ಒಡಿಶಾದ ಗೋಲ್ಡನ್ ಬೀಚ್​ನ ಮನೋಹರ ದೃಶ್ಯಗಳು

Golden Beach : ಕಳೆದ ಮೂರು ವರ್ಷಗಳಿಂದ ಬ್ಲ್ಯೂ ಫ್ಲ್ಯಾಗ್ ಬೀಚ್ ಮಾನ್ಯತೆ ಪಡೆದ ಒಡಿಶಾದ ಗೋಲ್ಡನ್​ ಬೀಚ್​​ನ ರಮಣೀಯ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ.

ಒಡಿಶಾದ ಗೋಲ್ಡನ್ ಬೀಚ್​ನ ಮನೋಹರ ದೃಶ್ಯಗಳು
ಒಡಿಶಾದ ಗೋಲ್ಡನ್ ಬೀಚ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 14, 2023 | 10:18 AM

Viral News : ಬೀಚ್​ನಲ್ಲಿ ಆಹ್ಲಾದಕರ ಕ್ಷಣಗಳನ್ನು ಕಳೆಯಲು ಮನಸ್ಸು ಹಾತೊರೆಯುತ್ತದೆ ನಿಜ, ಆದರೆ ಅಲ್ಲಿರುವ ಪರಿಸರ ವಾತಾವರಣ ಶುಚಿಯಾಗಿರಬೇಕಷ್ಟೇ. ಭಾರತದಲ್ಲಿರುವ ಎಲ್ಲಾ ಬೀಚ್​​ಗಳು ಈ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಂಡಿವೆ ಎಂದು ಹೇಳಲಾಗದು. ಆದರೆ ಒಡಿಶಾದ ಪುರಿಯಲ್ಲಿರುವ ಗೋಲ್ಡನ್​ ಬೀಚ್ ಮಾತ್ರ ಈ ಪೈಕಿ ವಿಶೇಷ ಗಮನ ಸೆಳೆಯುತ್ತ ಬಂದಿದೆ. ಕಳೆದ ಮೂರು ವರ್ಷಗಳಿಂದ ಬ್ಲ್ಯೂ ಫ್ಲ್ಯಾಗ್​ ಬೀಚ್​ ಮಾನ್ಯತೆ ಪಡೆದಿದೆ ಎಂದು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.

ಪುರಿಯಲ್ಲಿರುವ ಈ ಗೋಲ್ಡನ್​ ಬೀಚ್​ನ ಸುಂದರವಾದ ಫೋಟೋಗಳನ್ನು ಗಮನಿಸಿ. ಡೆನ್ಮಾರ್ಕ್‌ನಲ್ಲಿರುವ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ (FEE) ನಿಂದ ಬ್ಲ್ಯೂ ಫ್ಲ್ಯಾಗ್ ಬೀಚ್​ ಮಾನ್ಯತೆಯನ್ನು ಪಡೆದ ಈ ಬೀಚ್​ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಪರಿಸರ ನಿರ್ವಹಣೆ, ಸಂರಕ್ಷಣೆ, ಸಮುದ್ರ ತೀರದಲ್ಲಿನ ಸುರಕ್ಷತೆ, ಸೇವೆ ಇತ್ಯಾದಿ 33 ಮಾನದಂಡಗಳನ್ನು ಅನುಸರಿಸಿದ್ದಕ್ಕಾಗಿ ಬ್ಲ್ಯೂ ಫ್ಲ್ಯಾಗ್​ ಮಾನ್ಯತೆಯನ್ನು ಈ ಬೀಚ್​ ಪಡೆದಿದೆ.

ಇದನ್ನೂ ಓದಿ : ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಎರಡು ದಿನಗಳ ಹಿಂದೆ ಈ ಪೋಸ್ಟ್​ ಟ್ವೀಟ್ ಮಾಡಿದ್ದಾರೆ ಸುಸಾಂತ. ಈತನಕ ಸುಮಾರು 18,000 ಜನರು ನೋಡಿದ್ದಾರೆ. 600 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಸಮುದ್ರ ತೀರದಲ್ಲಿ ಮರಳನ್ನು ಗುಡಿಸುತ್ತಾರಾ? ಎಂಥಾ ಅದ್ಭುತ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ಬೀಚ್​ನ ದೃಶ್ಯಗಳು ಬಹಳ ಸುಂದರವಾಗಿವೆ. ಮುಂದಿನ ರಜೆಗೆ ನಾನು ಪ್ಲ್ಯಾನ್ ಮಾಡುತ್ತೇನೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

ಯಾಕೆ ಇವರು ಬ್ಯಾಟರಿ ಆನ್ ಮಾಡಿದ್ದಾರೆ? ಮೊಟ್ಟೆಯಲ್ಲಿರುವ ಆಮೆಯ ಮರಿಗಳಿಗೆ ತೊಂದರೆ ಆಗುವುದಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಇಂಥ ಸ್ವಚ್ಛತೆಯನ್ನು ಭಾರತದ ಎಲ್ಲಾ ಬೀಚ್​ಗಳೂ ಅನುಸರಿಸಬೇಕು ಎಂದು ಅನೇಕರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:18 am, Tue, 14 February 23

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ