Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್

ಅಮ್ಮನಿಗೆ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಖಾಲಿ ಡಬ್ಬಿಗಳು, ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಬಾಕ್ಸ್‌ಗಳು ಏಕೆ ಇಷ್ಟವಾಗುತ್ತವೆ ಎಂದು ನನಗೆ ತಿಳಿದಿಲ್ಲ! ಎಂದು ಟ್ವಿಟ್ಟಿಗರೊಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್
ಪೂಜೆಯ ಫೋಟೋ ಹಂಚಿಕೊಂಡ ಟ್ವಿಟ್ಟರಗರು
Edited By:

Updated on: Mar 21, 2022 | 2:37 PM

ನವದೆಹಲಿ: ಇಂಟರ್ನೆಟ್​ನಲ್ಲಿ ಸದಾ ವಿಚಿತ್ರವಾದ, ಅಚ್ಚರಿಯಿಂದ ಕೂಡಿದ ಮತ್ತು ಖುಷಿಯನ್ನು ಹೆಚ್ಚಿಸುವ ಸಂಗತಿಗಳು ಹರಿದಾಡುತ್ತಲೇ ಇರುತ್ತವೆ. ಫೋಟೋ ತೆಗೆದು, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್​ಲೋಡ್ ಮಾಡುವ ಭರದಲ್ಲಿ ಕೆಲವೊಮ್ಮೆ ಹಲವರು ಮುಜುಗರಕ್ಕೀಡಾದ ಘಟನೆಗಳೂ ನಡೆದಿವೆ. ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೋವನ್ನು ಇಂಟರ್ನೆಟ್​ನಲ್ಲಿ ಅಪ್​ಲೋಡ್ ಮಾಡಿದ್ದ ವ್ಯಕ್ತಿ ನೀಡಿರುವ ಕ್ಯಾಪ್ಷನ್ ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸಾಗರ್ ಎಂಬ ಟ್ವಿಟ್ಟಿಗರು ಮನೆಯಲ್ಲಿ ಪೂಜೆ ನಡೆಸಿದ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇವರಿಗೆ ದೀಪ ಹಚ್ಚಲು ವೋಡ್ಕಾದ ಬಾಟಿಯಲ್ಲಿ ದೀಪದ ಎಣ್ಣೆಯನ್ನು ಹಾಕಿಡಲಾಗಿತ್ತು. ಈ ಫೋಟೋ ನೋಡಿದವರು ತಮಾಷೆಯಿಂದ ಕಮೆಂಟ್ ಮಾಡಿದ್ದಾರೆ.

ದೇವರ ಪೂಜೆ ಸಂದರ್ಭದಲ್ಲಿ ದೀಪ, ಊದುಬತ್ತಿ, ಬತ್ತಿ, ಕರ್ಪೂರ, ವೀಳ್ಯದೆಲೆ ಮುಂತಾದವುಗಳನ್ನು ಇಡಲಾಗುತ್ತದೆ. ಈ ವಸ್ತುಗಳನ್ನೆಲ್ಲ ಇಟ್ಟು ಸಾಗರ್ ಎಂಬುವವರ ಮನೆಯಲ್ಲಿ ಪೂಜೆ ಮಾಡುವಾಗ ಪೂಜೆಗೆ ಬಂದವರ ದೃಷ್ಟಿ ಮಾತ್ರ ದೀಪದ ಎಣ್ಣೆಯನ್ನು ಹಾಕಿಟ್ಟಿದ್ದ ವೋಡ್ಕಾ ಬಾಟಲಿಯ ಮೇಲೇ ಇತ್ತು. ಈ ಫೋಟೋವನ್ನು ಸಾಗರ್ ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಿದ್ದು, ನಮ್ಮ ಮನೆಯಲ್ಲಿ ನಡೆದ ಪೂಜೆಯಲ್ಲಿ ಕುಟುಂಬಸ್ಥರೆಲ್ಲರೂ ಪಾಲ್ಗೊಂಡಿದ್ದರು. ನನಗೆ ತಲೆತಗ್ಗಿಸಲು ಏನು ಮಾಡಬೇಕೋ ಅದನ್ನು ಅಮ್ಮ ಯಶಸ್ವಿಯಾಗಿ ಮಾಡಿದ್ದಾರೆ! ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗೆ ಸಾಕಷ್ಟು ಫನ್ನಿ ಕಮೆಂಟ್​ಗಳು ಕೂಡ ಬಂದಿವೆ.

“ಅಮ್ಮನಿಗೆ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಖಾಲಿ ಡಬ್ಬಿಗಳು, ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಬಾಕ್ಸ್‌ಗಳು ಏಕೆ ಇಷ್ಟವಾಗುತ್ತವೆ ಎಂದು ನನಗೆ ತಿಳಿದಿಲ್ಲ!” ಎಂದು ಆಶಿಶ್ ಮಹೇಂದ್ರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಅಮ್ಮನಿಗೂ ಇಂಗ್ಲಿಷ್ ಓದಲು ಬರುತ್ತಿದ್ದರೆ ಅವರು ತಾವು ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ನೀವು ಈ ಪೋಸ್ಟ್ ಹಾಕಿದ್ದು ಕೂಡ ಅವರಿಗೆ ತಿಳಿದಿರುವುದು ಅನುಮಾನ. ಹೀಗಾಗಿ, ಟ್ವಿಟ್ಟರ್​ನಲ್ಲಿ ನೀವು ಅಮ್ಮನ ಮೇಲೆ ಗೂಬೆ ಕೂರಿಸಿ, ದೂರಿದರೂ ಏನೂ ಪ್ರಯೋಜನವಿಲ್ಲ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ಸಾಗರ್, ನಾನು ಯಾವೆಲ್ಲ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದೇನೆ ಎಂದು ಅಮ್ಮನಿಗೆ ಚೆನ್ನಾಗೇ ಗೊತ್ತು. ಹೀಗಾಗಿ, ಬೇಕೆಂದೇ ಆಗಾಗ ನನ್ನನ್ನು ಮುಜುಗರಕ್ಕೆ ಸಿಕ್ಕಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುತ್ತಾಳೆ ಎಂದಿದ್ದಾರೆ.

ಇದನ್ನೂ ಓದಿ: Viral News: ಶಾಪಿಂಗ್ ಮಾಡುವಾಗ ಗಂಡ ಕಿರಿಕಿರಿ ಮಾಡ್ತಾನಾ?; ಈ ಮಾಲ್​ನಲ್ಲಿದೆ ಹಸ್ಬೆಂಡ್ ಸ್ಟೋರೇಜ್ ಪಾಡ್ಸ್

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Published On - 2:36 pm, Mon, 21 March 22