Viral News : ಹಿಮಕರಡಿಯು (Polar Bear) ಹೀಗೆ ಬಾಯಿಯಿಂದ ಬೆಂಕಿಯುಗುಳುತ್ತಿರುವ ಈ ಫೋಟೋ ಇದೀಗ ಮತ್ತೆ ವೈರಲ್ ಆಗಿದೆ. ಈ ಫೋಟೋ ಅನ್ನು 2015ರಲ್ಲಿ ತೆಗೆಯಲಾಗಿದೆ. ಹಿಮಕರಡಿಯು ಹೀಗೆ ನಿಂತುಕೊಂಡಿರುವಾಗ ಸೂರ್ಯೋದಯದ ಸಮಯ. ಆ ಹಿಂಬೆಳಕನ್ನು ಹೀಗೆ ಮಾಂತ್ರಿಕವಾಗಿ ಸೆರೆಹಿಡಿದಿದ್ದಾರೆ ಫೋಟೋಗ್ರಾಫರ್. ಆಗ ಅದು ಹಿಮಮಕರಡಿಯು ಬಾಯಿಯಿಂದ ಬೆಂಕಿ ಉಗಳುವಂತೆ ತೋರಿದೆ. ಈ ಫೋಟೋ ಅನ್ನು ಜೋಶ್ ಆ್ಯನನ್ ಎಂಬುವವರು ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಅನ್ನು ಮ್ಯಾಸಿಮೋ ಎಂಬ ಟ್ವಿಟರ್ ಖಾತೆದಾರರು ಹಂಚಿಕೊಂಡಿದ್ದಾರೆ.
Photographer Josh Anon captured the perfect moment in which the rising sun made this polar bear’s backlit breath look like fire
ಇದನ್ನೂ ಓದಿ[source: https://t.co/s57bDQDG6Z]
[author’s site: https://t.co/mVwkmY27X9] pic.twitter.com/DVaBDSelJo— Massimo (@Rainmaker1973) February 7, 2023
ಹಿಮದಿಂದ ಆವೃತವಾದ ಪ್ರದೇಶದಲ್ಲಿ ಹಿಮಕರಡಿ ನಿಂತಿದೆ. ತಿಳಿಕಿತ್ತಳೆ ಬಣ್ಣದ ಬೆಂಕಿಯನ್ನು ಇದು ಉಗಳುತ್ತಿದೆಯೆಂಬಂತೆ ಭಾಸವಾಗುತ್ತದೆ. ಈ ಫೋಟೋಗ್ರಾಫರ್ ಅವರ ತಾಳ್ಮೆ ಅದ್ಭುತ. ಅವರು ಅದೆಷ್ಟು ಗಂಟೆಗಳ ಕಾಲ ಕಾಯ್ದಿರಬಹುದು ಇಂಥ ಅಪರೂಪದ ಚಿತ್ರವನ್ನು ಸೆರೆಹಿಡಿಯಲು ಎಂದು ಒಬ್ಬರು ಹೇಳಿದ್ದಾರೆ. ಮಾಂತ್ರಿಕ ಕ್ಷಣಗಳನ್ನು ಹೀಗೆ ನಮಗೆ ತಲುಪಿಸಿದ ಫೋಟೋಗ್ರಾಫರ್ಗೆ ಧನ್ಯವಾದ ಎಂದು ಅನೇಕರು ಹೇಳಿದ್ದಾರೆ. ಓಹ್ ಹಿಮಕರಡಿ ರೂಪದ ಡ್ರ್ಯಾಗನ್ ಇದು? ಎಂದು ಅನೇಕರು ಕೇಳಿದ್ದಾರೆ.
ಇದನ್ನೂ ಓದಿ : 10 ಸೆಕೆಂಡಿನಲ್ಲಿ ಹಿಮಕರಡಿಯನ್ನು ಹುಡುಕಿರಿ
ಇದು ಬ್ಯಾಕ್ಲೈಟ್ನ ಕೈಚಳಕ ಅಲ್ಲ. ನಾನು ಹಿಮಕರಡಿಗಳೊಂದಿಗೆ ವಾಸಿಸುತ್ತಿದ್ದೇನೆ. ಪ್ರತಿ 447 ರಲ್ಲಿ ಒಂದು ಹಿಮಕರಡಿ ಪವಿತ್ರ ಬೆಂಕಿಯನ್ನು ಉಸಿರಾಡುತ್ತದೆ. ಅವುಗಳಿಗೆ ಅವುಗಳದೇ ಆದ ಶಕ್ತಿ ಇದೆ. ಅದನ್ನು ಫೋಟೋಗ್ರಾಫರ್ ತಂತ್ರವೆಂದು ಹೇಳಿ ಹಿಮಕರಡಿಗಳ ಸಾಮರ್ಥ್ಯವನ್ನು ಕುಂದಿಸಬೇಡಿ. ನಾನಂತೂ ಪವಿತ್ರ ಕರಡಿಯ ದರ್ಶನವಾಗಿದೆ ಎಂದೇ ಹೇಳುತ್ತೇನೆ. ಅರ್ಥವಾಯಿತೇ? ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್
ಸಾಮಾನ್ಯವಾಗಿ ಹಿಮರಕಡಿಗಳು ರಷ್ಯಾ, ನಾರ್ವೆ, ಕೆನಡಾ, ಅಲಾಸ್ಕಾ, ಗ್ರೀನ್ಲ್ಯಾಂಡ್ನ ಕಾಡುಗಳ ಹಿಮಪ್ರದೇಶಗಳಲ್ಲಿ ವಾಸವಾಗಿರುತ್ತವೆ. ಈತನಕ ಈ ಫೋಟೋ ಅನ್ನು 1.1 ಮಿಲಿಯನ್ ಜನರು ನೋಡಿದ್ದಾರೆ. 28,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. 3,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.
ಇಲ್ಲಿರುವುದು ಬ್ಯಾಕ್ಲೈಟ್ನ ತಂತ್ರವಷ್ಟೇ. ಬೇರೆ ಏನೂ ಇಲ್ಲ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:57 pm, Fri, 10 February 23