ಈ ಹೀರೋಗಳು ಮುದುಕರಾದಾಗ!; ಇವರನ್ನು ಗುರುತಿಸಬಲ್ಲಿರಾ?

| Updated By: ಶ್ರೀದೇವಿ ಕಳಸದ

Updated on: May 12, 2023 | 11:15 AM

AI : ಸಲ್ಮಾನ್​, ಪ್ರಭಾಸ್​, ಅಕ್ಷಯ್ ಅವರುಗಳನ್ನು ಗುರುತಿಸಬಹುದು, ಉಳಿದವರನ್ನು ಥಟ್ಟನೆ ಗುರುತಿಸಲಾಗದು. ಶಾರುಖ್ ಖಾನ್​ ಇಮ್ರಾನ್​ ಖಾನ್​ನಂತೆ ಕಾಣುತ್ತಿದ್ದಾರೆ... ಹೀಗೆಲ್ಲ ಪ್ರತಿಕ್ರಿಯೆಗಳಿವೆ ಇಲ್ಲಿ. ನಿಮಗೇನೆನ್ನಿಸುತ್ತದೆ?

ಈ ಹೀರೋಗಳು ಮುದುಕರಾದಾಗ!; ಇವರನ್ನು ಗುರುತಿಸಬಲ್ಲಿರಾ?
ಕಲೆ : ಎಐ ಕಲಾವಿದ ಎಸ್​ಕೆ ಎಂಡಿ ಅಬು ಸಾಹಿದ್
Follow us on

Viral News : ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ ಈವತ್ತು ಊಹಿಸಲಾಗದ ಮಟ್ಟಿಗೆ ವ್ಯಾಪಿಸಿಕೊಂಡಿದೆ. ಕಲಾಜಗತ್ತಿನಲ್ಲಿಯೂ ಇದು ದಾಪುಗಾಲಿಡುತ್ತಲೇ ಇದೆ. ಕ್ಷಣಾರ್ಧದಲ್ಲಿ ನಂಬಲಸಾಧ್ಯವಾದಂಥ ಫಲಿತಾಂಶವನ್ನು ಇದು ನಿಮ್ಮೆದುರು ತೆರೆದಿಡುತ್ತದೆ. ಇದೀಗ ವೈರಲ್ ಆಗಿರುವ ಈ ಫೋಟೋಗಳನ್ನು ನೋಡಿ. ಎಐ (AI) ಕಲಾವಿದರೊಬ್ಬರು ಸಿನೆಮಾ ನಾಯಕರುಗಳನ್ನು ಹೇಗೆ ಹಿಡಿದಿಟ್ಟಿದ್ದಾರೆ. ತೆರೆಯ ಮೇಲೆ ಚಿರಯೌವ್ವನಿಗರಾಗಿಯೇ ಕಾಣುವ ನಟನಟಿಯರು ನಿಜವಾಗಲೂ ವಯಸ್ಸಾದ ಮೇಲೆ ಹೇಗೆ ಕಾಣಬಹುದು ಎಂಬ ಕುತೂಹಲವನ್ನು ಇದು ತಣಿಸುವಂತಿದೆ.

ಎಐ ಕಲಾವಿದರಾದ ಎಸ್​ ಕೆ ಎಂ ಡಿ ಅಬು ಸಾಹಿದ್​ ಇವರು ಇದೀಗ 10 ನಾಯಕ ನಟರ ಚಿತ್ರಗಳನ್ನು ಎಐನಲ್ಲಿ ಚಿತ್ರಿಸಿ ಅಂತರ್ಜಾಲದಲ್ಲಿ ಪ್ರಕಟಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್​ ಖಾನ್, ಅಮೀರ್ ಖಾನ್, ಪ್ರಭಾಸ್​, ಶಾಹೀದ್ ಕಪೂರ್​, ಅಲ್ಲು ಅರ್ಜುನ್​, ಅಕ್ಷಯ್ ಕುಮಾರ್ ರಣಬೀರ್, ಕಪೂರ್, ಹೃತಿಕ್ ರೋಷನ್​ ಮತ್ತು ಮಹೇಶ ಬಾಬು ಅವರುಗಳೆಲ್ಲ ವಯಸ್ಸಾದ ಮೇಲೆ ಹೇಗೆ ಕಾಣುತ್ತಾರೆ ಎಂದು ನೀವಿಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು

ಎರಡು ದಿನಗಳ ಹಿಂದೆ ಸಾಹಿದ್​ ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ಈಗಾಗಲೇ 46,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 500 ಜನರು ಪ್ರತಿಕ್ರಿಯಿಸಿದ್ದಾರೆ. ಅನಿಲ್​ ಕಪೂರ್​ ಎಂದು ಅನ್ನಿಸುವುದೇ ಇಲ್ಲ ಎಂದು ಒಬ್ಬರು ಹೇಳಿದ್ದಾರೆ. ಸಲ್ಮಾನ್​, ಪ್ರಭಾಸ್​, ಅಕ್ಷಯ್ ಅವರುಗಳನ್ನು ಗುರುತಿಸಬಹುದು. ಉಳಿದವರು ಥಟ್ಟನೆ ಗುರುತಿಸಲಾಗದು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಗಗನಯಾನಿ ವಧು; ಕಲಾವಿದರ ಕಲ್ಪನೆಗೆ ಒತ್ತಾಸೆ ನೀಡಿದ ಎಐ ತಂತ್ರಜ್ಞಾನ

ಶಾರುಖ್​ ಇಮ್ರಾನ್​ ಖಾನ್​ನಂತೆ ಕಾಣುತ್ತಾನೆ ಎಂದು ಮಗದೊಬ್ಬರು ಹೇಳಿದ್ದಾರೆ. ಧೂಮ್​ 2ನಲ್ಲಿರುವಂತೆಯೇ ಇದ್ದಾರೆ ಹೃತಿಕ್​ ರೋಷನ್ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ರಣಬೀರ್​ ಸಂಜಯ್​ ದತ್​ರಂತೆ ಕಾಣುತ್ತಿಲ್ಲವೆ ಎಂದು ಇನ್ನ್ಯಾರೋ ಕೇಳಿದ್ದಾರೆ.

ಈ ಚಿತ್ರಗಳನ್ನು ನೋಡಿದ ನಿಮಗೆ ಏನನ್ನಿಸುತ್ತದೆ? ಸಾಮ್ಯತೆ ಹೇಗಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 11:14 am, Fri, 12 May 23