Viral: ಮೃತ ಅಜ್ಜಿಯೇ ಇವರ ಕಾಫಿ ಟೇಬಲ್!? ಇಲ್ಲಿದೆ ​ಫ್ಯಾಕ್ಟ್ ಚೆಕ್

|

Updated on: Jun 22, 2023 | 3:05 PM

Coffee Table : ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ ಈ ಚಿತ್ರ. ಆದರೆ ಹಿಂದಿರುವ ಆ ಮೂವರು ಯಾಕೆ ನಗುತ್ತಿದ್ದಾರೆ ಎನ್ನುವುದು ನೆಟ್ಟಿಗರನ್ನು ಗುಂಗಿಗೆ ಬೀಳಿಸಿದೆ. ಸತ್ಯ ಗೊತ್ತಾದ ಮೇಲೆ...

Viral: ಮೃತ ಅಜ್ಜಿಯೇ ಇವರ ಕಾಫಿ ಟೇಬಲ್!? ಇಲ್ಲಿದೆ ​ಫ್ಯಾಕ್ಟ್ ಚೆಕ್
ಮೃತ ಅಜ್ಜಿಯನ್ನು ಕಾಫಿ ಟೇಬಲ್​ನಲ್ಲಿ ಹುದುಗಿಸಿಡಲಾಯಿತೇ?
Follow us on

Fact Check : ಶೀರ್ಷಿಕೆ ಓದಿದಲ್ಲಿ ಅಚ್ಚರಿ, ಗಾಬರಿ, ಭಯ, ಇನ್ನೇನೆಲ್ಲವೂ ಒಮ್ಮೆಲೇ ನುಗ್ಗಿಬರುವುದು ಸಹಜ. ಗಾಜಿನ ಚೌಕದೊಳಗೆ ತಮ್ಮ ಮೃತ ಅಜ್ಜಿಯನ್ನು ಅಡಗಿಸಿದ ಇವರು ಕಾಫಿ ಟೇಬಲ್​ನಂತೆ (Coffee Tabel) ಉಪಯೋಗಿಸುತ್ತಿದ್ದಾರೆ ಎಂಬ ಶೀರ್ಷಿಕೆ ಹೊತ್ತ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ. ಆದರೆ ಈ ಅಜ್ಜಿಯ ಹಿಂದಿರುವ ಈ ಮೂವರು ಯಾಕೆ ನಗುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲವಲ್ಲ ಎಂದು ಕೆಲವರು ಹುಬ್ಬುಗಂಟು ಹಾಕಿಕೊಂಡು ಯೋಚಿಸುತ್ತಿದ್ದಾರೆ. ಇನ್ನೂ ಕೆಲವರು ಇದು ನಕಲಿ (Fake)​ ಇರಬೇಕು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನೀವೇನಂತೀರಿ?

ಜೂನ್ 20 ರಂದು ಕ್ರಿಸ್ ರೇ ಗನ್ ಎಂಬ ಕಾಮೆಡಿಯನ್​ ಇದನ್ನು ಟ್ವೀಟ್ ಮಾಡಿದ್ದಾರೆ. ಈ ಕುಟುಂಬವು ಮೃತ ಅಜ್ಜಿಯನ್ನು ಹೀಗೆ ಗಾಜಿನಚೌಕದಲ್ಲಿರಿಸಿ ಕಾಫಿ ಟೇಬಲ್​ನಂತೆ ಬಳಸುತ್ತಿದೆ ಎಂಬ ಶೀರ್ಷಿಕೆಯನ್ನು ಕೊಟ್ಟು ನೆಟ್ಟಿಗರನ್ನು ಗಾಬರಿಗೆ ಕೆಡವಿದ್ದಾರೆ. ವಿಚಿತ್ರವಾದ ಈ ಟ್ವೀಟ್​ ಅತಿ ವೇಗದಲ್ಲಿ ಹರಿದಾಡಿ ಸುಮಾರು 8 ಮಿಲಿಯನ್​ ವೀಕ್ಷಣೆಯನ್ನು ಗಳಿಸಿದೆ. ಲಕ್ಷಾಂತರ ಜನರು ಇದನ್ನು ಮರುಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಡ್ಯಾನ್ಸಿಂಗ್​​ ಗೋಲ್ಗಪ್ಪಾ, ಶೀ…; ಅಯ್ಯಯ್ಯಪ್ಪಾ; ತಿಂದವರಿಗೆ ಆಸ್ಪತ್ರೆಯೇ ಗತಿ!

ಇದನ್ನು ನೋಡಿದ ಕೆಲವರು ಆಘಾತಕ್ಕೆ ಒಳಗಾದರೆ ಇನ್ನೂ ಕೆಲವರು ಇದು ಎಐ ಸೃಷ್ಟಿ ಅಥವಾ ಫೋಟೋಶಾಪ್ ಮಾಡಿದ್ದು ಎಂದಿದ್ದಾರೆ. ಇದನ್ನು ಇಂತಿಂಥ ತಂತ್ರಜ್ಞಾನದ ಮೂಲಕ ರಚಿಸಲಾಗಿದೆ ಎಂದು ಸ್ಕ್ರೀನ್​ ಶಾಟ್​ ಕೂಡ ಹಂಚಿಕೊಂಡಿದ್ದಾರೆ ಹಲವರು. ಸಾಕಷ್ಟು ಜನರಿಗೆ ಇದು ನಕಲಿ ಎನ್ನಿಸಿದರೂ ಹಾಸ್ಯಾಸ್ಯತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಾವಿನ ನಂತರ ತಮ್ಮ ಕುಟುಂಬದವರು ತಮ್ಮನ್ನು ಯಾವ ರೀತಿಯಲ್ಲೆಲ್ಲ ಸಂರಕ್ಷಿಸಬೇಕು ಎನ್ನುವುದನ್ನು ತಮಾಷೆಯಿಂದ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಸಂಭಾಷಣೆ ಈ ಪ್ರೇಮ ಸಂಭಾಷಣೆ; ಅಜ್ಜಅಜ್ಜಿಯ ಈ ವಿಡಿಯೋ ವೈರಲ್ 

ಅಂತರ್ಜಾಲದಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳ ಬಗ್ಗೆ ಹುಡುಕಾಟ ನಡೆಸಿದಾಗ ವಿಶುವಲ್ ಎಫೆಕ್ಟ್​ ಕಲಾವಿದ ಕೆಲ್ಲಿ ಪೋರ್ಟ್ (Kelly Port) ಅವರ ಟ್ವೀಟ್​ನ ಮರುಸೃಷ್ಟಿ ಎನ್ನುವುದು ತಿಳಿದು ಬಂದಿದೆ. ಜೂನ್ 18 ರಂದು ಕೆಲ್ಲಿ ಈ ಕೆಳಗಿನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಅಜ್ಜಿಯ ಬದಲಾಗಿ ಈ ಗಾಜಿನಚೌಕದಲ್ಲಿ ನಾಯಿಯನ್ನು ಕೂರಿಸಿದ್ಧಾರೆ. ಫಾದರ್ಸ್ ಡೇಗೆ ಇದು ಉತ್ತಮ ಉಡುಗೊರೆಯಾಗಿದೆ ಎಂಬ ಒಕ್ಕಣೆಯನ್ನು ಬರೆದಿದ್ದಾರೆ.

ಈ ಮೇಲಿನ ಟ್ವೀಟ್​ ಅನ್ನು 11ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ನಿಮ್ಮ ಕಲ್ಪನಾ ಶಕ್ತಿ ಅತ್ಯದ್ಭುತ ಎಂದು ನೆಟ್ಟಿಗರು ಅವರನ್ನು ಪ್ರಶಂಸಿಸುತ್ತಿದ್ದಾರೆ. ಓದುಗರೇ, ಈ ಎರಡೂ ಪೋಸ್ಟ್​ಗಳನ್ನು ನೋಡಿದ ಮೇಲೆ ನಿಮ್ಮ ತಲೆಯಲ್ಲೀಗ ಏನು ಓಡುತ್ತಿದೆ? ನಮ್ಮೊಂದಿಗೆ ಹಂಚಿಕೊಳ್ಳುವಿರಾ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:03 pm, Thu, 22 June 23