ಭಾರತಕ್ಕೆ ಕಾಲಿಟ್ಟ ಕೂಡಲೇ ಈ ಕೊರಿಯನ್ ಬ್ಲಾಗರ್ ಮಾಡಿದ್ದು…
Korean : ವಿಮಾನದಲ್ಲಿ ಬಂದಿಳಿದು, ಬಸ್ಸು, ದ್ವಿಚಕ್ರವಾಹವನ್ನೇರಿ ನಮ್ಮ ದೇಶದ ಒಂದು ಗಲ್ಲಿಗೆ ಬರುತ್ತಾಳೆ ಕೊರಿಯನ್ ಬ್ಲಾಗರ್. ಆನಂತರ ಆಕೆ ಮಾಡುವ ಮೊದಲ ಕೆಲಸ ಏನೆಂದು ತಿಳಿದುಕೊಳ್ಳಲು ನೀವೇ ಈ ವಿಡಿಯೋ ನೋಡಿಬಿಡಿ.
Viral Video : ವಿದೇಶಿಗರಿಗೆ ಭಾರತವೆಂದರೆ ಅನೇಕ ಕಾರಣಗಳಿಂದ ಆಕರ್ಷಣೆ. ಅದರಲ್ಲಿಯೂ ಇಲ್ಲಿಯ ಆಹಾರ ಸಂಸ್ಕೃತಿಯ ಬಗ್ಗೆ ಮಾರುಹೋಗದವರಿಲ್ಲ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಕೊರಿಯಾದ ಬ್ಲಾಗರ್ ಮತ್ತು ಕೇಶವಿನ್ಯಾಸಕಿ ಕಿಮ್ ಜೇಯಿಯಾನ್ ಭಾರತಕ್ಕೆ ಕಾಲಿಡುತ್ತಿದ್ದಂತೆ ಮಾಡಿದ ತಮ್ಮ ಮೊದಲ ಕೆಲಸವೇನು ಎನ್ನುವುದನ್ನು ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿView this post on Instagram
ವಿಡಿಯೋ ನೋಡುವ ತನಕ ಇದು ಯಾರ ಊಹೆಗೂ ನಿಲುಕಿರಲಿಲ್ಲವಲ್ಲ? ವಿಮಾನದಲ್ಲಿ, ಬಸ್ಸಿನಲ್ಲಿ, ದ್ವಿಚಕ್ರವಾಹನದಲ್ಲಿ ಚಲಿಸಿ ಅವರು ಬರುವುದು ಕಬ್ಬಿನ ಹಾಲಿನ ಅಂಗಡಿಗೆ. ಅಲ್ಲಿ ತಾಜಾ ಕಬ್ಬಿನ ಹಾಲನ್ನು ಕುಡಿದು, ಕಬ್ಬಿನ ತುಂಡನ್ನು ಕಚ್ಚಿ ರಸ ಹೀರಲು ಪ್ರಯತ್ನಿಸುತ್ತಾರೆ. ಈ ವಿಡಿಯೋ ಅನ್ನು ನೋಡಿದ ಎಲ್ಲರಿಗೂ ಕಬ್ಬನಹಾಲು ಅಚ್ಚುಮೆಚ್ಚೇ. ಅನೇಕರು ಈ ವಿಡಿಯೋ ನೋಡಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ನಿದ್ದೆ ಬರ್ತಿದೆ ಅದಕ್ಕೆ ರೈಡ್ ಕ್ಯಾನ್ಸಲ್ ಮಾಡಿ; ಉಬರ್ ಡ್ರೈವರ್ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು
ಮಿಲಿಯನ್ಗಟ್ಟಲೆ ಜನರು ಈ ವಿಡಿಯೋ ನೋಡಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಮೆಚ್ಚಿದ್ದಾರೆ. 600ಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ? ಇದು ಜೈಪುರದಲ್ಲಿ? ಎಂದು ಅನೇಕರು ಕೇಳಿದ್ದಾರೆ. ಬಾಲ್ಯದ ಈ ಪಾನೀಯ ಯಾರಿಗೆ ತಾನೆ ಇಷ್ಟವಿಲ್ಲ. ನನಗೀಗಲೇ ಈ ಬಿಸಿಲಿನಲ್ಲಿ ಕುಡಿಯಬೇಕೆಂಬ ಆಸೆಯುಂಟಾಗುತ್ತಿದೆ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ : ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡತಿ; ತುಂಡಾಗಿ ಕೆಳಗೆ ಬಿದ್ದ ನಾಲಗೆ
ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆ ಶಹರಕ್ಕೆ, ಪೇಟೆಗೆ ಹೋದಾಗೆಲ್ಲ ಮೊದಲು ಬಾಯಾರಿಸಿಕೊಳ್ಳುವುದು ಮತ್ತು ನಾಲಗೆ ರುಚಿ ತಣಿಸುವ ತಂಪುಪಾನೀಯ ಇದೇ ಆಗಿತ್ತಲ್ಲವೆ? ಮತ್ತೀಗ ನಿಮಗೆ ಅದೇ ಬಾಲ್ಯ ಮರಳಬಾರದೆ ಎಂದೆನ್ನಿಸುತ್ತಿರಬೇಕು. ರುಚಿ ಎಂದರೆ ಹಾಗೇ. ಸ್ಮೃತಿಕೋಶದಲ್ಲಿ ಅದು ಶಾಶ್ವತವಾಗಿ ನೆಲೆಯೂರಿರುತ್ತದೆ. ನೆನಪುಗಳು ಗರಿಗೆದರಿ ಮನಸ್ಸು ಉಲ್ಲಸಿತವಾಗಲು ರುಚಿಯ ಪಾತ್ರ ಬಹಳ ದೊಡ್ಡದು. ಈ ರುಚಿಯೇ ಮನುಷ್ಯ ಬಂಧಗಳನ್ನು ಬೆಸೆಯುವಂಥದ್ದು. ಅದಕ್ಕೇ ದೇಶವಿದೇಶಿಗರು ನಮ್ಮ ದೇಸೀಯ ಆಹಾರವಿಧಾನಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:48 pm, Sat, 28 January 23