Viral Photos: ದಂಪತಿ ಹೋಗುತ್ತಿದ್ದ ದೋಣಿಯಲ್ಲಿತ್ತು 7 ಅಡಿ ಉದ್ದದ ಹೆಬ್ಬಾವು!
ಹೆಬ್ಬಾವು ಹಿಂದಿನ ರಾತ್ರಿಯೇ ದೋಣಿಯಲ್ಲಿ ಸೇರಿಕೊಂಡು ಅಡಗಿಕೊಂಡಿತ್ತು. ಈ ಹಾವಿನ ಬಗ್ಗೆ ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅದನ್ನು ಸ್ಥಳೀಯ ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ದಕ್ಷಿಣ ಚಿಕಾಗೋದ ದಂಪತಿಗಳು ಹೋಗುತ್ತಿದ್ದ ದೋಣಿಯೊಳಗೆ ನುಸುಳಿದ ನಂತರ 7 ಅಡಿ ಹೆಬ್ಬಾವು ದಕ್ಷಿಣ ಫ್ಲೋರ್ಡಿಯಾದಾದ್ಯಂತ ಪ್ರಯಾಣಿಸಿದೆ. ವರದಿಗಳ ಪ್ರಕಾರ, ಹಾವು ಇದ್ದಕ್ಕಿದ್ದಂತೆ ದೋಣಿ ಹತ್ತಿದೆ. ಹಾಗೇ, ಜಿಮ್ ಹಾರ್ಟ್ ಮತ್ತು ಸ್ಯಾಂಡಿ ಸ್ಕ್ವಿರುಟ್ ಅವರು ನೈಋತ್ಯ ಫ್ಲೋರಿಡಾದ ಗಲ್ಫ್ ಕರಾವಳಿಯಲ್ಲಿರುವ ಮಾರ್ಕೊ ಐಲ್ಯಾಂಡ್‌ನ ರೋಸ್ ಮರೀನಾದಲ್ಲಿ ಹೋಗುತ್ತಿದ್ದಾಗ ದೋಣಿಯಲ್ಲಿ ಹೆಬ್ಬಾವು ಇರುವುದು ಪತ್ತೆಯಾಗಿದೆ.
ಹೆಬ್ಬಾವು ಹಿಂದಿನ ರಾತ್ರಿಯೇ ದೋಣಿಯಲ್ಲಿ ಸೇರಿಕೊಂಡು ಅಡಗಿಕೊಂಡಿತ್ತು. ಈ ಹಾವಿನ ಬಗ್ಗೆ ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅದನ್ನು ಸ್ಥಳೀಯ ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಮಾರ್ಕೊ ಐಲ್ಯಾಂಡ್ ಪೋಲೀಸ್ ಅಧಿಕಾರಿಗಳು ತನ್ನ ತೋಳಿನ ಸುತ್ತಲೂ ಹಾವನ್ನು ಸುತ್ತುವ ಮೂಲಕ ದೋಣಿಯಲ್ಲಿ ನಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.
ರೋಸ್ ಮರೀನಾ ಮಾರ್ಕೊ ಐಲ್ಯಾಂಡ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ ಹಾವನ್ನು ಹಿಡಿದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಬರ್ಮೀಸ್ ಹೆಬ್ಬಾವುಗಳು ಆಕ್ರಮಣಕಾರಿ ಜಾತಿಗಳಾಗಿವೆ. ಫ್ಲೋರಿಡಾ ವೈಲ್ಡ್ ರೇಂಜ್ನಲ್ಲಿ ಕಂಡುಬರುವ ಹಾವುಗಳು 6ರಿಂದ 10 ಅಡಿ ಉದ್ದವಿರುತ್ತವೆ. ಕೆಲವು 18 ಅಡಿ ಉದ್ದ ಕೂಡ ಇರುತ್ತದೆ.
ಕೆಲವು ಭಾರತೀಯ ಹೆಬ್ಬಾವುಗಳು ದಕ್ಷಿಣ ಫ್ಲೋರಿಡಾದಲ್ಲಿ ಬರ್ಮೀಸ್ ಹೆಬ್ಬಾವುಗಳೊಂದಿಗೆ ಮಿಶ್ರತಳಿಯಾಗಿವೆ ಎಂದು 2018 ರ ಅಧ್ಯಯನವು ಬಹಿರಂಗಪಡಿಸಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆಯಲ್ಲಿ ವನ್ಯಜೀವಿ ಸಂಶೋಧಕರು ನಡೆಸಿದ ಅಧ್ಯಯನವು ಪರಿಸರ ವಿಜ್ಞಾನ ಮತ್ತು ಎವಲ್ಯೂಷನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ: Viral Video: ಕಡಲ ತೀರದಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ನಾಗರ ಹಾವು!
Shocking Video: ತನ್ನ ತೊಡೆಯ ಮೇಲೆ ಹರಿದು ಬಂದ ಹಾವು ನೋಡಿ ವ್ಯಕ್ತಿ ಕಂಗಾಲು! ಮುಂದೇನಾಯ್ತು? ವಿಡಿಯೊ ನೋಡಿ