AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆ ಬರ್ತಿದೆ ಅದಕ್ಕೆ ರೈಡ್​ ಕ್ಯಾನ್ಸಲ್​ ಮಾಡಿ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು

Uber : ಎಷ್ಟೊತ್ತಾದರೂ ಬಾರದ ಕ್ಯಾಬ್​ ಬಗ್ಗೆ, ವಿನಾಕಾರಣ ಕ್ಯಾನ್ಸಲ್ ಮಾಡುವ ಡ್ರೈವರ್​ಗಳ ಬಗ್ಗೆ ಕೋಪ ಎಂದೂ ಕಡಿಮೆಯಾಗುವುದೇ ಇಲ್ಲ. ಆದರೆ ಈ ಬೆಂಗಳೂರಿನ ಕ್ಯಾಬ್​ ಡ್ರೈವರ್ ಬಗ್ಗೆ ನಿಮಗೆ ಕೋಪ ಖಂಡಿತ ಬಾರದು!

ನಿದ್ದೆ ಬರ್ತಿದೆ ಅದಕ್ಕೆ ರೈಡ್​ ಕ್ಯಾನ್ಸಲ್​ ಮಾಡಿ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು
ಡ್ರೈವರ್​ನ ಸಂದೇಶ
TV9 Web
| Edited By: ಶ್ರೀದೇವಿ ಕಳಸದ|

Updated on: Jan 28, 2023 | 10:36 AM

Share

Viral News : ನಮ್ಮ ಓಡಾಟಗಳಿಗೆ ಇಷ್ಟೆಲ್ಲ ಅನುಕೂಲಗಳು ಸೃಷ್ಟಿಯಾದರೂ ಪರದಾಡುವುದು ಮಾತ್ರ ತಪ್ಪಿಲ್ಲ. ಓಲಾ, ಉಬರ್​ ಕ್ಯಾಬ್​ಗಳನ್ನು ಕಾಯುವುದು, ಬುಕ್ ಮಾಡುವುದು, ಡ್ರೈವರ್​ಗಳು ಅದನ್ನು ಕಾನ್ಸಲ್​ ಮಾಡುವುದು ಹೀಗೆ ಏನಾದರೂ ಒಂದು ತಕರಾರು ಇದ್ದೇ ಇರುತ್ತದೆ. ಹಾಗಾಗಿ ಇಂಥ ಯಾತನೆಗಳಿಂದ ಮುಕ್ತಿಯೇ ಇಲ್ಲವೆ ಎನ್ನುವಂತೆ ಪರಿಸ್ಥಿತಿಗಳು ನಿರ್ಮಾಣವಾಗುತ್ತಾ ಹೋಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಷಯ ಏನೆಂದರೆ, ಬೆಂಗಳೂರಿನ ಮಹಿಳೆಯೊಬ್ಬರು ಉಬರ್ ಬುಕ್ ಮಾಡುತ್ತಾರೆ. ಆದರೆ ಡ್ರೈವರ್​, ತನಗೆ ನಿದ್ದೆ ಬಂದಿದೆ ಹಾಗಾಗಿ ಈ ರೈಡ್ ಕ್ಯಾನ್ಸಲ್ ಮಾಡಿ’ ಎಂದು ಮೆಸೇಜ್ ಕಳಿಸುತ್ತಾನೆ. ‘

ಆಶಿ ಎನ್ನುವ ಟ್ವಿಟರ್​ ಖಾತೆದಾರರು ಭರತ್​ ಎಂಬ ಉಬರ್ ಡ್ರೈವರ್ ಚಾಟ್​ನ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದಾನೆ ಅದರಲ್ಲೇನಿದೆ? ಎಂದು ಡ್ರೈವರ್​ನನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಜನವರಿ 26ರಂದು ಈ ಟ್ವೀಟ್​ ಮಾಡಲಾಗಿದೆ. ಈತನಕ 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಓದಿದ್ದಾರೆ. 4,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿ ಚರ್ಚಿಸಿದ್ದಾರೆ.

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಸದ್ಯ ಈ ವ್ಯಕ್ತಿ ಪ್ರಾಮಾಣಿಕನಾಗಿದ್ದಾನೆ. ಹಿಂದೊಮ್ಮೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್​ನಲ್ಲಿ ಮನೆಗೆ ಬರುತ್ತಿರುವಾಗ ಒಬ್ಬ ಡ್ರೈವರ್ ದಾರಿಮಧ್ಯೆ, ಮೇಡಮ್​ ನನಗೆ ನಿದ್ದೆ ಬರುತ್ತಿದೆ, ಇನ್ನು ಗಾಡಿ ಓಡಿಸಲಾಗದು ಎಂದುಬಿಟ್ಟ. ಆಗ ಬೆಳಗಿನ ಜಾವ 3ಗಂಟೆ. ನಾನೋ ಜೆಟ್​​ಲ್ಯಾಗ್​ನಿಂದ ನರಕವನ್ನು ಅನುಭವಿಸುತ್ತಿದ್ದೆ ಎಂದು ಒಬ್ಬರು ಹೇಳಿದ್ದಾರೆ. ​

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಹಿಂದೊಮ್ಮೆ ಆಟೋ ಡ್ರೈವರ್ ಯೂಟ್ಯೂಬ್​ ನೋಡುತ್ತಿದ್ದರು. ಅದಕ್ಕಾಗಿ ನನಗೆ ಅವರು ಡ್ರಾಪ್​ ಕೊಡಲಿಲ್ಲ ಎಂದು ಮತ್ತೊಬ್ಬರು ನೆನಪಿಸಿಕೊಂಡಿದ್ದಾರೆ. ಒಬ್ಬ ಕ್ಯಾಬ್​​ ಡ್ರೈವರ್ ರೈಡ್​ ಸ್ವೀಕರಿಸಿದರು. ಆದರೆ ಐದು ನಿಮಿಷಗಳಾದರೂ ಅವರು ಬರಲೇ ಇಲ್ಲ. ನಂತರ ಫೋನ್ ಮಾಡಿದೆ. ಅದಕ್ಕವರು, ನೀವು ಫೋನ್ ಮಾಡಲೆಂದು ಕಾಯುತ್ತಿದ್ದೆ ಎಂದರು. ಹೀಗೆ ಮಗದೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಈ ಡ್ರೈವರ್ ನಿಜವಾದ ಕಾರಣವನ್ನು ನೇರವಾಗಿ ಹೇಳಿದ್ದಾನಲ್ಲ, ಅವನು ಕರುಣೆ ತೋರಿದ್ದಕ್ಕೆ ಬಹಳ ಖುಷಿಯಾಗಿದೆ! ಎಂದಿದ್ಧಾರೆ ಇನ್ನೂ ಒಬ್ಬರು. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ