ಮೊದಲ ವಿಮಾನ ಪ್ರಯಾಣ; ಯುವಕನ ಖುಷಿಯನ್ನು ದುಪ್ಪಟ್ಟುಗೊಳಿಸುತ್ತಿರುವ ನೆಟ್ಟಿಗರು

|

Updated on: Feb 01, 2023 | 1:29 PM

First Flight Journey : ‘ನನಗೀಗ 27 ವರ್ಷ. ಇದು ನನ್ನ ಮೊದಲ ವಿಮಾನ ಪ್ರಯಾಣ. ನನ್ನ ಮಟ್ಟಿಗೆ ಇದು ಸಣ್ಣ ಗೆಲುವು. ಬಹಳ ಖುಷಿ ಅನ್ನಿಸುತ್ತಿದೆ.’

ಮೊದಲ ವಿಮಾನ ಪ್ರಯಾಣ; ಯುವಕನ ಖುಷಿಯನ್ನು ದುಪ್ಪಟ್ಟುಗೊಳಿಸುತ್ತಿರುವ ನೆಟ್ಟಿಗರು
ಪ್ರಾತಿನಿಧಿಕ ಚಿತ್ರ
Follow us on

Viral News : ಜೀವನದ ನಮ್ಮ ಅನೇಕ ಮೊದಲ ಸಲಗಳು ಎಂದಿಗೂ ಬೆಚ್ಚನೆಯ ನೆನಪುಗಳನ್ನು ತಂದುಕೊಡುತ್ತವೆ. ಆದರೆ ಆ ಮೊದಲನ್ನು ಸಾಧ್ಯವಾಗಿಸಿಕೊಳ್ಳುವಲ್ಲಿ ಅದರದೇ ಆದ ಕಷ್ಟಗಳು ಇರುತ್ತವೆ ನಿಜ. ಆದರೆ ಅಂದುಕೊಂಡಿದ್ದು ಈಡೇರುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಷ್ಟಗಳು ಮೋಡದಂತೆ ಕರಗಿ ಹೋಗುತ್ತವೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ಈ ಯುವಕ ಮೊದಲ ಸಲ ವಿಮಾನದಲ್ಲಿ ಪ್ರಯಾಣಿಸಿದ್ದಾನೆ. ಈ ವಿಷಯವನ್ನು ಈತ ಟ್ವೀಟ್ ಮಾಡಿ ಹಂಚಿಕೊಂಡಾಗ ನೆಟ್ಟಿಗರು ಅವನ ಖುಷಿಯನ್ನು ತಮ್ಮ ಖುಷಿಯೆಂಬಂತೆ ಸಂಭ್ರಮಿಸಿದ್ದಾರೆ.

‘ನನಗೀಗ 27 ವರ್ಷ. ನಾನು ಮೊದಲ ಸಲ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ. ನನ್ನ ಜೀವನದ ಸಣ್ಣ ಗೆಲುವು ಇದು. ತುಂಬಾ ಖುಷಿ ಆಗುತ್ತಿದೆ’ ಎಂದಿದ್ದಾರೆ ಈ ವ್ಯಕ್ತಿ. ಮೂರು ದಿನಗಳ ಹಿಂದೆ ಈ ಟ್ವೀಟ್ ಮಾಡಲಾಗಿದ್ದು ಸುಮಾರು 1.9 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. 46,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 2,000 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು

ನನಗೆ ನಿಮ್ಮ ಪರಿಚಯವಿಲ್ಲ. ಆದರೆ ನಿಮ್ಮ ಖುಷಿಯನ್ನು ನಾನು ಅನುಭವಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ನಿಮ್ಮ ಮೊದಲ ಪ್ರಯಾಣ ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ ಇನ್ನೂ ಒಬ್ಬರು. ನಿಮ್ಮ ಸಮಯವನ್ನು ಖುಷಿಯಿಂದ ಕಳೆಯಿರಿ ಎಂದಿದ್ದಾರೆ ಮತ್ತೂ ಒಬ್ಬರು. ನಾನು 25 ವರ್ಷದವನಿದ್ದೆ. ನಾನಾನ ನಮ್ಮ ಇಡೀ ಕುಟುಂಬದಲ್ಲಿಯೇ ವಿಮಾನ ಪ್ರಯಾಣ ಮಾಡಿದ ಮೊದ ವ್ಯಕ್ತಿಯಾಗಿದ್ದೆ. ನನ್ನ ಇಡೀ ಕುಟುಂಬ ನನ್ನ ಬಗ್ಗೆ ಸಾಕಷ್ಟು ಹೆಮ್ಮೆ ವ್ಯಕ್ತಪಡಿಸಿತ್ತು ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ಎಲ್ಲವನ್ನೂ ಮಾರಿದ! ದೊಡ್ಡ ವಾಟರ್ ಟ್ಯಾಂಕೊಂದನ್ನು ಐಷಾರಾಮಿ ಮನೆಯನ್ನಾಗಿಸಲು

ಸಣ್ಣಸಣ್ಣ ಹೆಜ್ಜೆಗಳೇ ಯಶಸ್ಸಿನ ಮೊತ್ತವನ್ನು ಹೆಚ್ಚಿಸುತ್ತವೆ. ಚಿಯರ್ಸ್​ ಬ್ರೋ ಎಂದಿದ್ದಾರೆ ಮಗದೊಬ್ಬರು. ನಿಮಗೆ ಬೇಕಾದದ್ದು ಎಂಥ ಸಣ್ಣದೇ ಆಗಿರಲಿ ಅದು ನಿಮಗೆ ಖುಷಿ ಕೊಡುವುದು ಮುಖ್ಯ. ಅದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಅದು ಖಂಡಿತ ದೊಡ್ಡ ಯಶಸ್ಸನ್ನೇ ಕೊಡುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:23 pm, Wed, 1 February 23