Viral News: ನಿಮಗಿದು ಗೊತ್ತಾ?; ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತೆ!

| Updated By: ಸುಷ್ಮಾ ಚಕ್ರೆ

Updated on: Aug 27, 2021 | 9:48 PM

Chinese Kali Temple | ಭಾರತ ಮತ್ತು ಚೀನೀಯರ ಸಂಸ್ಕೃತಿಯ ಮಿಶ್ರಣ ಇರುವುದರಿಂದ ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ಫ್ರೈಡ್ ರೈಸ್ ಹಾಗೂ ನೂಡಲ್ಸ್​ ಕೂಡ ನೀಡಲಾಗುತ್ತದೆ.

Viral News: ನಿಮಗಿದು ಗೊತ್ತಾ?; ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತೆ!
ಕೊಲ್ಕತ್ತಾದಲ್ಲಿರುವ ಕಾಳಿ ದೇವಸ್ಥಾನ
Follow us on

ಕೊಲ್ಕತ್ತಾ: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದವಾಗಿ ಪೊಂಗಲ್, ಪುಳಿಯೋಗರೆ, ಉಸಲಿ, ಪಂಚಕಜ್ಜಾಯ ಕೊಡುವುದು ರೂಢಿ. ಕೆಲವು ದೇವಸ್ಥಾನಗಳ ಪ್ರಸಾದವನ್ನು ಸವಿಯಲೆಂದೇ ಹಲವರು ದೇಗುಲಗಳಿಗೆ ಹೋಗುವುದೂ ಉಂಟು. ಆದರೆ, ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತದೆ! ಇಲ್ಲಿ ಭಾರತ ಮತ್ತು ಚೀನೀಯರ ಸಂಸ್ಕೃತಿಯ ಮಿಶ್ರಣ ಇರುವುದರಿಂದ ಪ್ರಸಾದವಾಗಿ ಅನ್ನದ ಜೊತೆಗೆ ನೂಡಲ್ಸ್​ ಕೂಡ ನೀಡಲಾಗುತ್ತದೆ.

ಕೊಲ್ಕತ್ತಾದ ಕಾಳಿ ದೇವಸ್ಥಾನದಲ್ಲಿ ನೂಡಲ್ಸ್, ಫ್ರೈಡ್​ ರೈಸ್ ಮತ್ತು ಚಾಪ್ಸ್ ಸೂಯಿಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರಂತೆ. ಪಶ್ಚಿಮ ಬಂಗಾಳದಲ್ಲಿರುವ ಅನೇಕ ದೇವಸ್ಥಾನಗಳಲ್ಲಿ ಈ ರೀತಿಯ ವಿಭಿನ್ನ ರೀತಿಯ ಪ್ರಸಾದವನ್ನು ನೀಡಲಾಗುತ್ತದೆ. ಕೊಲ್ಕತ್ತಾದ ಚೈನೀಸ್ ಕಾಳಿ ದೇವಸ್ಥಾನದಲ್ಲಿ ದಿನಕ್ಕೆ ಎರಡು ಬಾರಿ ನೂಡಲ್ಸ್​ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸಲಾಗುವ ವಿಶೇಷ ಪೂಜೆಯಲ್ಲಿ ನೂಡಲ್ಸ್​ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ಈ ಬಗ್ಗೆ www.tourmyindia.com ವೆಬ್​ಸೈಟ್​ನಲ್ಲಿ ಮಾಹಿತಿ ಇದೆ. ಈ ಕಾಳಿ ದೇವಸ್ಥಾನಕ್ಕೆ 60 ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನ ಹಿಂದೂ ಮತ್ತು ಚೈನೀಸ್ ಸಮುದಾಯದ ಐಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.

ಕೊಲ್ಕತ್ತಾದ ಟಂಗ್ರಾ ಎಂಬ ಪ್ರದೇಶದಲ್ಲಿ ಈ ಕಾಳಿ ಮಂದಿರವಿದೆ. ಈ ಪ್ರದೇಶದಲ್ಲಿ ಟಿಬೇಟಿಯನ್ ಮತ್ತು ಏಷ್ಯಾದ ಸಂಸ್ಕೃತಿಯ ಮಿಶ್ರಣವಿದೆ. ಹೀಗಾಗಿ, ಇಲ್ಲಿನ ಕಾಳಿ ದೇವಸ್ಥಾನದಲ್ಲೂ ಭಾರತ ಮತ್ತು ಚೀನಾದ ಸಂಸ್ಕೃತಿಯ ಮಿಶ್ರಣವಿದೆ. ಟಂಗ್ರಾ ಪ್ರದೇಶದಲ್ಲಿರುವ ಈ ಚೈನೀಸ್ ಕಾಳಿ ದೇವಸ್ಥಾನವನ್ನು ಬಂಗಾಳಿಗಳು ಮತ್ತು ಚೈನೀಸ್ ಸಮುದಾಯವರ ಸಹಕಾರದಿಂದ ಕಟ್ಟಲಾಗಿದೆ.

ಈ ಕಾಳಿ ಮಂದಿರ ಬೆಳಗ್ಗೆ ಮತ್ತು ಸಂಜೆ ಮಾತ್ರ ತೆರೆದಿರುತ್ತದೆ. ಸೋಮವಾರದಿಂದ ಭಾನುವಾರದವರೆಗೂ ಇಲ್ಲಿ ಭಕ್ತರು ಕಾಳಿ ಮಾತೆಯ ದರ್ಶನ ಪಡೆಯಬಹುದು. ಕೊರೊನಾದಿಂದಾಗಿ ಈಗ ಹೊರ ರಾಜ್ಯದ ಪ್ರಯಾಣಿಕರು ಇಲ್ಲಿ ಬರಲು ಕೊವಿಡ್ ನೆಗೆಟಿವ್ ವರದು ನೀಡಬೇಕಾದುದು ಕಡ್ಡಾಯ.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(This Chinese Kali Temple In Kolkata Serves Noodles As Prasad)