Viral News : ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಈಗಾಗಲೇ 40,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಉಳಿದವರನ್ನು ಸೂಕ್ತ ಕಾಲಾವಕಾಶದಲ್ಲಿ ರಕ್ಷಿಸುವುದು ವೈದ್ಯಜಗತ್ತಿಗೆ ಮತ್ತು ಸೇನೆಯವರಿಗೆ ಸವಾಲೇ. ಪ್ರಕೃತಿ ವಿಕೋಪಗಳು ಉಂಟಾದಾಗೆಲ್ಲ ಇದೊಂದು ಅಗ್ನಿಪರೀಕ್ಷೆಯೇ. ಆದರೆ ವೈದ್ಯವೃತ್ತಿ ಎನ್ನುವುದು ಎಲ್ಲವನ್ನೂ ಮೀರಿದ್ದು. ಜೀವ ಉಳಿಸುವುದಷ್ಟೇ ಅದಕ್ಕೆ ಗುರಿ.
Major Bina Tiwari with a rescued girl in the Hospital opened by the Indian Army in Iskenderun.
We have one of the largest armies in the world. They have decades of experience in rescue & peacekeeping operations. This can, & should be, the global image of India. #TurkeyEarthquake pic.twitter.com/ego2HyH0b2 ಇದನ್ನೂ ಓದಿ— anand mahindra (@anandmahindra) February 14, 2023
ಭಾರತೀಯ ಸೇನೆಯ ಮೇಜರ್ ಬೀನಾ ತಿವಾರಿ ಅವರನ್ನು ಟರ್ಕಿಯ ಇಸ್ಕೆಂಡರುನ್ನಲ್ಲಿ ರಕ್ಷಣಾಸೇವೆಗೆ ನೇಮಿಸಲಾಗಿದೆ. ಹೀಗೆ ಈ ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವಾಗ ತೆಗೆದ ಚಿತ್ರ ಇದಾಗಿದೆ. ಈ ಚಿತ್ರವನ್ನು ನೋಡಿ ಪ್ರಭಾವಿತರಾದ ಆನಂದ ಮಹೀಂದ್ರಾ, ‘ ನಾವು ಇಡೀ ಜಗತ್ತಿನಲ್ಲಿಯೇ ದೊಡ್ಡದಾದಂಥ ಸೇನಾವೃಂದವನ್ನು ಹೊಂದಿದ್ದೇವೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ದಶಕಗಳಿಂದಲೂ ಉತ್ತಮ ಅನುಭವವನ್ನು ಇದು ಹೊಂದಿದೆ. ಇದು ಹೀಗೆಯೇ ಸಾಗಬೇಕು. ಇದು ಭಾರತದ ಜಾಗತಿಕ ಚಿತ್ರಣವಾಗಬೇಕು.’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್ ಕಲಾವಿದ ದೀಪನ್; ವಿಡಿಯೋ ವೈರಲ್
ಅನೇಕರು ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಈ ಟ್ವೀಟ್ ನೋಡಿದವರ ಸಂಖ್ಯೆ 10 ಲಕ್ಷವನ್ನು ತಲುಪಲಿದೆ. 37,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಸುಮಾರು 2,500 ಜನರು ರೀಟ್ವೀಟ್ ಮಾಡಿದ್ದಾರೆ. ನಿಜಕ್ಕೂ ನಮ್ಮ ಯೋಧರ ಈ ಬೆಂಬಲವನ್ನು ಶ್ಲಾಘಿಸುತ್ತೇನೆ, ಧನ್ಯವಾದ ಎಂದಿದ್ದಾರೆ ಒಬ್ಬರು. ನಮ್ಮ ಯೋಧರು ವೃತ್ತಿಪರರು, ರಕ್ಷಣಾ ಕಾರ್ಯಾಚರಣೆ ಫಲವಾಗಿ ಪ್ರಪಂಚದಾದ್ಯಂತ ಅನೇಕ ಪುರಸ್ಕಾರಗಳನ್ನು ಗಳಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನು ಓದಿ : ಮುಂಬೈ ಪೊಲೀಸರೇ, ನೀವು ನನ್ನ ಪ್ರೇಮಿಯಾಗುವಿರಾ?
ನಿಜವಾಗಲೂ ಇದು ಹೆಮ್ಮೆಯ ಕ್ಷಣ. ಬೀನಾ ತಿವಾರಿಯವರಿಗೆ ಧನ್ಯವಾದ ಎಂದಿದ್ದಾರೆ ಅನೇಕರು. ಇದೇನು ಮೊದಲ ಸಲವಲ್ಲ, ಭಾರತೀಯ ಸೇನೆ ಅನೇಕ ವರ್ಷಗಳಿಂದ ಜಗತ್ತಿನ ಅನೇಕ ಪ್ರಕೋಪಗಳ ಸಂದರ್ಭದಲ್ಲಿ ಕೈಜೋಡಿಸಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಗುವಿನ ಮುಖದ ಮೇಲಿನ ಕಳೆಯೇ ಎಲ್ಲವನ್ನೂ ಹೇಳುತ್ತದೆ, ಸೇನೆಯು ಚಿಕಿತ್ಸೆಯೊಂದಿಗೆ ಸಾಕಷ್ಟು ಪ್ರೀತಿಯನ್ನೂ ಧಾರೆ ಎರೆದಿದೆ ಎಂದು… ಹೀಗೆಂದಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 12:33 pm, Wed, 15 February 23