Viral News : ನಮ್ಮ ಓಡಾಟಗಳಿಗೆ ಇಷ್ಟೆಲ್ಲ ಅನುಕೂಲಗಳು ಸೃಷ್ಟಿಯಾದರೂ ಪರದಾಡುವುದು ಮಾತ್ರ ತಪ್ಪಿಲ್ಲ. ಓಲಾ, ಉಬರ್ ಕ್ಯಾಬ್ಗಳನ್ನು ಕಾಯುವುದು, ಬುಕ್ ಮಾಡುವುದು, ಡ್ರೈವರ್ಗಳು ಅದನ್ನು ಕಾನ್ಸಲ್ ಮಾಡುವುದು ಹೀಗೆ ಏನಾದರೂ ಒಂದು ತಕರಾರು ಇದ್ದೇ ಇರುತ್ತದೆ. ಹಾಗಾಗಿ ಇಂಥ ಯಾತನೆಗಳಿಂದ ಮುಕ್ತಿಯೇ ಇಲ್ಲವೆ ಎನ್ನುವಂತೆ ಪರಿಸ್ಥಿತಿಗಳು ನಿರ್ಮಾಣವಾಗುತ್ತಾ ಹೋಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಷಯ ಏನೆಂದರೆ, ಬೆಂಗಳೂರಿನ ಮಹಿಳೆಯೊಬ್ಬರು ಉಬರ್ ಬುಕ್ ಮಾಡುತ್ತಾರೆ. ಆದರೆ ಡ್ರೈವರ್, ತನಗೆ ನಿದ್ದೆ ಬಂದಿದೆ ಹಾಗಾಗಿ ಈ ರೈಡ್ ಕ್ಯಾನ್ಸಲ್ ಮಾಡಿ’ ಎಂದು ಮೆಸೇಜ್ ಕಳಿಸುತ್ತಾನೆ. ‘
Tired after a day of hustling at @peakbengaluru pic.twitter.com/XB6QnBWzO6
ಇದನ್ನೂ ಓದಿ— Ashi (@ashimhta) January 25, 2023
ಆಶಿ ಎನ್ನುವ ಟ್ವಿಟರ್ ಖಾತೆದಾರರು ಭರತ್ ಎಂಬ ಉಬರ್ ಡ್ರೈವರ್ ಚಾಟ್ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದಾನೆ ಅದರಲ್ಲೇನಿದೆ? ಎಂದು ಡ್ರೈವರ್ನನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಜನವರಿ 26ರಂದು ಈ ಟ್ವೀಟ್ ಮಾಡಲಾಗಿದೆ. ಈತನಕ 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಓದಿದ್ದಾರೆ. 4,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿ ಚರ್ಚಿಸಿದ್ದಾರೆ.
ಇದನ್ನೂ ಓದಿ : ಇಂಗ್ಲಿಷ್ ಅಕ್ಷರಗಳಲ್ಲಿ ತಾಜ್ಮಹಲ್ ರಚಿಸಿದ ಯುವಕನ ವಿಡಿಯೋ ವೈರಲ್
ಸದ್ಯ ಈ ವ್ಯಕ್ತಿ ಪ್ರಾಮಾಣಿಕನಾಗಿದ್ದಾನೆ. ಹಿಂದೊಮ್ಮೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್ನಲ್ಲಿ ಮನೆಗೆ ಬರುತ್ತಿರುವಾಗ ಒಬ್ಬ ಡ್ರೈವರ್ ದಾರಿಮಧ್ಯೆ, ಮೇಡಮ್ ನನಗೆ ನಿದ್ದೆ ಬರುತ್ತಿದೆ, ಇನ್ನು ಗಾಡಿ ಓಡಿಸಲಾಗದು ಎಂದುಬಿಟ್ಟ. ಆಗ ಬೆಳಗಿನ ಜಾವ 3ಗಂಟೆ. ನಾನೋ ಜೆಟ್ಲ್ಯಾಗ್ನಿಂದ ನರಕವನ್ನು ಅನುಭವಿಸುತ್ತಿದ್ದೆ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್
ಹಿಂದೊಮ್ಮೆ ಆಟೋ ಡ್ರೈವರ್ ಯೂಟ್ಯೂಬ್ ನೋಡುತ್ತಿದ್ದರು. ಅದಕ್ಕಾಗಿ ನನಗೆ ಅವರು ಡ್ರಾಪ್ ಕೊಡಲಿಲ್ಲ ಎಂದು ಮತ್ತೊಬ್ಬರು ನೆನಪಿಸಿಕೊಂಡಿದ್ದಾರೆ. ಒಬ್ಬ ಕ್ಯಾಬ್ ಡ್ರೈವರ್ ರೈಡ್ ಸ್ವೀಕರಿಸಿದರು. ಆದರೆ ಐದು ನಿಮಿಷಗಳಾದರೂ ಅವರು ಬರಲೇ ಇಲ್ಲ. ನಂತರ ಫೋನ್ ಮಾಡಿದೆ. ಅದಕ್ಕವರು, ನೀವು ಫೋನ್ ಮಾಡಲೆಂದು ಕಾಯುತ್ತಿದ್ದೆ ಎಂದರು. ಹೀಗೆ ಮಗದೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಡ್ರೈವರ್ ನಿಜವಾದ ಕಾರಣವನ್ನು ನೇರವಾಗಿ ಹೇಳಿದ್ದಾನಲ್ಲ, ಅವನು ಕರುಣೆ ತೋರಿದ್ದಕ್ಕೆ ಬಹಳ ಖುಷಿಯಾಗಿದೆ! ಎಂದಿದ್ಧಾರೆ ಇನ್ನೂ ಒಬ್ಬರು. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ