Optical Illusion: ಭ್ರಮಾತ್ಮಕ ಚಿತ್ರಗಳು ನಿಮ್ಮ ಮೆದುಳಿನೊಂದಿಗೆ ಆಟವಾಡುತ್ತಾ ವಾಸ್ತವದ ಗ್ರಹಿಕೆಗೆ ಸವಾಲನ್ನು ಒಡ್ಡುತ್ತವೆ. ವಾಸ್ತವ ಮತ್ತು ಭ್ರಮೆಯ ನಡುವಿನ ತೆಳುಗೆರೆಯನ್ನು ಮಸುಕುಗೊಳಿಸುತ್ತವೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಇಂಥದೊಂದು ಸವಾಲು ಇದೆ. ರೆಡ್ಡಿಟ್ನಲ್ಲಿರುವ ಈ ವಿಡಿಯೋ ಅನ್ನು ಅನೇಕರು ನೋಡಿ ಸೂಕ್ತ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಈವತ್ತೊಂದು ದಿನ ಕಳೆದರೆ ಸಾಕು ವಾರಾಂತ್ಯದ ವಿಶ್ರಾಂತಿ, ಮೋಜು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಅದಕ್ಕಿಂತ ಮೊದಲು ಕೆಲಸ ಬಿಡುವಿನ ವೇಳೆ ಈ ಭ್ರಮಾತ್ಮಕ ಚಿತ್ರದಲ್ಲಿರುವ ಸವಾಲನ್ನು ಖಂಡಿತ ಕಂಡುಹಿಡಿಯುತ್ತೀರಿ ಎನ್ನುವ ಭರವಸೆ ನಮ್ಮದು.
ಇದನ್ನೂ ಓದಿ : Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು
ನೀಲಿ ಬಣ್ಣದ ಬೇರೆಬೇರೆ ಛಾಯೆಗಳನ್ನು ಹೊಂದಿದ ಹಿನ್ನೆಲೆಯಲ್ಲಿ ಈ ವೃತ್ತವು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಚಲಿಸುತ್ತದೆ. ಈ ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತಿದೆಯೇನೋ ಎಂಬಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ ಅದು ಸತ್ಯವಲ್ಲ. ಹಾಗಿದ್ದರೆ ಸತ್ಯವೇನು?
We have created the below colour saturation optical illusion to show how this tricks our eyes. Does the circle change colour for you?
byu/Lenstore inlenstore
ಇಂಥ ಭ್ರಮಾತ್ಮಕ ಚಿತ್ರಗಳು ನಮ್ಮ ಕಣ್ಣುಗಳನ್ನು ನಾವೇ ನಂಬದಂತೆ ಮಾಡುತ್ತವೆ. ಅಂಥ ತಂತ್ರಗಾರಿಕೆ ಇವುಗಳ ಸೃಷ್ಟಿಯಲ್ಲಿ ಅಡಗಿರುತ್ತದೆ. ಹೇಳಿ, ವೃತ್ತವು ಚಲಿಸುವಾಗ ಬಣ್ಣವನ್ನು ಬದಲಾಯಿಸುತ್ತಿತ್ತೆ? ಅನೇಕರಿಗೆ ಅದು ಹೌದು ಎನ್ನಿಸಬಹುದು. ವಾಸ್ತವದಲ್ಲಿ ವೃತ್ತದ ಬಣ್ಣವು ಸ್ಥಿರವಾಗಿದೆ. ಆದರೆ ಈ ವಿಡಿಯೋ ನೋಡುತ್ತಿದ್ದಾಗ ಖಂಡಿತ ಭ್ರಮೆ ಉಂಟಾಗಿ ಗೊಂದಲವುಂಟಾಗುತ್ತದೆ. ಏಕೆಂದರೆ ಒಂದು ವಸ್ತುವು ಬೇರೆ ರೀತಿಯ ಪರಿಸರದಲ್ಲಿದ್ದಾಗ ನಮ್ಮ ಮೆದುಳು ಗ್ರಹಿಸುವ ರೀತಿ ಬೇರೆಯಾಗಿರುತ್ತದೆ.
ಇದನ್ನೂ ಓದಿ : Viral Video: ಹೀಗೆ ಎಂದೆಂದೂ ರೈಲ್ವೇ ಕ್ರಾಸಿಂಗ್ ಮಾಡದಿರಿ, ನೋಡಿ ಈ ವಿಡಿಯೋ
ಈ ವಿಡಿಯೋ ನೋಡಿದಾಗ ನಿಮಗೆ ಏನೆನ್ನಿಸಿತು? ವೃತ್ತವು ಚಲಿಸುವಾಗ ಬಣ್ಣಗಳನ್ನು ಬದಲಾಯಿಸುತ್ತಿತ್ತು ಎನ್ನಿಸಿತೆ ಅಥವಾ ಸ್ಥಿರವಾಗಿತ್ತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:03 am, Fri, 22 September 23