ಹೆಣ್ಣುಮಕ್ಕಳಿಗೆ ತಮ್ಮ ತಂದೆಯೇ ಮೊದಲ ಹೀರೋ. ಅಪ್ಪನನ್ನು ನೋಡಿಕೊಂಡೇ ಬೆಳೆಯುವ ಹೆಣ್ಣುಮಕ್ಕಳ ಪಾಲಿಗೆ ಅಪ್ಪ ಎಂದಿಗೂ ರಿಯಲ್ ಹೀರೋ. ಈ ರಿಯಲ್ ಹೀರೋ ಅಪ್ಪನಿಗೆ ಮಗಳೇ ಸೆಲ್ಯೂಟ್ ಹೊಡೆದಿರುವ ಫೋಟೋ ವೈರಲ್ ಆಗಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ಮಹಿಳೆ ಪೊಲೀಸ್ ಅಧಿಕಾರಿಯಾಗಿರುವ ತನ್ನ ತಂದೆಗೆ ಸೆಲ್ಯೂಟ್ ಮಾಡುತ್ತಿರುವ ಫೋಟೋ ಭಾರೀ ವೈರಲ್ ಆಗಿದೆ.
ಮಗಳಿಂದ ಸೆಲ್ಯೂಟ್ ಸ್ವೀಕರಿಸಿರುವ ತಂದೆ ತಾವೂ ಆಕೆಗೆ ಸೆಲ್ಯೂಟ್ ಮಾಡಿದ್ದಾರೆ. ಈ ಹೆಮ್ಮೆಯ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಈ ಕ್ಷಣವನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. “ಹೆಮ್ಮೆಯ ತಂದೆಗೆ ಹೆಮ್ಮೆಯ ಮಗಳಿಂದ ಸೆಲ್ಯೂಟ್” ಎಂದು ಐಟಿಬಿಪಿ ಈ ಫೋಟೋಗೆ ಕ್ಯಾಪ್ಷನ್ ನೀಡಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪೊಲೀಸ್ ಅಕಾಡೆಮಿಯಲ್ಲಿ ಪದವಿ ಪಡೆದ ಯುವತಿ ಅಪೇಕ್ಷಾ ನಿಂಬಾಡಿಯಾ ಡಿಎಸ್ಪಿಯಾಗಿದ್ದು, ಆಕೆಯ ತಂದೆಯಾಗಿರುವ ಎಪಿಎಸ್ ಅಧಿಕಾರಿ ನಿಂಬಾಡಿಯಾ ಅವರು ಐಟಿಬಿಪಿಯಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದಾರೆ. ಡಿಐಜಿಯಾಗಿರುವ ತನ್ನ ತಂದೆಗೆ ಮಗಳು ಅಪೇಕ್ಷಾ ಸಲ್ಯೂಟ್ ಮಾಡಿದ್ದಾರೆ.
ಕಾಲೇಜಿನಿಂದ ಪದವಿ ಪಡೆದ ನಂತರ ಅಪೇಕ್ಷಾ ನಿಂಬಾಡಿಯಾ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿಯಾಗಿ ಸೇರಿದರು. ಅಪೇಕ್ಷಾ ತಮ್ಮ ಕುಟುಂಬದ ಮೂರನೇ ತಲೆಮಾರಿನ ಪೊಲೀಸ್ ಅಧಿಕಾರಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಡಿಎಸ್‌ಪಿಯಾಗಿ ಇತ್ತೀಚೆಗೆ ನೇಮಕಗೊಂಡಿರುವ ಅಪೇಕ್ಷಾ ನಿಂಬಾಡಿಯಾ ಅವರು ಐಟಿಬಿಪಿಯಲ್ಲಿ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿರುವ ತನ್ನ ತಂದೆ ಎಪಿಎಸ್ ನಿಂಬಾಡಿಯಾ ಅವರಿಗೆ ವಂದನೆ ಸಲ್ಲಿಸುತ್ತಿರುವ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Mandya: ಮಂಡ್ಯ ಎಸ್ಪಿ ಹುದ್ದೆ ಹರಾಜಿಗಿದೆ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?