ಇಂತಹ ಯಾವುದಾದರೂ ಮದುವೆ ನಡೆದಿದೆಯೇ? ಎಂದು ನಾನು ನೋಡಿದೆ. ಆದರೆ, ಈ ರೀತಿ ಬೇರೆ ಮದುವೆ ನಡೆದಿರುವುದು ನನ್ನ ಗಮನಕ್ಕೆ ಬರಲಿಲ್ಲ. ಈ ರೀತಿಯ ಮದುವೆಯಾಗುತ್ತಿರುವವರಲ್ಲಿ ನಾನೇ ಮೊದಲಿಗಳಿರಬಹುದು ಎಂದು ಅವರು ಹೇಳಿಕೊಂಡಿದ್ದಾರೆ. ನನ್ನ ನಿರ್ಧಾರಕ್ಕೆ, ಈ ಮದುವೆಗೆ ನನ್ನ ಪೋಷಕರು ಕೂಡ ಆಶೀರ್ವಾದ ಮಾಡಿದ್ದಾರೆ. ಗೋತ್ರಿಯ ದೇವಸ್ಥಾನದಲ್ಲಿ ನಡೆಯಲಿರುವ ವಿವಾಹಕ್ಕೆ ಐದು ವ್ರತಗಳನ್ನು ಮಾಡುತ್ತಿರುವುದಾಗಿ ಕ್ಷಮಾ ಹೇಳಿದ್ದಾರೆ. ಮದುವೆಯ ನಂತರ, ಅವರು ಎರಡು ವಾರಗಳ ಹನಿಮೂನ್‌ಗೆ ಗೋವಾಕ್ಕೆ ಹೋಗಲು ನಿರ್ಧರಿಸಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Thu, 2 June 22