Video: ನಮ್ಮಪ್ಪನನ್ನು ಜೈಲಿಗೆ ಹಾಕಿ, ತಂದೆಯ ವಿರುದ್ಧ ದೂರು ನೀಡಲು ಠಾಣೆಗೆ ಬಂದ 5 ವರ್ಷದ ಬಾಲಕ
ಪೊಲೀಸರ ಹೆಸರು ಕೇಳಿದರೆ ಮಕ್ಕಳು ಹೆದರುವ ಕಾಲವೊಂದಿತ್ತು. ಆದರೆ ಈಗಿನ ಯಾರ ಭಯಾವು ಇಲ್ಲ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಯಾರ ಭಯವೂ ಇಲ್ಲದೆ 5 ವರ್ಷದ ಪುಟ್ಟ ಪೋರನೊಬ್ಬ ನದಿ ನೀರಿನಲ್ಲಿ ಆಟವಾಡಲು ಬಿಡದ ತಂದೆಯ ವಿರುದ್ಧ ಕಂಪ್ಲೇಂಟ್ ಕೊಡಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಪುಟ್ಟ ಹುಡುಗನ ಮಾತಿಗೆ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಈಗಿನ ಕಾಲದ ಮಕ್ಕಳಂತೂ ತುಂಬಾನೇ ಫಾಸ್ಟ್ ಮತ್ತು ಸಿಕ್ಕಾಪಟ್ಟೆ ಚೂಟಿ ಇರ್ತಾರೆ. ಯಾರಿಗೂ ಭಯ ಪಡದೆ ಪಟ ಪಟ ಅಂತಾ ಮಾತಾಡ್ತಾರೆ. ಆದ್ರೆ ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ ಮಕ್ಕಳು ಹೆತ್ತವರಿಗೆ ಮಾತ್ರವಲ್ಲ ಪೊಲೀಸರ ಹೆಸರು ಹೇಳಿದ್ರೂ ಭಯ ಪಡ್ತೀದ್ರೂ. ಆದ್ರೆ ಈಗ ಕಾಲ ಬದಲಾಗಿದೆ ಹೆತ್ತವರು ಬಿಡಿ ಈ ಮಕ್ಳಿಗೆ ಪೊಲೀಸ್ರ ಭಯ ಕೂಡಾ ಇಲ್ಲ ಕಣ್ರೀ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಯಾರ ಭಯವೂ ಇಲ್ಲದೆ 5 ವರ್ಷದ ಪುಟ್ಟ ಪೋರನೊಬ್ಬ ನದಿ ನೀರಿನಲ್ಲಿ ಆಟವಾಡಲು ಬಿಡದ ತಂದೆಯ ವಿರುದ್ಧವೇ ಪೊಲೀಸ್ ಠಾಣೆಗೆ ಹೋಗಿ ತಂದೆಯನ್ನು ಬಂಧಿಸುವಂತೆ ಕಂಪ್ಲೇಂಟ್ ಕೊಟ್ಟು ಬಂದಿದ್ದಾನೆ. ಈ ಬಾಲಕನ ಮಾತಿಗೆ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಮಧ್ಯಪ್ರದೇಶದ ಧಾರ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆಯ ವಿರುದ್ಧ ದೂರು ನೀಡಲು ಪುಟ್ಟ ಪೋರನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ನನ್ನ ತಂದೆ ಬೀದಿಯಲ್ಲಿ ಸುತ್ತಾಡಲು ಬಿಡುವುದಿಲ್ಲ, ನದಿ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲವೆಂದು ಕೋಪಗೊಂಡ ಬಾಲಕ ಹಸನೈನ್ ತನ್ನ ತಂದೆ ಇಕ್ಬಾಲ್ ನನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗೆ ದೂರನ್ನು ನೀಡಿದ್ದಾನೆ.
ವೈರಲ್ ವಿಡಿಯೋ ಇಲ್ಲಿದ ನೋಡಿ:
మా నాన్న నన్ను ఆడుకోనివ్వడంలేదు.. మా నాన్నని జైల్లో వేయండి అంటూ ఓ ఇదేళ్ల బుడ్డోడి పిర్యాదు
మధ్య ప్రదేశ్ – ధార్కి చెందిన హుస్సేన్ అనే బాలుడు తన తండ్రి ఆడుకొనివ్వడం లేదు, నదిలో ఈత కొట్టనివ్వడం లేదు అంటూ పోలీస్ స్టేషన్ కి వెళ్లి.. వచ్చి రాని మాటలతో పిర్యాదు చేసాడు.
ఐతే తన తండ్రి… pic.twitter.com/mAecNODNJa
— Telugu Scribe (@TeluguScribe) August 21, 2024
ಈ ಕುರಿತ ಪೋಸ್ಟ್ ಒಂದನ್ನು TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನದಿ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲವೆಂದು ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದ 5 ವರ್ಷ ವಯಸ್ಸಿನ ಬಾಲಕ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬಾಲಕ ಪೊಲೀಸ್ ಅಧಿಕಾರಿಯ ಜೊತೆ ತನ್ನ ತಂದೆಯ ವಿರುದ್ಧ ದೂರು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ತಂದೆಯನ್ನು ಬಂದಧಿಸುವಂತೆ ಕಂಪ್ಲೇಂಟ್ ಕೊಡಲು ಬಂದ ಬಾಲಕ, ನನ್ನ ಅಪ್ಪ ಬೀದಿ ಬದಿ ಆಟವಾಡಲು ಬಿಡುತ್ತಿಲ್ಲ, ನದಿ ಕಡೆ ಹೋದ್ರೆ ಗದರುತ್ತಾರೆ ಎಂದು ದೂರನ್ನು ನೀಡಿದ್ದಾನೆ. ಪೊಲೀಸ್ ಅಧಿಕಾರಿ ತುಂಟ ಬಾಲಕನ ದೂರನ್ನು ಆಲಿಸಿ ತಂದೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿ ಮನೆಗೆ ಕಳಿಸಿದ್ದಾರೆ.
ಇದನ್ನೂ ಓದಿ: ಅಯ್ಯಯ್ಯೋ…… ಲಿಪ್ ಲಾಕ್ ಮಾಡಲು ಹೋಗಿ ಪ್ರಿಯತಮೆಯ ಬಾಯಿಗೆ ವಾಂತಿ ಮಾಡಿದ ಯುವಕ
ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 50 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಈಗಿನ ಕಾಲದ ಮಕ್ಕಳು ತುಂಬಾನೇ ಚೂಟಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಪುಟ್ಟ ಪೋರನ ಧೈರ್ಯಕ್ಕೆ ಮೆಚ್ಚಲೇಬೇಕು’ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ