Viral: ಈ ಊರಿನ ಹುಡಿಗೀನಾ ಮದ್ವೆ ಆದ್ರೆ, ವಧುವಿನ ಜೊತೆಗೆ ಮನೆ, ಜಮೀನು ಎಲ್ಲಾ ಸಿಗುತ್ತೇ!

|

Updated on: Sep 29, 2023 | 12:23 PM

ಇಲ್ಲೊಂದು ಗ್ರಾಮದಲ್ಲಿ ಹೆಣ್ಣು ಮಕ್ಕಳನ್ನು ಮದುವೆಯಾದರೆ ಅಳಿಯನಿಗೆ ಸಿಗುತ್ತೆ ಬಂಪರ್​​​ ಗಿಪ್ಟ್​​​​. ಮಾವನ ಮನೆಯಿಂದ ಮಗಳನ್ನು ಕೊಡುವುದು ಮಾತ್ರವಲ್ಲದೇ ಅಳಿಯನಿಗೆ ಮನೆ ಹಾಗೂ ಜಮೀನು ನೀಡುವುದು ಈ ಊರಿನಲ್ಲಿ ಹಿಂದಿನಿಂದಲೂ ನಡೆದುಕೊಂಡ ಸಂಪ್ರದಾಯವಂತೆ.ಅಬ್ಬಬ್ಬಾ ಇಷ್ಟೆಲ್ಲಾ ಬಂಪರ್​​​ ಗಿಪ್ಟ್ ಕೊಡುವ ಊರು ಯಾವುದು ಅಂತಾ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ, ಮಾಹಿತಿ ಇಲ್ಲಿದೆ.

Viral: ಈ ಊರಿನ ಹುಡಿಗೀನಾ ಮದ್ವೆ ಆದ್ರೆ, ವಧುವಿನ ಜೊತೆಗೆ ಮನೆ, ಜಮೀನು ಎಲ್ಲಾ ಸಿಗುತ್ತೇ!
Viral News
Follow us on

ಇಂದಿನ ಕಾಲದಲ್ಲಿ ದುಡ್ಡಿದ್ದರೆ ಮಾತ್ರ ಮದುವೆಯಾಗಲೂ ಹೆಣ್ಣು ಸಿಗುವುದು, ಹುಡುಗ ಸೆಟಲ್​​ ಆಗಿಲ್ಲ ಆದ್ರೆ ಹುಡುಗಿ ಕೊಡಲು ಯಾರು ಮುಂದೆ ಬರಲ್ಲ ಅನ್ನೋದು ಪ್ರತಿ ಯುವಕರ ಚಿಂತೆ. ಹೀಗಂತಾ ಹೇಗಾದರೂ ಸಾಲ ಮಾಡಿ ಹೊಸ ಮನೆ, ಕಾರು ಖರೀದಿಸುವ ಹೊತ್ತಿಗೆ ಮದುವೆಯ ವಯಸ್ಸೇ ಮೀರಿ ಹೋಗಿರುತ್ತದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಹೆಣ್ಣು ಮಕ್ಕಳನ್ನು ಮದುವೆಯಾದರೆ ಅಳಿಯನಿಗೆ ಸಿಗುತ್ತೆ ಬಂಪರ್​​​ ಗಿಪ್ಟ್​​​​. ಮಾವನ ಮನೆಯಿಂದ ಮಗಳನ್ನು ಕೊಡುವುದು ಮಾತ್ರವಲ್ಲದೇ ಅಳಿಯನಿಗೆ ಮನೆ ಹಾಗೂ ಜಮೀನು ನೀಡುವುದು ಈ ಊರಿನಲ್ಲಿ ಹಿಂದಿನಿಂದಲೂ ನಡೆದುಕೊಂಡ ಸಂಪ್ರದಾಯವಂತೆ.

‘ಅಳಿಯಂದಿರ ಗ್ರಾಮ’ ಎಂದು ಕರೆಯಲ್ಪಡುವ ಈ ಗ್ರಾಮ ಈಗ 500 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು 250 ಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಅಕ್ಬರ್‌ಪುರದ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಈ ಗ್ರಾಮವನ್ನು ಮೊದಲು ಸರಿಯಾಪುರ ಎಂದು ಕರೆಯಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ, ಜಿಲ್ಲಾ ಅಧಿಕಾರಿಗಳು ಇಲ್ಲಿಯ ಪ್ರಾಥಮಿಕ ಸರ್ಕಾರಿ ಶಾಲೆಗೆ ಔಪಚಾರಿಕವಾಗಿ ‘ದಮದನ್ ಪೂರ್ವ’ ಎಂದು ನಾಮಕರಣ ಮಾಡಿದರು, ಹೀಗಾಗಿ ಸರ್ಕಾರಿ ದಾಖಲೆಗಳಲ್ಲಿ ಈ ಹೆಸರನ್ನು ನಮೂದಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ ಜಾಮ್​ನಲ್ಲೇ ಕಾರಲ್ಲಿ ಕುಳಿತು ಪಿಜ್ಜಾಗೆ ಆರ್ಡರ್ ಮಾಡಿದ ಚಾಲಕ; ವಿಡಿಯೋ ವೈರಲ್

1970ರ ದಶಕದಲ್ಲಿ ಆರಂಭವಾದ ‘ಘರ್ ಜಮೈಸ್’ ಅಂದರೆ ಮನೆ ಅಳಿಯನಾಗುವ ಪದ್ದತಿಯ ಮುಖ್ಯ ಉದ್ದೇಶವೆಂದರೆ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ವಿವಾಹದ ನಂತರ ಪತ್ನಿಯೊಂದಿಗೆ ನೆಲೆಸಲು ನಿವೇಶನ ಹಾಗೂ ಜಮೀನು ನೀಡುವುದು ಎಂದು ಹೇಳುತ್ತಾರೆ ಈ ಗ್ರಾಮದ ಹಿರಿಯರು. ಅಳಿಯಂದಿರಿಗೆ ಭೂಮಿ ಮತ್ತು ಮನೆಗಳನ್ನು ಒದಗಿಸುವ ಸುದೀರ್ಘ ಇತಿಹಾಸವಿರುವ ಈ ಗ್ರಾಮದಲ್ಲಿ ದುರ್ಬಲ ಆರ್ಥಿಕ ಹಿನ್ನೆಲೆಯ ಯುವಕರು ಮದುವೆಯಾಗಲು ಹಾತೊರೆಯುತ್ತಾರೆ.

ಗ್ರಾಮದ ಹಿರಿಯರ ಪ್ರಕಾರ, ಕಳೆದ ಮೂರು ತಲೆಮಾರುಗಳಿಂದ ಈ ಗ್ರಾಮದ ಹೆಣ್ಣುಮಕ್ಕಳು ಗಂಡನ ಜೊತೆ ಇಲ್ಲಿಯೇ ನೆಲೆಸಿದ್ದಾರೆ. ಗ್ರಾಮದ ಹಿರಿಯರಾದ ರಾಮ್ ಪ್ರಸಾದ್ ಮಾತನಾಡಿ, 1970 ರ ದಶಕದಲ್ಲಿ ಗ್ರಾಮದ ಕೆಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ತಮ್ಮ ಪತಿಯೊಂದಿಗೆ ಇಲ್ಲಿಯೇ ಇರಲು ಅನುಮತಿಸಲು ಪ್ರಾರಂಭಿಸಿದವು. ಅವರಿಗೂ ಮನೆ, ಜಮೀನು ಕೊಟ್ಟಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:22 pm, Fri, 29 September 23