Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Trending News : ಮದುವೆ ವೇಳೆ ಬಿಳಿಯ ದುಪಟ್ಟಾ ಹೊದಿಸಿ ಕುಕ್ಕರ್​ಗೆ ಚೆನ್ನಾಗಿ ಅಲಂಕಾರ ಮಾಡಿ ವಧುವಿನ ರೀತಿ ಸಿಂಗರಿಸಲಾಗಿತ್ತು. ಆ ಕುಕ್ಕರ್​ಗೆ ಮುತ್ತಿಟ್ಟ ಯುವಕ ರಿಜಿಸ್ಟರ್ ಕಚೇರಿಯಲ್ಲಿ ತನ್ನ ಹಾಗೂ ಆ ಕುಕ್ಕರ್​ನ ಮದುವೆಯಲ್ಲಿ ರಿಜಿಸ್ಟರ್ ಮಾಡಿಸಿದ್ದಾನೆ.

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?
ಕುಕ್ಕರ್ ಜೊತೆ ಇಂಡೋನೇಷ್ಯಾ ಯುವಕನ ಮದುವೆ
Updated By: ಸುಷ್ಮಾ ಚಕ್ರೆ

Updated on: Oct 01, 2021 | 1:34 PM

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಇಂಡೋನೇಷ್ಯಾದ ಯುವಕನೊಬ್ಬ ಅನ್ನ ಮಾಡುವ ಕುಕ್ಕರ್ ಜೊತೆ ಮದುವೆಯಾಗಿದ್ದಾನೆ! ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆ ಯುವಕನ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆತ ಕುಕ್ಕರ್ ಜೊತೆ ವಿವಾಹವಾಗಲು ಕಾರಣವೇನು? ಇಲ್ಲಿದೆ ಮಾಹಿತಿ.

ಇಂಡೋನೇಷ್ಯಾದ ಯುವಕ ಉದ್ಯೋಗದ ನಿಮಿತ್ತ ಮನೆಯಿಂದ ದೂರವಾಗಿ ಬೇರೆ ಊರಿನಲ್ಲಿ ವಾಸವಾಗಿದ್ದ. ಆಗ ಆತನೇ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ, ಆತ ಅಡುಗೆ ಸಾಮಾನುಗಳನ್ನು ಖರೀದಿಸಿದ್ದ. ಅದರಲ್ಲಿ ಒಂದಾದ ಕುಕ್ಕರ್ ಎಂದರೆ ಆತನಿಗೆ ಬಹಳ ಇಷ್ಟವಿತ್ತು. ಬಿಳಿಯದಾದ, ಆಧುನಿಕವಾಗಿದ್ದ ಆ ಕುಕ್ಕರ್​ನಲ್ಲಿ ಬಹುಬೇಗ ಅನ್ನವಾಗುತ್ತಿತ್ತು. ಆ ಕುಕ್ಕರ್ ಮೇಲೆ ಮನಸಾದ ಕಾರಣ ಆತ ರಿಜಿಸ್ಟರ್ ಆಫೀಸಿನಲ್ಲಿ ನೋಂದಾಯಿಸಿ, ಆ ಕುಕ್ಕರ್​ಗೆ ಹುಡುಗಿಯಂತೆ ಅಲಂಕಾರ ಮಾಡಿ ಮದುವೆಯಾಗಿದ್ದಾನೆ.

ಮದುವೆಯ ವೇಳೆ ಬಿಳಿಯ ದುಪಟ್ಟಾ ಹೊದಿಸಿ, ಕುಕ್ಕರ್​ಗೆ ಚೆನ್ನಾಗಿ ಅಲಂಕಾರ ಮಾಡಿ ವಧುವಿನ ರೀತಿ ಸಿಂಗರಿಸಲಾಗಿತ್ತು. ಆ ಕುಕ್ಕರ್​ಗೆ ಮುತ್ತಿಟ್ಟ ಯುವಕ ರಿಜಿಸ್ಟರ್ ಕಚೇರಿಯಲ್ಲಿ ತನ್ನ ಹಾಗೂ ಆ ಕುಕ್ಕರ್​ನ ಮದುವೆಯಲ್ಲಿ ರಿಜಿಸ್ಟರ್ ಮಾಡಿಸಿದ್ದಾನೆ. ಆತನ ವಿಚಿತ್ರ ವರ್ತನೆ ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ.

‘ನನ್ನ ಮಡದಿ ಬಿಳಿಯಾಗಿದ್ದಾಳೆ. ಆಕೆ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾಳೆ! ಆಕೆ ಹೆಚ್ಚು ಮಾತನಾಡುವುದಿಲ್ಲ. ನಾನು ಹೇಳಿದ್ದೆಲ್ಲ ಕೇಳಿಸಿಕೊಂಡು ಸುಮ್ಮನಿರುತ್ತಾಳೆ. ನನ್ನ ಕನಸಿನ ಹುಡುಗಿಯ ರೀತಿಯಲ್ಲೇ ಇದ್ದಾಳೆ. ನೀನಿಲ್ಲದಿದ್ದರೆ ನನ್ನ ಊಟಕ್ಕೆ ಅನ್ನವೇ ಇರುವುದಿಲ್ಲ’ ಎಂದು ಆತ ಬರೆದುಕೊಂಡಿದ್ದಾನೆ.

ಅಂದಹಾಗೆ ಈ ಹುಡುಗನ ಹೆಸರು ಕಹಿರೋಲ್ ಆನಂ. ತನ್ನ ಫೇಸ್​ಬುಕ್​ ಪೇಜಿನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದು, ಕುಕ್ಕರ್ ಅನ್ನು ಕೈಯಲ್ಲಿ ಹಿಡಿದು, ಅದಕ್ಕೆ ಮುತ್ತನ್ನಿಟ್ಟು ಪೋಸ್ ಕೊಟ್ಟಿದ್ದಾನೆ. ಈ ಫೋಟೋಗಳು ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕತೆ ಇಷ್ಟಕ್ಕೇ ಮುಗಿದಿಲ್ಲ. ಮದುವೆಯ ಫೋಟೋ ಹಂಚಿಕೊಂಡ ಎರಡೇ ದಿನಕ್ಕೆ ಆತ ತನ್ನ ‘ಹೆಂಡತಿ’ಗೆ ಡೈವೋರ್ಸ್ ಕೊಟ್ಟಿರುವುದಾಗಿಯೂ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ. ಅಷ್ಟೆಲ್ಲ ಇಷ್ಟಪಟ್ಟು ಮದುವೆಯಾದ ಕುಕ್ಕರ್​ಗೆ ವಿಚ್ಛೇದನ ನೀಡಲು ಕಾರಣವೇನೆಂಬ ಬಗ್ಗೆಯೂ ಬರೆದುಕೊಂಡಿರುವ ಆತ, ‘ನನ್ನ ಹೆಂಡತಿ ನಾನು ಹೇಳಿದ್ದೆಲ್ಲ ಕೇಳುತ್ತಾಳೆ, ನೋಡಲೂ ಚೆನ್ನಾಗಿದ್ದಾಳೆ ಎಲ್ಲವೂ ಸರಿ. ಆದರೆ, ಆಕೆಗೆ ಅನ್ನದ ವಿನಃ ಬೇರೆ ಯಾವ ಅಡುಗೆಯನ್ನೂ ಮಾಡಲು ಬರುವುದಿಲ್ಲ. ಆಕೆ ಅನ್ನ ಚೆನ್ನಾಗಿ ಮಾಡುವುದನ್ನು ನೋಡಿ ಮರುಳಾಗಿ ನಾನು ಮದುವೆಯಾಗಿ ಮೋಸ ಹೋದೆ’ ಎಂದು ಬರೆದುಕೊಂಡಿದ್ದಾನೆ!

ಇದನ್ನೂ ಓದಿ: Viral News: ವರನ ಎದುರೇ ಮದುವೆಯ ಫೋಟೋಸ್ ಡಿಲೀಟ್ ಮಾಡಿದ ಫೋಟೋಗ್ರಾಫರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Shocking News: ಆಪರೇಷನ್ ವೇಳೆ ಅತ್ತಿದ್ದಕ್ಕೆ ಹೆಚ್ಚುವರಿ ಬಿಲ್; ಅಳೋದೂ ತಪ್ಪಾ? ಎಂದ ಮಹಿಳೆ

Published On - 1:22 pm, Fri, 1 October 21