ಬೆಂಗಳೂರು: ಈಗ ಆನ್ಲೈನ್ ಶಾಪಿಂಗ್ ಹೆಚ್ಚಾದ ಮೇಲೆ ಜನರು ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವುದೇ ಕಡಿಮೆಯಾಗಿದೆ. ಆನ್ಲೈನ್ನಲ್ಲಿ (Online Offers) ಯಾವ ಆಫರ್ ಇದೆ, ಏನೆಲ್ಲ ಆಯ್ಕೆಗಳಿವೆ ಎಂದು ನೋಡಲು ಸುಲಭವಾದ್ದರಿಂದ ಜನರು ಆನ್ಲೈನ್ನಲ್ಲಿಯೇ ವಸ್ತುಗಳನ್ನು ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ. ಕೆಲವು ದಿನಗಳ ಹಿಂದೆ ಆನ್ಲೈನ್ನಲ್ಲಿ ತೆಂಗಿನ ಚಿಪ್ಪಿಗೆ ಸಾವಿರಾರು ರೂ. ನಿಗದಿಯಾಗಿದ್ದು ಭಾರೀ ವೈರಲ್ ಆಗಿದೆ. ಸಾವಿರಾರು ರೂ. ಕೊಟ್ಟು ತೆಂಗಿನ ಚಿಪ್ಪು ಖರೀದಿಸುವಂತದ್ದು ಏನಿದೆ? ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದ್ದರು. ಇದೀಗ ಪ್ಲಾಸ್ಟಿಕ್ ಬಕೆಟ್‌ಗೆ ಅಮೆಜಾನ್‌ನಲ್ಲಿ (Amazon) 25,999 ರೂ. ಬೆಲೆ ಹಾಕಿರುವುದು ಭಾರೀ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಐಷಾರಾಮಿ ವಸ್ತುಗಳನ್ನು ಭಾರಿ ಮೊತ್ತಕ್ಕೆ ಆನ್ಲೈನ್ನಲ್ಲಿ ಮಾರಾಟ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಪ್ಲಾಸ್ಟಿಕ್ ಬಕೆಟ್‌ಗೆ ಇಷ್ಟೊಂದು ದುಬಾರಿ ಬೆಲೆ ಇರುತ್ತದೆ ಎಂದು ನಾವು ಯಾರೂ ಊಹಿಸಿರಲಿಲ್ಲ. ಹೌದು, ಟ್ವಿಟರ್ ಬಳಕೆದಾರರು ಇತ್ತೀಚೆಗೆ ಅಮೆಜಾನ್‌ನಲ್ಲಿ ಹಾಕಲಾದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬಕೆಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಬಕೆಟ್‌ಗೆ 25,999 ರೂ. ಇದೆ. ಅಂದಹಾಗೆ, ಈ ಬಕೆಟ್‌ಗೆ ನಿಜವಾದ ಬೆಲೆ 35,900 ರೂ. ಆದರೆ, ಶೇ. 28ರಷ್ಟು ರಿಯಾಯಿತಿ ನೀಡಿ 25,999 ರೂ.ಗೆ ಈ ಬಕೆಟ್ ಮಾರಲಾಗುತ್ತಿದೆ!
ನಾವು ತಮಾಷೆ ಮಾಡುತ್ತಿಲ್ಲ! ಇನ್ನೂ ಆಶ್ಚರ್ಯಕರ ವಿಷಯವೆಂದರೆ ಈ ಬಕೆಟ್ ಈಗ ಔಟ್ ಆಫ್ ಸ್ಟಾಕ್ ಆಗಿದೆ. ಇಷ್ಟು ದುಬಾರಿ ಹಣ ಕೊಟ್ಟು ಯಾರು ಬಕೆಟ್ ಖರೀದಿಸುತ್ತಾರೆ ಎಂಬುದು ನೆಟ್ಟಿಗರಿಗೆ ಆಶ್ಚರ್ಯ ಉಂಟುಮಾಡಿದೆ.
Just found this on Amazon and I don’t know what to do pic.twitter.com/hvxTqGYzC4
— Vivek Raju (@vivekraju93) May 23, 2022
ಇದನ್ನೂ ಓದಿ: Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!
ಈ ಐಟಂಗೆ “ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್” ಎಂದು ಹೆಸರಿಸಲಾಗಿದೆ. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಈ ಬಕೆಟ್ ಮಾರಾಟವಾಗುತ್ತಿದೆ. ಈ ಬಕೆಟ್‌ಗೆ 1,224 ರೂ.ಗಳ ಇಎಂಐ ಆಯ್ಕೆಯನ್ನು ಕೂಡ ನೀಡಲಾಗಿದೆ. ಬಕೆಟ್ ಅನ್ನು ಕೂಡ ಇಎಂಐನಲ್ಲಿ ಖರೀದಿಸುವ ಕಾಲ ಬಂತಲ್ಲಪ್ಪ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.
Seeing Babu Rao’s bucket on sale being posted by someone named Raju is just real life Phir Hera Pheri and we appreciate it ? https://t.co/XU0WeYntBB
— Netflix India (@NetflixIndia) May 24, 2022
ಈ ಬಕೆಟ್ ಜೊತೆಗೆ ಪ್ಲಾಸ್ಟಿಕ್ ಮಗ್ಗಳ ಫೋಟೋ ಕೂಡ ವೈರಲ್ ಆಗಿದೆ. ಈ 2 ಪ್ಲಾಸ್ಟಿಕ್ ಮಗ್ಗೆ 9,914 ರೂ. ಬೆಲೆಯಿದೆ. ಇದರ ಮೂಲ ಬೆಲೆ 22,000 ರೂ. ಆದರೆ, ಶೇ. 55ರಷ್ಟು ರಿಯಾಯಿತಿ ನೀಡುವ ಮೂಲಕ ಈ ಮಗ್ಗೆ 9,914 ರೂ. ಫಿಕ್ಸ್ ಮಾಡಲಾಗಿದೆ. 50 ರೂ.ಗೆಲ್ಲ ಮಗ್ ಸಿಗುವಾಗ 9 ಸಾವಿರ ಕೊಟ್ಟು ಖರೀದಿ ಮಾಡುವಂಥದ್ದು ಏನಿದೆ? ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
If inflation continues in the current pace, who knows, this could be the reality! Anyways, it is hilarious! ?? https://t.co/ID8s2GLXo0
— Adrita Saha (@AdritaSaha17) May 24, 2022
This bucket fills itself with fresh drinking water everyday https://t.co/Wjewe2DmiE
— Secular Buffalo ? (@SecularBuffalo) May 24, 2022
Order it for someone else with Cash on Delivery.. ?? https://t.co/fKZoWwNkgR
— Deepak Pethkar ? (@dipakpethkar) May 24, 2022
ಇದು ಮಾರಾಟಗಾರನ ಕಡೆಯಿಂದ ಕೆಲವು ರೀತಿಯ ಗ್ಲಿಚ್ ಆಗಿರಬೇಕು ಅಥವಾ ಖರೀದಿದಾರರನ್ನು ಆಕರ್ಷಿಸಲು ಮಾರ್ಕೆಟಿಂಗ್ ತಂತ್ರವಾಗಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Buy it. It’s a status thing. You’ll be the only person who has a bucket that costs 25k. It’s a piece of rare art. It’s Web 0 redefined.
Then sell it for $3 million
— Adithya Venkatesan (@adadithya) May 23, 2022
ಏನೇ ಇರಲಿ, ಅಮೆಜಾನ್ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದೆ. ಈ ವೆಚ್ಚದಲ್ಲಿ ಬಕೆಟ್ ನೀರನ್ನು ವೈನ್ ಆಗಿ ಪರಿವರ್ತಿಸಬೇಕು ಎಂದು ಟ್ವಿಟ್ಟರ್ ಬಳಕೆದಾರರು ತಮಾಷೆ ಮಾಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ