Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ಇಂತಹ ಪ್ರಕರಣ ಇದೆ ಮೊದಲಲ್ಲ ಎಂಬ ವರದಿ ಇನ್ನೊಂದು ಅಧ್ಯಯನದಿಂದ ತಿಳಿದುಬಂದಿದ್ದು, ಕಳೆದ ವರ್ಷ ಮಹಿಳೆಯ ಚಂದ್ರನಾಡಿಯಲ್ಲಿ ಉಗುರುಗಳು, ಪೆನ್ ಮುಚ್ಚಳಗಳು ಸೇರಿದಂತೆ ವಿಲಕ್ಷಣ ವಸ್ತುಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ತಿಂಗಳ ಆರಂಭದಲ್ಲಿಯೂ ಸ್ತ್ರೀರೋಗತಜ್ಞರೊಬ್ಬರು ರೋಗಿಯ ಯೋನಿಯನ್ನು ಪರೀಕ್ಷಿಸಿದಾಗ ಒಳಗೆ ಜಿರಳೆ ಅಡಗಿರುವುದನ್ನು ಕಂಡುಬಂದಿದೆ ಎಂದು ವರದಿಗಳ ಮೂಲಕ ತಿಳಿಸಿದ್ದಾರೆ.

Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!
Viral News
Image Credit source: timesnownews.com
Edited By:

Updated on: Oct 12, 2026 | 1:22 PM

ಮುಖ್ಯಾಂಶಗಳು

  • ಸೊಮಾಲಿಯಾದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಆಕಸ್ಮಿಕವಾಗಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿದ್ದು ನಂತರ ಆಕೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
  • ಸೊಮಾಲಿಯಾ ಮೂಲದ ಮಹಿಳೆ ತಮ್ಮ ಲಿವಿಂಗ್ ರೂಮಿನಲ್ಲಿ ಕುಳಿತಿದ್ದಾಗ ಕ್ಲಿಟೋರಿಸ್ಗೆ(ಚಂದ್ರನಾಡಿ) ಗುಂಡು ತಗುಲಿದ್ದು ಪರಿಣಾಮ ಆಕೆಯನ್ನು ಚಿಕಿತ್ಸೆಗೊಳಪಡಿಸಿ ಬುಲೆಟ್ ಹೊರತೆಗೆಯಲಾಗಿದೆ.
  • "ನಮಗೆ ತಿಳಿದ ಮಟ್ಟಿಗೆ, ಚಂದ್ರನಾಡಿಯಲ್ಲಿ ಕಂಡು ಬಂದ ಬುಲೆಟ್ನೊಂದಿಗೆ ವಲ್ವರ್ ಪ್ರದೇಶವನ್ನು (ಸ್ತ್ರೀ ಜನನಾಂಗಗಳ ಹೊರಭಾಗ) ಭೇದಿಸಿದ ಮೊದಲ ಗಾಯ ಇದಾಗಿದೆ" ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಸೊಮಾಲಿಯಾದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಆಕಸ್ಮಿಕವಾಗಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿದ್ದು ನಂತರ ಆಕೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವರದಿಯನ್ನು ಇತ್ತೀಚೆಗೆ ಇಂಟರ್ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ನಲ್ಲಿ ಪ್ರಕಟಿಸಲಾಗಿದೆ. “ನಮಗೆ ತಿಳಿದ ಮಟ್ಟಿಗೆ, ಚಂದ್ರನಾಡಿಯಲ್ಲಿ ಕಂಡು ಬಂದ ಬುಲೆಟ್ನೊಂದಿಗೆ ವಲ್ವರ್ ಪ್ರದೇಶವನ್ನು (ಸ್ತ್ರೀ ಜನನಾಂಗಗಳ ಹೊರಭಾಗ) ಭೇದಿಸಿದ ಮೊದಲ ಗಾಯ ಇದಾಗಿದೆ” ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಅಧ್ಯಯನದ ಪ್ರಕಾರ, 24 ವರ್ಷದ ಅನಾಮಧೇಯ ರೋಗಿಯು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ, ದಾರಿತಪ್ಪಿ ಬಂದ ಗುಂಡು ಚಂದ್ರನಾಡಿಗೆ ತಗುಲಿದ್ದು, ಗಾಬರಿಗೊಂಡ ಮಹಿಳೆ ಮೊಗಾಡಿಶುವಿನ ಎರ್ಡೋಕನ್ ಆಸ್ಪತ್ರೆಗೆ ವರದಿ ಮಾಡಿದ್ದಾಳೆ, ಅಲ್ಲಿ ಸಿಟಿ ಸ್ಕ್ಯಾನ್ ನಲ್ಲಿ ಬುಲೆಟ್ ಚಂದ್ರನಾಡಿ ಒಳಗೆ ಇರುವುದು ತಿಳಿದುಬಂದಿದೆ. ಅಧ್ಯಯನದ ಲೇಖಕರು ತಿಳಿಸಿದ ಮಟ್ಟಿಗೆ, ಈ ರೀತಿಯ ಪ್ರಕರಣ ಕಂಡು ಬಂದಿರುವುದು ಇದೇ ಮೊದಲು.

“ಆ ಬುಲೆಟ್ ಅದೃಷ್ಟವಶಾತ್ ಕಡಿಮೆ ವೇಗದಲ್ಲಿ ತಗುಲಿದ್ದರಿಂದ ಅವಳಿಗೆ ಏನು ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ರೋಗಿಯನ್ನು ಸ್ಥಳೀಯ ಅರಿವಳಿಕೆಯ ಅಡಿಯಲ್ಲಿ ಇರಿಸಿ ಅವಳ ಖಾಸಗಿ ಭಾಗದಿಂದ ಪ್ರಕ್ಷೇಪಕವನ್ನು ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವಳು ಯಾವುದೇ ತೊಂದರೆ ಅನುಭವಿಸಲಿಲ್ಲ, ಬಳಿಕ ಮರುದಿನ ಅವಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ” ಎಂದು ವೈದ್ಯರು ಹೇಳಿದ್ದಾರೆ.

ಸೊಮಾಲಿಯಾದಂತಹ ಯುದ್ಧ ಪೀಡಿತ ವಸತಿ ಪ್ರದೇಶಗಳಲ್ಲಿ ಇಂತಹ ಘಟನೆ ನಡೆದಿರುವುದು ಯಾರಿಗೂ ದೊಡ್ಡ ವಿಷಯವಲ್ಲ. ಏಕೆಂದರೆ ಈ ಪ್ರದೇಶದಲ್ಲಿ ಯಾರೋ ಹೊಡೆದ ಗುಂಡಿಗೆ ಇನ್ನಾರೋ ಪ್ರಾಣ ಬಿಡುವುದು ಸಾಮಾನ್ಯ. ಮನೆಯ ಒಳಗಿರುವವರಿಗೂ ತಿಳಿದಿರುವುದಿಲ್ಲ ನಮ್ಮ ಸಾವು ಯಾವಾಗ ಎಂದು. ಈ ಪ್ರದೇಶದಲ್ಲಿ ಗುಂಡೇಟು, ಗಾಯ, ಪ್ರಾಣ ಹೋಗುವುದು ಸಹಜ ಪ್ರಕಿಯೆಯಾಗಿ ಬಿಟ್ಟಿದೆ.

ಆದರೆ ಇಂತಹ ಪ್ರಕರಣ ಇದೆ ಮೊದಲಲ್ಲ ಎಂಬ ವರದಿ ಇನ್ನೊಂದು ಅಧ್ಯಯನದಿಂದ ತಿಳಿದುಬಂದಿದ್ದು, ಕಳೆದ ವರ್ಷ ಮಹಿಳೆಯ ಚಂದ್ರನಾಡಿಯಲ್ಲಿ ಉಗುರುಗಳು, ಪೆನ್ ಮುಚ್ಚಳಗಳು ಸೇರಿದಂತೆ ವಿಲಕ್ಷಣ ವಸ್ತುಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ತಿಂಗಳ ಆರಂಭದಲ್ಲಿಯೂ ಸ್ತ್ರೀರೋಗತಜ್ಞರೊಬ್ಬರು ರೋಗಿಯ ಯೋನಿಯನ್ನು ಪರೀಕ್ಷಿಸಿದಾಗ ಒಳಗೆ ಜಿರಳೆ ಅಡಗಿರುವುದನ್ನು ಕಂಡುಬಂದಿದೆ ಎಂದು ವರದಿಗಳ ಮೂಲಕ ತಿಳಿಸಿದ್ದಾರೆ.

Published On - 3:21 pm, Fri, 28 April 23

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us