ಧೂಮಪಾನ ಮತ್ತು ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರ ಎಂದು ಗೊತ್ತಿದ್ದರೂ ಬಹುತೇಕ ಜನರು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿರುತ್ತಾರೆ. ಎಲ್ಲ ಸಿಗರೇಟ್ ಪ್ಯಾಕ್ಗಳ ಮೇಲೂ ಧೂಮಪಾನ (Smoking) ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬರೆದಿರುತ್ತಾರೆ. ಆದರೂ ಅದೇ ಸಿಗರೇಟ್ ಪ್ಯಾಕೆಟ್ ಖರೀದಿಸಿ ಸೇದುವವರೇನೂ ಕಡಿಮೆಯಿಲ್ಲ. ಸಿಗರೇಟ್ ಸೇದುವುದು ಬಿಟ್ಟರೆ ಏನು ಲಾಭ? ಎಂದು ನೀವು ಕೇಳಬಹುದು. ಧೂಮಪಾನ ಮಾಡುವುದನ್ನು ಬಿಟ್ಟರೆ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ ನಿಮ್ಮ ಹಣವೂ ಉಳಿಯುತ್ತದೆ. ಇಂಗ್ಲೆಂಡ್ನ ವ್ಯಕ್ತಿಯೊಬ್ಬರು 3 ವರ್ಷ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಕ್ಕೆ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ!
ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ಸಿಗರೆಟ್ ಸೇದುವ ಚಟವನ್ನು ಬಿಟ್ಟಿದ್ದಕ್ಕೆ 3 ವರ್ಷದಲ್ಲಿ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. 3 ವರ್ಷದ ಹಿಂದೆ ಅರ್ಧ ತಿಂಗಳಾಗುತ್ತಿದ್ದಂತೆ ಬೇರೆಯವರ ಬಳಿ ಸಾಲ ಮಾಡುವ ಪರಿಸ್ಥಿತಿಯಲ್ಲಿದ್ದ ವ್ಯಕ್ತಿ ಇದೀಗ ಧೂಮಪಾನ ಬಿಟ್ಟಿರುವುದರಿಂದ ಲಕ್ಷಾಂತರ ರೂ. ಉಳಿತಾಯ ಮಾಡಿದ್ದಾರೆ. ಅಂದಹಾಗೆ, ಈ ವ್ಯಕ್ತಿ ತನ್ನ 13ನೇ ವರ್ಷದಿಂದ ಸಿಗರೇಟ್ ಸೇದಲು ಶುರು ಮಾಡಿದ್ದರು.
ಸುಮಾರು 20 ವರ್ಷಗಳ ಕಾಲ ಸಿಗರೇಟ್ ಸೇದಿದ ಆ ವ್ಯಕ್ತಿ ಕಳೆದ 3 ವರ್ಷಗಳ ಹಿಂದೆ ಧೂಮಪಾನ ಬಿಡಬೇಕೆಂದು ನಿರ್ಧರಿಸಿದ್ದರು. ಚೈನ್ ಸ್ಮೋಕರ್ ಆಗಿದ್ದ ಅವರು 3 ವರ್ಷಗಳ ಕಾಲ ಸಿಗರೇಟ್ ತ್ಯಜಿಸಿದ್ದರಿಂದ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. ಸಿಗರೇಟ್ ಸೇದುವುದನ್ನು ಬಿಟ್ಟಿದ್ದರಿಂದ ಹಣ ಉಳಿತಾಯ ಆಗಿರುವುದು ಮಾತ್ರವಲ್ಲದೆ ಸಮಾಜದಲ್ಲಿ ಅವರಿಗೆ ಗೌರವವೂ ಜಾಸ್ತಿಯಾಗಿದೆ.
ಈ ಕುರಿತು ಇಂಗ್ಲೆಂಡ್ನ ಮಾಧ್ಯಮ ವರದಿ ಮಾಡಿದ್ದು, ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ತಮ್ಮ 13ನೇ ವಯಸ್ಸಿನಲ್ಲಿ ಸಿಗರೇಟ್ ಚಟಕ್ಕೆ ಅಂಟಿಕೊಂಡಿದ್ದರು. ತನ್ನ ಕಾಲೇಜಿನಲ್ಲಿದ್ದ ಸೀನಿಯರ್ಗಳ ಸಹವಾಸದಿಂದ ಧೂಮಪಾನ, ಮದ್ಯಪಾನವನ್ನು ಶುರು ಮಾಡಿಕೊಂಡಿದ್ದ ಆತ ಸಿಗರೇಟ್ಗೆ ದಾಸನಾಗಿದ್ದ ಎಂದು ನ್ಯೂಸ್18 ವರದಿ ಮಾಡಿದೆ.
ಸಿಗರೇಟ್ ಸೇವನೆಯಿಂದ ಆತನ ಆರೋಗ್ಯ ಹದಗೆಡೊಡಗಿತು. ಹೀಗಾಗಿ, ಸಿಗರೆಟ್ನಿಂದ ಮುಕ್ತಿ ಹೊಂದಲು ಬಯಸಿದ ಆತ 2018ರಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸಿದ. ಈ ಮೊದಲು ಆತನಿಗೆ ಸಿಗರೆಟ್ ಖರೀದಿಸಲು 1 ವಾರಕ್ಕೆ 11,000 ರೂ. ಬೇಕಾಗುತ್ತಿತ್ತು. ಆದರೆ, ಸಿಗರೇಟ್ ಸೇದುವುದು ಬಿಟ್ಟಿದ್ದರಿಂದ ಕಳೆದ 3 ವರ್ಷದಲ್ಲಿ ಆತ 17 ಲಕ್ಷ ರೂ. ಉಳಿಸಿದ್ದಾನೆ. ತನ್ನ ನಿರ್ಧಾರದ ಬಗ್ಗೆ ಆತ ಬಹಳ ಖುಷಿಯಾಗಿದ್ದಾನೆ.
ಇದನ್ನೂ ಓದಿ: Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?
Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?