Viral: ರೈಲು ಬೋಗಿಯ ಒಳಗೆ ಬೆಳೆದ ಅಣಬೆಗಳು; ಫೋಸ್ಟ್ ವೈರಲ್
ರೈಲಿನ ಬೋಗಿಯ ಒಳಗೆ ಅಣಬೆಗಳು ಬೆಳೆದಿರುವ ಫೋಟೋಗಳನ್ನು ಟ್ವಟಿರ್ ಬಳಕೆದಾರೊಬ್ಬರು ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ರೈಲುಗಳು ಎಷ್ಟು ಸ್ವಚ್ಛವಾಗಿರುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.
ಕೊಳಕು ಬೋಗಿಗಳು, ದುರ್ವಾಸನೆ ಬೀರುವ ಶೌಚಾಲಯಗಳು ಕೆಲವು ರೈಲುಗಳಲ್ಲಿ ಸಾಮಾನ್ಯವಾಗಿದೆ. ರೈಲ್ವೇ ತನ್ನ ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ನಿಯಮಗಳನ್ನು ಮಾಡಿದ್ದರೂ, ಜನರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದೀಗ ಇದಕ್ಕೊಂದು ಉತ್ತಮ ಉದಾಹರಣೆ ಎಂಬ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ರೈಲಿನ ಬೋಗಿಯ ಒಳಗೆ ಅಣಬೆಗಳು ಬೆಳೆದಿರುವ ಫೋಟೋಗಳನ್ನು ಟ್ವಟಿರ್ ಬಳಕೆದಾರೊಬ್ಬರು ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
@B7801011010 ಎಂಬ ಟ್ವಿಟರ್ ಖಾತೆಯಲ್ಲಿ ರೈಲು ಬೋಗಿಯ ಒಳಗೆ ಬೆಳೆದ ಅಣಬೆಗಳ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಆಗಸ್ಟ್ 20 ರಂದು ಹಂಚಿಕೊಂಡಿರುವ ಈ ಪೋಸ್ಟ್ ಕೇವಲ ಎರಡು ದಿನಗಳಲ್ಲಿ 92 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಪೋಸ್ಟ್ ಇಲ್ಲಿದೆ ನೋಡಿ:
Only in India
Vegetarian passengers travelling long journeys can now pluck their own mushrooms in 2 or 3 days’ travel. pic.twitter.com/ceZH8mxpLc
— Брат (@B7801011010) August 20, 2024
ಇದನ್ನೂ ಓದಿ: ಸೌಂದರ್ಯ ಹೆಚ್ಚಿಸಲು 6 ಲಕ್ಷ ರೂ. ಖರ್ಚು ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು
ಪ್ಯಾಸೆಂಜರ್ ರೈಲಿನ ಬೋಗಿಯಲ್ಲಿ ಅಣಬೆಗಳು ಬೆಳೆದಿರುವುದು ಪ್ರಯಾಣಿಕರಿಗೆ ಕಂಡು ಬಂದಿದೆ. ಬೋಗಿಯ ಮೇಲ್ಭಾಗದಲ್ಲಿ ಐದಾರು ಅಣಬೆಗಳು ಬೆಳೆದಿದ್ದು, ಅದನ್ನು ನೋಡಿದ ಪ್ರಯಾಣಿಕರೊಬ್ಬರು ಕೂಡಲೇ ತಮ್ಮ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ರೈಲುಗಳು ಎಷ್ಟು ಸ್ವಚ್ಛವಾಗಿರುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ