Viral : ನಮ್ಮ ಭಾರತದಲ್ಲಿ ಇದು ನಡೆಯಲು ಸಾಧ್ಯವೇ ಇಲ್ಲ ಎಂದು ಮೊದಲಿಗೇ ಹೇಳುತ್ತಾ, ಹಾಗಿದ್ದರೆ ಇದು ಎಲ್ಲಿ ನಡೆದಿದೆ ಯಾಕಾಗಿ ನಡೆದಿದೆ ಎನ್ನುವುದನ್ನು ತಿಳಿದುಕೊಳ್ಳೋಣ. ಇವರೆಲ್ಲ ಈ ವೇಷದಲ್ಲಿ ಹೀಗೆ ಸುರಂಗಮಾರ್ಗದ ರೈಲುನಿಲ್ದಾಣದಲ್ಲಿ ಒಟ್ಟಿಗೆ ನಿಂತಿರುವುದರ ಉದ್ದೇಶವೇನು? ಎಲ್ಲ ಸೇರಿ ಹೀಗೆ ಪ್ಯಾಂಟ್ ಇಲ್ಲದೆ ಹೊರಟಿರುವುದಾದರೂ ಎಲ್ಲಿಗೆ? ಇವರ ಉದ್ದೇಶವೇನು? ಇದು ಯಾವುದಾದರೂ ಸಿನೆಮಾ ಶೂಟಿಂಗ್? ಖಂಡಿತ ಅಲ್ಲ. ಇದು ಲಂಡನ್ನಲ್ಲಿ ಜನವರಿ 8ರಂದು ನಡೆದ ನೋ ಟ್ರೌಸರ್ಸ್ ಟ್ಯೂಬ್ ರೈಡ್ 2023 (No Trousers Tube Ride 2023)ರ ದೃಶ್ಯ. ನೂರಾರು ಲಂಡನ್ ವಾಸಿಗಳು ಪ್ಯಾಂಟ್ ಧರಿಸದೆ ಸುರಂಗ ಮಾರ್ಗದಲ್ಲಿ ಚಲಿಸುವ ರೈಲಿನೊಳಗೆ ಪ್ರಯಾಣಿಸಿದ್ದಾರೆ. ಜಗತ್ತಿನ ಮಂದಿ ಈ ವರ್ತಮಾನವನ್ನು ಕುತೂಹಲದಿಂದ ಓದುತ್ತಿದೆ, ನೋಡುತ್ತಿದೆ.
No Trousers Tube Ride London 2023: When is it and how to take part – Time Out London #London #Transit #TFL #Transportation https://t.co/5p00acE2KG
ಇದನ್ನೂ ಓದಿ— MyTransit London (@MyTransitLondon) January 3, 2023
ಲಂಡನ್ನಿನ ಎಲಿಜಬೆತ್ ಲೈನ್ನಲ್ಲಿ ಮೊದಲಿಗೆ 2022ರ ಜನವರಿ 8ರಂದು ನಮ್ಮ ಮೆಟ್ರೋ ರೈಲಿನಂತೆ ಟ್ಯೂಬ್ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಹೀಗೆ ಪ್ಯಾಂಟ್ ಇಲ್ಲದೆಯೇ ಕಾಣಿಸಿಕೊಂಡು ನೋ ಟ್ರೌಸರ್ಸ್ ಟ್ಯೂಬ್ ರೈಡ್ ಆಚರಿಸಿದರು. ಇದೀಗ ಒಂದು ವರ್ಷದ ನಂತರ ಇದೇ ದಿನದಂದು ಈ ದಿನವನ್ನು ಆಚರಿಸಿದ್ಧಾರೆ. ರೈಲು ನಿಲ್ಧಾಣಕ್ಕೆ ಬರುತ್ತಿದ್ದಂತೆ ತಮ್ಮ ಪ್ಯಾಂಟ್, ಬೂಟು, ಸಾಕ್ಸ್ಗಳನ್ನು ಬಿಚ್ಚಿ ಬ್ಯಾಗಿನಲ್ಲಿ ಇಟ್ಟುಕೊಂಡು ಶಾಂತವಾಗಿ ಪ್ರಯಾಣಿಸುವುದಷ್ಟೇ ಈ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲಿರುವವರಿಗೆ ಇರುವ ನಿಯಮ.
This isn’t exactly what you expect to see on the Tube!
Dozens of people bared their briefs for London’s annual No Trousers Tube Ride on Sunday.
Did you spot them on your journey? ? https://t.co/N8WxilxGo3 pic.twitter.com/fiHGb7ujPU
— BBC London (@BBCLondonNews) January 9, 2023
ಇದನ್ನೂ ಓದಿ : ರಾಮೆನ್ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್ ವಿಡಿಯೊ ವೈರಲ್
ಆದರೆ ಈ ಆಚರಣೆ ಶುರುವಾಗಿದ್ದು 20 ವರ್ಷಗಳ ಹಿಂದೆ. ನೋ ಟ್ರೌಸರ್ಸ್ ಟ್ಯೂಬ್ ರೈಡ್ ಇವೆಂಟ್ ಅನ್ನು ನ್ಯೂಯಾರ್ಕ್ನ ಕಾಮಿಕ್ ಕಲಾ ಪ್ರದರ್ಶನ ಗುಂಪೊಂದು ನ್ಯೂಯಾರ್ಕ್ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು. ಇಂಪ್ರೋವ್ ಎವರಿವೇರ್ ವೆಬ್ ಪ್ರಕಾರ, ಆರಂಭದಲ್ಲಿ ಏಳು ಜನರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಹಾಸ್ಯಪ್ರಧಾನ ಪ್ರಯೋಗ ಇದಾಗಿತ್ತು. ಪ್ಯಾಂಟ್ ಧರಿಸದ ಈ ಏಳು ವ್ಯಕ್ತಿಗಳು ಪರಸ್ಪರ ನೋಡದೆ ಅತ್ಯಂತ ಸಹಜವಾಗಿ ಸುರಂಗಮಾರ್ಗದ ರೈಲನ್ನು ಹತ್ತಿದರು ಮತ್ತು ಪ್ರಯಾಣಿಸಿದರು. ಅಂದಿನಿಂದ ಇಂದಿನವರೆಗೂ ಜಗತ್ತಿನಾದ್ಯಂತ ಸುಮಾರು 60ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಜನವರಿ 8ರಂದು ನೋ ಟ್ರೌಸರ್ಸ್ ಟ್ಯೂಬ್ ರೈಡ್ ಆಚರಿಸಲಾಗುತ್ತದೆ.
?? The morning commute can be a bit pants, can’t it? ?
These Londoners strip off for the fist ‘No Trousers Tube Ride’ since the pandemic. pic.twitter.com/vLtKoe6jH9
— euronews (@euronews) January 9, 2023
ಇದನ್ನೂ ಓದಿ : ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್
ಲಂಡನ್, ಜರ್ಮನ್, ಫ್ರಾನ್ಸ್, ಆಸ್ಟ್ರೇಲಿಯಾ, ರೊಮೇನಿಯಾ, ಲಿಸ್ಬನ್, ಟೋಕಿಯೊ, ಟೊರೊಂಟೊ ಮುಂತಾದೆಡೆ ಜನರು ಹೀಗೆ ಈ ರೈಡ್ನಲ್ಲಿ ಪಾಲ್ಗೊಳ್ಳತೊಡಗಿದರು. ಕೊವಿಡ್ ಸಮಯದಲ್ಲಿ ಎರಡು ವರ್ಷಗಳ ತನಕ ಕೆಲವೆಡೆ ಈ ದಿನವನ್ನು ಆಚರಿಸಿರಲಿಲ್ಲ. ಆದರೆ 2023ರಲ್ಲಿ ಆಸಕ್ತರು ಮತ್ತೆ ಅದೇ ಉತ್ಸಾಹದಿಂದ ಹಿಂದಿರುಗಿ ಪಾಲ್ಗೊಂಡಿದ್ಧಾರೆ.
ಭಾಗವಹಿಸಲು ಆಸಕ್ತಿ ಇರುವವರು ಟ್ಯೂಬ್ ಸ್ಟೇಷನ್ನಲ್ಲಿ ಪ್ಯಾಂಟ್ ತೆಗೆದು ಶಾಂತ ರೀತಿಯಿಂದ ಪ್ರಯಾಣಿಸುವ ತಾಳ್ಮೆ ಬೆಳೆಸಿಕೊಂಡರೆ ಸಾಕು. ಮತ್ತೆ ಇದರ ಉದ್ದೇಶವಿಷ್ಟೇ, ಚಳಿಗಾಲದಲ್ಲಿ ಪ್ಯಾಂಟ್ ಇಲ್ಲದೆ ಒಂದು ದಿನವಾದರೂ ಕಾಲುಗಳು ಸಹಜವಾಗಿ ಉಸಿರಾಡಿಕೊಂಡಿರಲಿ ಎಂಬುದು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:50 am, Tue, 10 January 23