Video: ಅಯ್ಯಯ್ಯೋ…… ಲಿಪ್ ಲಾಕ್ ಮಾಡಲು ಹೋಗಿ ಪ್ರಿಯತಮೆಯ ಬಾಯಿಗೆ ವಾಂತಿ ಮಾಡಿದ ಯುವಕ
ಹೆಚ್ಚಿನವರು ತಮ್ಮ ಪ್ರೇಮಿಗಳಿಗೆ ಸಿಹಿ ಮುತ್ತು ಕೊಡುವ ಮೂಲಕ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತನ್ನ ಮನದನ್ನೆಗೆ ಪ್ರೀತಿಯಿಂದ ಲಿಪ್ ಟು ಲಿಪ್ ಕಿಸ್ ಕೊಡಲು ಹೋಗಿ ಅದೇನಾಯ್ತೋ ಗೊತ್ತಿಲ್ಲ ಡೈರೆಕ್ಟ್ ಆಕೆಯ ಬಾಯಿಗೆ ವಾಂತಿ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಿಸ್’ ಅಥವಾ ಚುಂಬನವನ್ನು ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಪ್ರೇಮ ಪಕ್ಷಿಗಳು ಪರಸ್ಪರ ಮುತ್ತು ಕೊಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತನ್ನ ಪ್ರಿಯತಮೆಗೆ ಪ್ರೀತಿಯಿಂದ ಲಿಪ್ ಟು ಲಿಪ್ ಕಿಸ್ ಕೊಡಲು ಹೋಗಿ ದೊಡ್ಡ ಪಜೀತಿ ಮಾಡಿಕೊಂದಿದ್ದಾನೆ. ಹೌದು ಆತ ಲಿಪ್ ಕಿಸ್ ಕೊಡಲು ಹೋಗಿ ಅದೇನಾಯ್ತೋ ಗೊತ್ತಿಲ್ಲ ಡೈರೆಕ್ಟ್ ಪ್ರೇಯಸಿಯ ಬಾಯಿಗೆಯೇ ವಾಂತಿ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿ ಇದೆಂತಾ ಅವಸ್ಥೆ ಮಾರ್ರೆ ಎಂದು ನೆಟ್ಟಿಗರು ನಕ್ಕಿದ್ದಾರೆ.
ಯಾರಾದ್ರೂ ವಾಂತಿ ಮಾಡ್ತಿದ್ದಾರೆ ಅಂದ್ರೆನೇ ಎಲ್ರೂ ಮಾರು ದೂರ ಓಡಿ ಹೋಗ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಮುತ್ತು ಕೊಡಲು ಹೋದಾಗ ತನ್ನ ಗೆಳತಿಯ ಬಾಯಿಗೆಯೇ ವಾಂತಿ ಮಾಡಿಕೊಂಡಿದ್ದಾನೆ. ಈ ಕುರಿತ ಪೋಸ್ಟ್ ಒಂದನ್ನು sindicatodedomm ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿಯೇ ತನ್ನ ಪ್ರೇಯಸಿಗೆ ಪ್ರೀತಿಯಿಂದ ಲಿಪ್ ಕಿಸ್ ಮಾಡುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಪರಸ್ಪರ ಲಿಪ್ ಲಾಕ್ ಮಾಡಲು ಹೋಗಿ, ಅದೇನಾಯ್ತೋ ಗೊತ್ತಿಲ್ಲ ಆ ಯುವಕ ಇದ್ದಕ್ಕಿದ್ದಂತೆ ತನ್ನ ಪ್ರೇಯಸಿಯ ಬಾಯಿಗೆಯೇ ವಾಂತಿ ಮಾಡಿಕೊಂದಿದ್ದಾನೆ. ಹೀಗೆ ಪ್ರೀತಿ ವ್ಯಕ್ತ ಪಡಿಸಲು ಹೋಗಿ ದೊಡ್ಡ ಅದ್ವಾನವೇ ಆಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಕೈಯಿಂದ ಹಾರದೆ ದೊಪ್ಪನೆ ಕೆಳ ಬಿದ್ದ ಪಾರಿವಾಳ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
No amigo 💀💀 pic.twitter.com/9CtVZMMHzc
— Usuarios siendo domados (@sindicatodedomm) August 19, 2024
ಆಗಸ್ಟ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8. 6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಛಿ ಛೀ ಇದೆಂತಾ ಅಸಹ್ಯ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅಯ್ಯೋ ದೇವ್ರೇ ಇದೇನಿದು’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಮೂಗು ಮುರಿದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ