Optical Illusion: ಪ್ರತೀ ಸಲ ಭ್ರಮಾತ್ಮಕ ಚಿತ್ರವನ್ನು ನೋಡುತ್ತಿದ್ದಿರಿ. ಇದೀಗ ಭ್ರಮಾತ್ಮಕ ವಿಡಿಯೋ ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎನ್ನುವುದುನ್ನು ಅರ್ಥೈಸಿಕೊಳ್ಳುವ ಸವಾಲನ್ನು ನಿಮಗೆ ಒಡ್ಡಲಾಗಿದೆ. X ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೆಟ್ಟಿಗರಿಗೆ ಸಾಕಷ್ಟು ಗೊಂದಲವನ್ನುಂಟು ಮಾಡಿದೆ. ಕೆಲವರು ಮಾತ್ರ ಉತ್ತರಿಸಲು ಪ್ರಯತ್ನಿಸಿದ್ದಾರೆ. ಉಳಿದವರು ಖಂಡಿತ ಸಾಧ್ಯವೇ ಇಲ್ಲ, ಸೋತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈತನಕ ಈ ವಿಡಿಯೋ ಅನ್ನು 9 ಮಿಲಿಯನ್ ಜನರು ನೋಡಿದ್ದಾರೆ. ನೋಡಿ ನೀವೂ ಈ ಭ್ರಮಾತ್ಮಕ ವಿಡಿಯೋದಲ್ಲಿ (Video) ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ.
ಇದನ್ನೂ ಓದಿ : Viral Video: ಪ್ರಯಾಣಿಕರೊಬ್ಬರಿಗೆ ಅತಿಸಾರ; ಇದು ಜೈವಿಕ ಅಪಾಯ ಎಂದು ವಿಮಾನವನ್ನೇ ಯೂಟರ್ನ್ ಮಾಡಿದ ಪೈಲಟ್
@fasc1nate ಎಂಬ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಕಟ್ಟಡದ ಬಾಲ್ಕನಿಗಳ ಮೇಲೆ ಕೆಲವರು ಕುಳಿತಿರುವ ದೃಶ್ಯ ಈ ವಿಡಿಯೋದಲ್ಲಿ ಕಾಣಸಿಗುತ್ತದೆ. ಇನ್ನೂ ಕೆಲವರು ಈ ಕಟ್ಟಡದ ಗೋಡೆಯ ಮೇಲೆ ನಡೆದಾಡುತ್ತಿದ್ದಾರೆ. ಕಟ್ಟಡದ ಆಚೆ ನಿಂತಿರುವ ವೀಕ್ಷಕರು ನಿಂತಿರುವ ಕೋನವನ್ನು ನೋಡಿದರೆ ಯಾರಿಗೂ ಖಂಡಿತ ಗೊಂದಲ ಉಂಟಾಗುತ್ತದೆ.
This is a crazy optical illusion. pic.twitter.com/H5qvhSXxVm
— Fascinating (@fasc1nate) September 1, 2023
ಸೆ. 1ರಂದು ಪೋಸ್ಟ್ ಮಾಡಲಾದ ಈ ವಿಡಿಯೋಗೆ ಅನೇಕರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ನನಗಿದು ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ ಒಬ್ಬರು. ಇಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನನಗೆ ಕೆಲವಾರು ನಿಮಿಷಗಳೇ ಬೇಕಾಯಿತು ಎಂದಿದ್ದಾರೆ ಮತ್ತೊಬ್ಬರು. ನನ್ನಿಂದ ಈ ಸವಾಲು ಬಿಡಿಸುವುದು ಸಾಧ್ಯವೇ ಇಲ್ಲ, ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಎಂಜಿನ್ ಇಲ್ಲ ಚಾಲಕನಿಲ್ಲ ನಿಗೂಢವಾಗಿ ಚಲಿಸಿದ ರೈಲು; ಆತ್ಮನಿರ್ಭರ್ ರೈಲು ಎಂದ ನೆಟ್ಟಿಗರು
ಎರಡು ಸಲ ಈ ವಿಡಿಯೋ ನೋಡಿದ ಮೇಲೆ ಇದರಲ್ಲಿ ಏನಿದೆ ಎಂದು ನನಗೆ ತಿಳಿಯಿತು ಎಂದಿದ್ದಾರೆ ಕೆಲಜನರು. ಹಾಗಿದ್ದರೆ ಏನು ನೋಡಿದಿರಿ ಹೇಳಿ ಎಂದು ಇನ್ನೂ ಕೆಲವರು ಅವರನ್ನು ಕೇಳಿದರೆ ಉತ್ತರವೇ ಇಲ್ಲ! ಈ ಆಪ್ಟಿಕಲ್ ಇಲ್ಲ್ಯೂಷನ್ ವಿಡಿಯೋದಲ್ಲಿ ನಿಮಗೇನು ಕಂಡಿತು? ಇದೊಂದು ತ್ರೀಡಿ ಆರ್ಟ್ನಂತೆ ಕಾಣುತ್ತಿಲ್ಲವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ