
ISRO : ‘ಇಸ್ರೋ ಅಧ್ಯಕ್ಷ ಸೋಮನಾಥ್ (Somanath) ಅವರ ತಿಂಗಳ ವೇತನ ರೂ. 2.5 ಲಕ್ಷ, ಇದು ನ್ಯಾಯಸಮ್ಮತವೇ? ಇಂಥ ಜನರುಗಳನ್ನು ಸಂಬಳ ಮತ್ತು ಹಣಕ್ಕೂ ಮೀರಿದ ಅಂಶಗಳು ಪ್ರೇರೇಪಿಸುತ್ತಿರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಅತ್ಯಂತ ಆಸ್ಥೆ ಮತ್ತು ಪ್ರೀತಿಯಿಂದ ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ ತೊಡಗಿಕೊಂಡು ದೇಶಕ್ಕೆ ಕೊಡುಗೆ ಕೊಡಲು ಮತ್ತು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಲು ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುತ್ತಾರೆ. ಇಂಥವರಿಗೆ ನಾನು ಶಿರಬಾಗುವೆ.’ ಎಂದು X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಉದ್ಯಮಿ ಹರ್ಷ ಗೋಯೆಂಕಾ. ನೆಟ್ಟಿಗರು ಈ ಪೋಸ್ಟ್ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್
ಈ ಪೋಸ್ಟ್ ಅನ್ನು ಸೆಪ್ಟೆಂಬರ್ 12 ರಂದು ಹಂಚಿಕೊಳ್ಳಲಾಗಿದೆ. 7.2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, ಸುಮಾರು 1,000 ಜನರು ರೀಪೋಸ್ಟ್ ಮಾಡಿದ್ದಾರೆ. 600ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ನೀವು ಹೇಳಿದಂತೆ ಅವರಿಗೆ ಯಶಸ್ಸು ಮತ್ತು ದೇಶದ ಹೆಮ್ಮೆಯೇ ಅವರಿಗೆ ದೊಡ್ಡದು ಎಂದಿದ್ದಾರೆ ಒಬ್ಬರು.
ಅವರಿಗೆ ಸಂಬಳವನ್ನು ಪರಿಷ್ಕರಿಸುವ ಅಗತ್ಯವಿಲ್ಲ. ಪ್ರತಿ ಯಶಸ್ವಿ ಕಾರ್ಯಾಚರಣೆಯ ನಂತರ ಅವರಿಗೆ ಉತ್ತಮ ಮಟ್ಟದಲ್ಲಿ ಪ್ರೋತ್ಸಾಹ ನೀಡಿ ಎಂದಿದ್ದಾರೆ ಒಬ್ಬರು. ಪ್ರತೀ ತಿಂಗಳು ರೂ. 5 ಲಕ್ಷ ಕೊಡಬೇಕು ಎಂದಿದ್ದಾರೆ ಇನ್ನೊಬ್ಬರು. ನೀವು ಹೇಳಿದ್ದು ಸರಿ ಇದೆ, ಅವರಿಗೆ ಭಾರೀ ಮೊತ್ತದ ಸಂಬಳವನ್ನು ನೀಡಬೇಕು ಎಂದಿದ್ದಾರೆ ಮತ್ತೊಬ್ಬರು. ನೀವು ಅವರಿಗೆ ಏನಾದರೂ ಉಡುಗೊರೆ ಕೊಡಲು ಯೋಚಿಸಿದ್ದೀರಾ? ಎಂದು ಕೇಳಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:05 pm, Tue, 12 September 23