ಭಾರತೀಯ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೋಟುಗಳಲ್ಲಿ ಪ್ರದರ್ಶಿಸಲಾದ ನಮ್ಮ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ನೋಟವನ್ನು ಕಾಣಬಹುದು. ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಿಸಲಾದ ಐತಿಹಾಸಿಕ ಸ್ಥಳಗಳು ಮತ್ತು ಘಟನೆಗಳನ್ನು ಒಳಗೊಂಡಿರುವ ಟ್ವಿಟರ್ ಪೋಸ್ಟ್ ವೈರಲ್ ಆಗುತ್ತಿದೆ. 10 ರೂಪಾಯಿ ನೋಟಿನಿಂದ ಹಿಡಿದು 2000 ರೂಪಾಯಿ ನೋಟಿನ ವರೆಗೆ ಆಯಾ ನೋಟಿನಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಹೋಗಿ ಆಯಾ ನೋಟನ್ನು ಆ ಐತಿಹಾಸಿಕ ಸ್ಥಳಗಳ ಮುಂದೆ ಹಿಡಿದು ಕ್ಲಿಕ್ಕಿಸಿದ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.
ಟ್ವಿಟರ್ನಲ್ಲಿ ದೇಸಿ ಥಗ್ (@desi_thug1) ಎಂಬ ಖಾತೆಯಲ್ಲಿ ‘ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಿತ ಐತಿಹಾಸಿಕ ಸ್ಮಾರಕಗಳು ಮತ್ತು ಘಟನೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಈ ವೈರಲ್ ಪೋಸ್ಟ್ ನ್ನು ಹಂಚಿಕೊಳ್ಳಲಾಗಿದೆ.
Historical Monuments and Events Printed on Indian Currency Notes
1. Konark Mandir – 10 Rs Note pic.twitter.com/NWkdxk9pky
— Desi Thug (@desi_thug1) April 28, 2023
ಈ ಪೋಸ್ಟ್ ಮೊದಲಿಗೆ ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದ 10 ರೂಪಾಯಿ ನೋಟಿನ ಚಿತ್ರದೊಂದಿಗೆ ಪ್ರಾರಂಭವಾಗುತ್ತದೆ. ಕೈಲಾಸ ದೇವಾಲಯವನ್ನು ಒಳಗೊಂಡಿರುವ 20 ರೂಪಾಯಿ ನೋಟು: ಎಲ್ಲೋರಾದ 13ನೇ ಶತಮಾನದ ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಈ ದೇವಾಲಯವನ್ನು ಮೇಲಿನಿಂದ ಕೆಳಗೆ ನಿರ್ಮಿಸಲಾಗಿದೆ.
ಇದನ್ನೂ ಓದಿ: Viral Video: ಮೊದಲ ಹೆಜ್ಜೆ ಇಡಲು ಹರಸಾಹಸ ಪಡುತ್ತಿರುವ ಜಿರಾಫೆ
ಹಂಪಿಯ ಕಲ್ಲಿನ ರಥದ ಚಿತ್ರವನ್ನೊಳಗೊಂಡಿರುವ 50 ರೂ: ಹಂಪಿಯು ಯುನೆಸ್ಕೋ ಪರಂಪರೆಯ ತಾಣವಾಗಿದೆ 50 ರೂಪಾಯಿ ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿದೆ. ರಾಣಿ ಕಿ ವಾವ್ ಚಿತ್ರವನ್ನೊಳಗೊಂಡ 100 ರೂಪಾಯಿ ನೋಟು: ಗುಜರಾತ್ನಲ್ಲಿರುವ ರಾಣಿ ಕಿ ವಾವ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. 100 ರೂ. ನೋಟಿನಲ್ಲಿ ಈ ಸ್ಥಳದ ಚಿತ್ರವನ್ನು ಮುದ್ರಿಸಲಾಗಿದೆ.
ಸಾಂಚಿ ಸ್ತೂಪದ ಚಿತ್ರವನ್ನೊಳಗೊಂಡ 200 ರೂ. ನೋಟು: ಟ್ವಿಟರ್ ಬಳಕೆದಾರರು ನಂತರ ಸಾಂಚಿ ಸ್ತೂಪದ ಬಳಿ ವ್ಯಕ್ತಿಯೊಬ್ಬರು ಕೈಯಲ್ಲಿ 200 ರೂ ನೋಟನ್ನು ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಕೆಂಪುಕೋಟೆಯ ಚಿತ್ರವನ್ನೊಳಗೊಂಡ 500 ರೂ. ನೋಟು: ದೆಹಲಿಯ ಕೆಂಪುಕೋಟೆಯ ಚಿತ್ರವನ್ನು 500ರೂ. ನೋಟಿನಲ್ಲಿ ಮುದ್ರಿಸಲಾಗಿದೆ. 2000 ರೂ ನೋಟು: ಈ ನೋಟಿನಲ್ಲಿ ಯಾವುದೇ ಸ್ಮಾರಕವಿಲ್ಲ. ಬದಲಾಗಿ ಭಾರತದ ಮೊದಲ ಯಶಸ್ವಿ ಮಂಗಳಯಾನದ ಚಿತ್ರವನ್ನು ಮುದ್ರಿಸಲಾಗಿದೆ.
ಏಪ್ರಿಲ್ 28 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.7 ಮಿಲಿಯನ್ ವೀಕ್ಷಣೆಗಳನ್ನು ಮತ್ತು 22 ಸಾವಿರಕ್ಕಿಂತಲೂ ಹೆಚ್ಚಿನ ಲೈಕ್ಸ್ ಪಡೆದುಕೊಂಡಿದೆ. ಅನೇಕರು ಈ ಪೋಸ್ಟ್ಗೆ ಕಮೆಂಟ್ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಎಷ್ಟು ಆಕರ್ಷಕವಾಗಿದೆಯಲ್ಲವೇ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅತ್ಯುತ್ತಮ ಮಾಹಿತಿ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಚಿತ್ರಗಳನ್ನು ಸೆರೆಹಿಡಿದ ರೀತಿ ಇಷ್ಟವಾಯಿತು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:27 pm, Mon, 1 May 23