Viral News: ಹೃದಯಕ್ಕೆ ಚುಚ್ಚಿದ್ದ ಕಬ್ಬಿಣದ ರಾಡ್​​​ನ್ನು ಯಶಸ್ವಿಯಾಗಿ ಹೊರತೆಗೆದ ವೈದ್ಯರು

|

Updated on: Apr 10, 2024 | 3:15 PM

ವ್ಯಕ್ತಿಯ ಹೃದಯಕ್ಕೆ ಚುಚ್ಚಿಕೊಂಡಿದ್ದ ಕಬ್ಬಿಣದ ರಾಡ್ ಅನ್ನು ಹೊರ ತೆಗೆದು ಆತನ ಪ್ರಾಣ ಕಾಪಾಡುವಲ್ಲಿ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ವೈದ್ಯರು ಯಶಸ್ವಿಯಾಗಿದ್ದಾರೆ. ವ್ಯಕ್ತಿಯ ಜೀವ ಉಳಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. 

Viral News: ಹೃದಯಕ್ಕೆ ಚುಚ್ಚಿದ್ದ ಕಬ್ಬಿಣದ ರಾಡ್​​​ನ್ನು ಯಶಸ್ವಿಯಾಗಿ ಹೊರತೆಗೆದ ವೈದ್ಯರು
ಮುನ್ನೆ ಲಾಲ್ ಶರ್ಮಾ(54)
Follow us on

ಲಕ್ನೋ: ಮನೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮೇಲ್ಛಾವಣಿ ಕುಸಿದಿದ್ದು, ಪರಿಣಾಮ 75 ಸೆಂಮೀ ಉದ್ದದ ಕಬ್ಬಿಣದ ರಾಡ್ ಒಂದು 54 ವರ್ಷದ ವ್ಯಕ್ತಿಯ ಹೃದಯಕ್ಕೆ ಚುಚ್ಚಿದೆ. ಮಾರ್ಚ್ 27, ಸುಲ್ತಾನ್‌ಪುರ ಜಿಲ್ಲೆಯ ದುರ್ಗಾಪುರದಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಹೃದಯದ ಕವಾಟುಗಳಿಗೆ ಚುಚ್ಚಿಕೊಂಡಿದ್ದ ಕಬ್ಬಿಣದ ರಾಡ್ ಅನ್ನು ಹೊರ ತೆಗೆದು ಆತನ ಪ್ರಾಣ ಕಾಪಾಡುವಲ್ಲಿ  ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ವೈದ್ಯರು ಯಶಸ್ವಿಯಾಗಿದ್ದಾರೆ. ಇಂತಹ ಸ್ಥಿತಿಯಲ್ಲೂ ವ್ಯಕ್ತಿಯ ಜೀವ ಉಳಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ಶ್ಲಾಘನೆ ವ್ಯಕ್ತವಾಗಿದೆ.

‘ಮುನ್ನೆ ಲಾಲ್ ಶರ್ಮಾ(54) ಅವರನ್ನು ಕೆಜಿಎಂಯು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ. ಇದಾದ ಬಳಿಕ ಆಪರೇಷನ್​​ ವೇಳೆ 75 ಸೆಂಮೀ ಉದ್ದದ ಕಬ್ಬಿಣದ ರಾಡ್​​ನಲ್ಲಿ 45 ಸೆಂ.ಮೀ ಕತ್ತರಿಸಿ ತೆಗೆಯಲಾಗಿದೆ. ಪರ್ಸ್-ಸ್ಟ್ರಿಂಗ್ ಹೊಲಿಗೆ ವಿಧಾನದ ಮೂಲಕ ಚಿಕಿತ್ಸೆ ನಡೆಸಿದ್ದು, ಹೃದಯದಿಂದ ಹೆಚ್ಚಿನ ರಕ್ತಸ್ರಾವವಾಗದಂತೆ ಯಶಸ್ವಿಯಾಗಿ ಹೊರತೆಗೆದು ಹಾನಿಗೊಳಗಾದ ಹೃದಯ ಮತ್ತು ಶ್ವಾಸಕೋಶವನ್ನು ಸರಿಪಡಿಸಲಾಗಿದೆ ‘ ಎಂದು ಡಾ ಯದ್ವೇಂದ್ರ ಧೀರ್ ಹೇಳಿದ್ದಾರೆ.

ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ

ವರದಿಯ ಪ್ರಕಾರ, ರಾಡ್ 75 ಸೆಂ.ಮೀ ಉದ್ದವಿದ್ದು, 45 ಸೆಂ.ಮೀ ಉದ್ದವನ್ನು ವೈದ್ಯರು ಕತ್ತರಿಸಿ, ನಂತರ ಹಾನಿಗೊಳಗಾದ ಹೃದಯ ಮತ್ತು ಶ್ವಾಸಕೋಶವನ್ನು ಸರಿಪಡಿಸಲು ಮುಂದಾದರು. ಇದೀಗ ಮುನ್ನೆ ಲಾಲ್ ಶರ್ಮಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ