Optical Illusion: ಕೆಲಸ ಮಾಡುತ್ತ ನಿಮಗೆ ತಲೆಭಾರ ಎನ್ನಿಸುತ್ತಿರಬಹುದು. ಕಣ್ಣಿಗೂ ಮೆದುಳಿಗೂ ಬದಲಾವಣೆ ಬೇಕಿರಬಹುದು. ಆದರೆ ಆಚೆ ಓಡಾಡಿಕೊಂಡು ಬರಲು ನಿಮಗೀಗ ಸಮಯವಿಲ್ಲ. ಕುಳಿತಲ್ಲಿಯೇ ನಿಮ್ಮ ಮೆದುಳನ್ನು ಚುರುಕುಗೊಳಿಸಿಕೊಳ್ಳುವ ಪ್ರಯತ್ನವನ್ನು ಈ ಭ್ರಮಾತ್ಮಕ ಚಿತ್ರಗಳಿಂದ ಮಾಡಿಕೊಳ್ಳಬಹುದು. ಇಲ್ಲೊಂದು ಮುಖದ ರೇಖಾಚಿತ್ರವಿದೆ (Line Art). ಇದರಲ್ಲಿ ರಹಸ್ಯವಾಗಿ ಪದವೊಂದು ಅಡಗಿದೆ. ಅದೇನೆಂದು ಕಂಡುಹಿಡಿಯಬೇಕಿರುವುದು ನಿಮ್ಮ ಕೆಲಸ. ನೆಟ್ಟಿಗರನೇಕರು ಈ ವಿಷಯದಲ್ಲಿ ಸೋತಿದ್ದಾರೆ. ಆದರೆ ಹದ್ದಿನ ಕಣ್ಣುಳ್ಳ ನೀವು ಖಂಡಿತ ಆ ಪದವನ್ನು ಹುಡುಕಿ ತೆಗೆಯುತ್ತೀರಿ ಎಂಬ ಆಶಾಭಾವನೆ ನಮ್ಮದು.
ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್
ಸೆ. 11ರಂದು Xನಲ್ಲಿ ಹಂಚಿಕೊಂಡ ಈ ಫೋಟೋವನ್ನು ಈಗಾಗಲೇ ಸುಮಾರು 1.9 ಮಿಲಿಯನ್ ಜನ ನೋಡಿದ್ದಾರೆ. 16,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 9,000 ಜನರು ಉತ್ತರಿಸಲು ಪ್ರಯತ್ನಿಸಿದ್ದಾರೆ. 2,500 ಜನರು ರೀಪೋಸ್ಟ್ ಮಾಡಿದ್ದಾರೆ.
Can you find the hidden word in this optical illusion? pic.twitter.com/EwfDcHB18O
— Figen (@TheFigen_) September 11, 2023
ನೆಟ್ಟಿಗರನೇಕರು ಈ ಚಿತ್ರ ನೋಡಿ ಸಾಕಷ್ಟು ತಲೆಕೆರೆದುಕೊಂಡು ಇಟ್ಟಿದ್ದಾರೆ. ಇದರಲ್ಲಿ ಯಾವ ಪದವೂ ಇಲ್ಲ, ಸುಳ್ಳು ಎಂದಿದ್ದಾರೆ. ಹಾಂ ನಾನು ಹುಡುಕಿದೆ, ಆದರೆ ಹೇಳುವುದಿಲ್ಲ! ಎಂದಿದ್ದಾರೆ. ಇದು ಅಷ್ಟು ಸುಲಭವಾಗಿಲ್ಲ, ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ ಕೆಲವರು. ನಿಮಗೇನಾದರೂ ಹೊಳೆಯಿತೇ ಈ ಬಗ್ಗೆ?
ಇದನ್ನೂ ಓದಿ : Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್ಪಾಡ್ ನುಂಗಿದ ಮಹಿಳೆ
ನನಗೆ ನಾನು ಏನೇನು ಕಲ್ಪಿಸಿಕೊಳ್ಳುತ್ತೇನೋ ಆ ಎಲ್ಲಾ ಪದಗಳು ಸಿಕ್ಕವು ಎಂದಿದ್ದಾರೆ ಒಬ್ಬರು. ಖಂಡಿತ ನನಗೆ ಒಂದು ಪದವನ್ನು ಹುಡುಕಲು ಆಗಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಇದು ಬಹಳ ಸುಲಭವಾಗಿದೆ, ಹಾಗಾಗಿಯೇ ನನಗೆ ಸಿಕ್ಕ ಪದವನ್ನು ನಾನು ಹೇಳಲಾರೆ ಎಂದಿದ್ದಾರೆ ಮತ್ತೊಬ್ಬರು. ತುಂಬಾ ಆಸಕ್ತಿದಾಯಕವಾಗಿದೆ ಆದರೆ ಇದರಿಂದ ನಾನು ಪ್ರಭಾವಿತಗೊಂಡಿಲ್ಲ ಎಂದಿದ್ದಾರೆ ಮಗದೊಬ್ಬರು.
ಹೇಳಿ, ನಿಮಗೆ ರಹಸ್ಯಪದವನ್ನು ಕಂಡು ಹಿಡಿಯಲು ಸಾಧ್ಯವಾಯಿತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ